ಭಾರತದಲ್ಲಿ ಬಿಡುಗಡೆಯಾದ ಹೋಂಡಾ ಹೈನೆಸ್ ಸಿಬಿ350 ಆ್ಯನಿವರ್ಸರಿ ಎಡಿಷನ್ ವಿಡಿಯೋ
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು 2021ರ ಬೈಕ್ ವೀಕ್(India Bike Week) ನಲ್ಲಿ ತನ್ನ ಜನಪ್ರಿಯ ಕ್ಲಾಸಿಕ್ ಬೈಕ್ ಮಾದರಿಯಾದ ಹೈನೆಸ್ ಸಿಬಿ350 ಮಾದರಿಯ ಆ್ಯನಿವರ್ಸರಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 2.03 ಲಕ್ಷ ಬೆಲೆ ಹೊಂದಿದೆ.
ಹೈನೆಸ್ ಸಿಬಿ350 ಆ್ಯನಿವರ್ಸರಿ ಮಾದರಿಯನ್ನು ಹೋಂಡಾ ಕಂಪನಿಯು ಮೊದಲ ಸಂಭ್ರಮಕ್ಕಾಗಿ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಪರ್ಲ್ ಇಗ್ನಿಯಸ್ ಬ್ಲಾಕ್ ಮತ್ತು ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಸ್ಟ್ಯಾಂಡರ್ಡ್ ಹೈನೆಸ್ ಸಿಬಿ350 ಮಾದರಿಗಿಂತಲೂ ಆ್ಯನಿವರ್ಸರಿ ಎಡಿಷನ್ ಬೆಲೆ ರೂ. 4 ಸಾವಿರದಷ್ಟು ಹೆಚ್ಚಳವಾಗಿದ್ದು, ವಿವಿಧ ಬಣ್ಣದ ಆಯ್ಕೆಗಳೊಂದಿಗೆ ಸಿಂಕ್ರೊನೈಸ್ ಮಾಡಲಾದ ಕ್ರೋಮ್ ಹ್ಯಾಂಡಲ್ ಹೊಸ ಬೈಕ್ ಆಕರ್ಷಣೆಗೆ ಕಾರಣವಾಗಿದೆ.
ಹೈನೆಸ್ ಸಿಬಿ350 ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ನಂತರ ಇದುವರೆಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಕ್ಲಾಸಿಕ್ 350 ಮತ್ತು ಬೆನೆಲ್ಲಿ ನಿರ್ಮಾಣದ ಇಂಪಿರಿಯಲ್ 400 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಿದೆ.

ಹೊಸ ಬೈಕ್ ಮಾದರಿಯು ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸುತ್ತದೆ. ಹೊಸ ಬೈಕಿನಲ್ಲಿ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications