ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಇತ್ತೀಚೆಗೆ ನಡೆದ 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋ (GIIAS) ನಲ್ಲಿ ಹಲವಾರು ಆಕರ್ಷಕ ಮಾದರಿಗಳನ್ನು ಪರಿಚಯಿಸಲಾಗಿತ್ತು. ಹೊಂಡಾ ಕಂಪನಿಯು ಕೂಡ ಈ ಆಟೋ ಶೋನಲ್ಲಿ ತನ್ನ ಸಿಬಿ150ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿತು.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಇದೀಗ ಹೋಂಡಾ ಕಂಪನಿಯು ಸಿಬಿ150ಎಕ್ಸ್ ಅಡ್ವೆಂಚರ್ ಬೈಕ್ ಗಾಗಿ ಇಂಡೋನೇಷ್ಯಾದಲ್ಲಿ ಟಿವಿ ಜಾಹೀರಾತನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ, ಈ ಸಿಬಿ150ಎಕ್ಸ್ ಭಾರತ-ನಿರ್ಮಿತ ಹೋಂಡಾ ಸಿಬಿ200ಎಕ್ಸ್ ಮಾದರಿಯ ಕಿರಿಯ ಸಹೋದರ ಮಾದರಿ ಎಂದು ಹೇಳಬಹುದು. ಇನ್ನು ಸಿಬಿ200ಎಕ್ಸ್ ನಂತೆಯೇ, ಹೊಸ ಸಿಬಿ150ಎಕ್ಸ್ ಅದರ ನೇಕೆಡ್ ಸ್ಟ್ರೀಟ್‌ಫೈಟರ್ ಕೌಂಟರ್‌ಪಾರ್ಟ್ ಅನ್ನು ಆಧರಿಸಿದೆ, ಈ ಹೊಸ ಹೋಂಡಾ ಸಿಬಿ150ಎಕ್ಸ್ ಬೈಕ್ ಹೆಚ್ಚು ಟೂರರ್ ಬೈಕ್ ಆಗಿದ್ದು, ಸೆಮಿ-ಫೇರ್ಡ್ ಬಾಡಿ ಮುಂಚೂಣಿಯಲ್ಲಿದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಹೋಂಡಾ ಸಿಬಿ150ಎಕ್ಸ್ ಬೈಕ್ ರೀತಿಯಲ್ಲಿ ಯಾವುದೇ ಆಫ್-ರೋಡಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸಲು ಯಾವುದೇ ಪ್ರಮುಖ ಯಾಂತ್ರಿಕ ಫೀಚರ್ಸ್ ಗಳನ್ನು ಹೊಂದಿರದ ಅಡ್ವೆಂಚರ್ ಬೈಕ್ ಆಗಿದೆ. ಇದು ಜಪಾನಿನ ಬೈಕ್‌ಮೇಕರ್‌ನಿಂದ ಅಡ್ವೆಂಚರ್ ಗಳ ಎಕ್ಸ್ ಸಾಲಿನ ಅದೇ ವಿನ್ಯಾಸ ಶೈಲಿಯನ್ನು ಪ್ರದರ್ಶಿಸುತ್ತದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಆದ್ದರಿಂದ, ಇದು ಸಿಗ್ನೇಚರ್ ಅಡ್ವೆಂಚರ್ ಶೈಲಿಯ ಮುಂಭಾಗದ ಬೀಕ್ ಅನ್ನು ಪಡೆಯುತ್ತದೆ ಜೊತೆಗೆ ಉದ್ದವಾದ ಹೊದಿಕೆಗಳು ಮತ್ತು ಸಣ್ಣ ವಿಂಡ್‌ಸ್ಕ್ರೀನ್‌ನೊಂದಿಗೆ ಸ್ಕಪಲಡಡ್ ಫ್ಯೂಯಲ್ ಟ್ಯಾಂಕ್ ಅನ್ನು ಪಡೆಯುತ್ತದೆ. ಎಂಜಿನ್ ಸುರಕ್ಷತೆಗಾಗಿ ಬ್ಯಾಷ್ ಪ್ಲೇಟ್‌ನೊಂದಿಗೆ ಸಹ ನೀಡಿದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಈ ಹೋಂಡಾ ಸಿಬಿ150ಎಕ್ಸ್ ಬೈಕಿನ ನೇರ ರೇಖೆಯ ಹ್ಯಾಂಡಲ್‌ಬಾರ್ ಮತ್ತು ಸೆಂಟರ್-ಸೆಟ್ ಫುಟ್‌ಪೆಗ್‌ಗಳು ಆರಾಮದಾಯಕ ರೈಡಿಂಗ್ ಏರೋಗಾಮಿಕ್ಸ್'ಗೆ ಕಾರಣವಾಗುತ್ತದೆ. ಹೀಗಾಗಿ ಅದರ ಟೂರಿಂಗ್ ಡಿಎನ್‌ಎಯನ್ನು ಅಳವಡಿಸಿಕೊಳ್ಳುತ್ತದೆ. ಇತರ ಸ್ಟೈಲಿಂಗ್ ಮುಖ್ಯಾಂಶಗಳಲ್ಲಿ ಎತ್ತರದ ವಿಂಡ್‌ಸ್ಕ್ರೀನ್, ಸಿಂಗಲ್-ಪೀಸ್ ಸ್ಯಾಡಲ್, ರೇಕ್ಡ್-ಅಪ್ ಟೈಲ್ ವಿಭಾಗ, ಅಪ್‌ಸ್ವೆಪ್ಟ್ ಸೈಡ್-ಆನ್ ಎಕ್ಸಾಸ್ಟ್ ಮತ್ತು ಬೀಫಿ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಹೋಂಡಾ ಇನ್ನೂ ಸಿಬಿ150ಎಕ್ಸ್ ಬೈಕಿನಲ್ಲಿ 149 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿಜ್ 16.5 ಬಿಹೆಚ್‍ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗುತ್ತದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಹೊಸ ಹೋಂಡಾ ಸಿಬಿ150ಎಕ್ಸ್ ಬೈಕ್ ಎಂಜಿನ್ ಅನ್ನು ಟ್ಯೂನಿಂಗ್ ಮಾಡಿ ಪವರ್ ಅನ್ನು ಹೆಚ್ಚಿಸಬಹುದು. ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ 150 ಎಂಎಂ ಟ್ರ್ಯಾವೆಲ್ ನೊಂದಿಗೆ ಮುಂಭಾಗದಲ್ಲಿ 37 ಎಂಎಂ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಗಳನ್ನು ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಎಬಿಎಸ್ ಅನ್ನು ಕೂಡ ನೀಡಲಾಗಿದೆ, ಇಂಡೋನೇಷ್ಯಾದಲ್ಲಿ ಹೋಂಡಾ ಸಿಬಿ150ಎಕ್ಸ್ ಬೈಕ್ ಬೆಲೆಯು RP 32 ಮಿಲಿಯನ್ ಆಗಿದು. ಇದು ಭಾರತದ ಕರೆನ್ಸಿಯನ್ಸಿಯಲ್ಲಿ ಅಂದಾಜು ರೂ.1.67 ಲಕ್ಷವಾಗುತ್ತದೆ,

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಹೋಂಡಾ ಟೂ ವ್ಹೀಲರ್ಸ್ ಇಂಡಿಯಾ ಕಂಪನಿಯು ತನ್ನ ಹೊಸ ಸಿಬಿ200ಎಕ್ಸ್ ಅಡ್ವೆಂಚರ್ ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಸಿಬಿ200ಎಕ್ಸ್ ಬೈಕ್ ಅಡ್ವಂಚರ್-ಟೂರರ್ ವಿಭಾಗದಲ್ಲಿ ಇರಿಸಲಾಗಿದೆ. ಈ ಬೈಕಿನಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ನೀಡಿದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಈ ಬೈಕಿನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಕೆಲವು ಫೀಚರ್ಸ್ ಗಳನ್ನು ನೀಡಲಾಗಿದೆ. ಹೊಸ ಹೋಂಡಾ ಸಿಬಿ200ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ನಕಲ್ ಗಾರ್ಡ್‌ಗಳು, ಸ್ಪ್ಲಿಟ್-ಸೀಟ್‌ಗಳು ಮತ್ತು ಹಝರ್ಡ್ ಲೈಟ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಇನ್ನು ಈ ಹೋಂಡಾ ಅಡ್ವೆಂಚರ್ ಬೈಕಿನ ಎರೋಗಾನಾಮಿಕ್ ಇಗ್ನಿಷನ್ ಕೀಯನ್ನು ಟ್ಯಾಂಕ್ ಮೇಲೆ ಇರಿಸಲಾಗಿದೆ. ಈ ಹೋಂಡಾ ಸಿಬಿ200ಎಕ್ಸ್ ಬೈಕಿನಲ್ಲಿ ಎಂಜಿನ್ ಅನ್ನು ಹಾರ್ನೆಟ್ 2.0 ನಿಂದ ಎರವಲು ಪಡೆಯಲಾಗಿದೆ. ಈ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 17 ಬಿಹೆಚ್‍ಪಿ ಪವರ್ ಮತ್ತು 16 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಇದರೊಂದಿಗೆ ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳ ವಿಷಯದಲ್ಲಿ, CB200X ಕೇವಲ ಡ್ಯುಯಲ್-ಚಾನೆಲ್ ABS ಅನ್ನು ಹೊಂದಿದೆ. ಇನ್ನು ಈ ಅಡ್ವೆಂಚರ್ ಬೈಕಿನಲ್ಲಿ ಡೈಮೆಂಡ್ ಟೈಪ್ ಫ್ರೇಮ್ ಅನ್ನು ಒಳಗೊಂಡಿದೆ. ಇದು ಈ ಅಡ್ವೆಂಚರ್ ಬೈಕನ್ನು ಉತ್ತಮ ನಿಯಂತ್ರಣ ಮತ್ತು ಕಾರ್ನರ್ ಗಳಲ್ಲಿ ಉತ್ತಮ ನಿಯಂತ್ರಣದಲ್ಲಿ ಸಾಗಲು ಸಹಕಾರಿಯಾಗಿರುತ್ತದೆ. ಇನ್ನು ಹೋಂಡಾ ಸಿಬಿ200ಎಕ್ಸ್ ಬೈಕಿನಲ್ಲಿ ಎಂಜಿನ್ ಕೌಲ್ ಮತ್ತು ಡ್ಯುಯಲ್ ಪರ್ಪಸ್ ಟೈರ್‌ಗಳನ್ನು ಹೊಂದಿದೆ ಮತ್ತು ಹಾರ್ನೆಟ್ 2.0 ಯಿಂದ ಬಹುತೇಕ ಸಮತಟ್ಟಾದ ಹ್ಯಾಂಡಲ್‌ಬಾರ್ ಸೆಟಪ್‌ಗಿಂತ ಭಿನ್ನವಾಗಿ, ಹೋಂಡಾ CB200X ನೇರವಾದ ಹ್ಯಾಂಡಲ್‌ಬಾರ್ ಸೆಟಪ್ ಅನ್ನು ಹೊಂದಿದೆ. ಇದು ಆನ್ ಮತ್ತು ಆಫ್ ರೋಡಿಂಗ್‌ಗೆ ಸಹಾಯ ಮಾಡುತ್ತದೆ.

ಹೊಸ Honda CB150X ಅಡ್ವೆಂಚರ್ ಬೈಕ್ ಹೊಸ ಟಿವಿಸಿ ಬಿಡುಗಡೆ

ಹೋಂಡಾ ಎಂಟ್ರಿ ಲೆವೆಲ್ ಅಡ್ವೆಂಚರ್-ಟೂರರ್ ಸಿಬಿ200ಎಕ್ಸ್ ಬೈಕಿಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಯಾಕೆಂದರೆ ಇತರ ಅಡ್ವೆಂಚರ್ ಬೈಕ್ ಗಳು ಹೆಚ್ಚಿನ ಸಿಸಿ ಮಾದರಿಗಳಾಗಿವೆ.ಆದರೆ ಹೋಂಡಾ ಸಿಬಿ200ಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ Xpulse 200T ಬೈಕಿಗೆ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡುತ್ತದೆ. ಇನ್ನು ಮುಂದಿನ ವರ್ಷಗಳಲ್ಲಿ ಹೊಸ ಹೋಂಡಾ ಸಿಬಿ150ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

Article Published On: Monday, December 13, 2021, 12:42 [IST]
English summary
Honda cb150x adventure motorcycle first official tvc revealed details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+