ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಚ್ಟ ಹೊಸ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾದರಿಗಳೊಂದಿಗೆ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಬೈಕ್ ಮಾರಾಟ ಆರಂಭಿಸಿದ ಕೆಲವೇ ತಿಂಗಳಿನಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

2020ರ ಅಕ್ಬೋಬರ್ ಮಧ್ಯಂತರದಲ್ಲಿ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದ ಹೋಂಡಾ ಕಂಪನಿಯು ಇದುವರೆಗೆ 30 ಸಾವಿರ ಯುನಿಟ್ ವಿತರಣೆ ಮಾಡಿದ್ದು, ಕ್ಲಾಸಿಕ್ ಮತ್ತು ಕೆಫೆ ರೇಸರ್ ಶೈಲಿಯ ಬೈಕ್ ಮಾರಾಟದಲ್ಲಿ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೊಸ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾದರಿಗಳು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಕ್ಲಾಸಿಕ್ 350, ಬೆನೆಲ್ಲಿ ಇಂಪೀರಿಯಲ್ 400 ಮತ್ತು ಜಾವಾ ಕ್ಲಾಸಿಕ್ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೈನೆಸ್ ಸಿಬಿ350 ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಡಿಲಕ್ಸ್ ಮಾದರಿಯ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,94,739 ಮತ್ತು ಡಿಲಕ್ಸ್ ಪ್ರೋ ಮಾದರಿಯು ರೂ. 1,99,739 ಬೆಲೆ ಹೊಂದಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹಾಗೆಯೇ ಕೆಫೆ ರೇಸರ್ ಬೈಕ್ ಮಾದರಿಯಾದ ಸಿಬಿ350ಆರ್‌ಎಸ್ ಗ್ರಾಹಕರ ಬೇಡಿಕೆಯೆಂತೆ ಸಿಂಗಲ್ ಟೋನ್ ಮತ್ತು ಡ್ಯುಯಲ್ ಟೋನ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಸಿಂಗಲ್ ಟೋನ್ ಮಾದರಿಯು ಬೆಂಗಳೂರಿನಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.1,99,739 ಮತ್ತು ಡ್ಯುಯಲ್ ಟೋನ್ ಮಾದರಿಯು ರೂ. 2,00,368 ಬೆಲೆ ಹೊಂದಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 30 ಸಾವಿರ ಯುನಿಟ್ ಮಾರಾಟ ಗುರಿ ಸಾಧಿಸಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಎರಡು ಮಾದರಿಗಳಲ್ಲೂ ಹೋಂಡಾ ಕಂಪನಿಯು 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಿಸಿದ್ದು, 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೊಸ ಬೈಕ್‌ಗಳಲ್ಲಿ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದ್ದು, ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದ್ದು, ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಈ ಬೈಕಿನಲ್ಲಿ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೊಸ ಹೋಂಡಾ ಸಿಬಿ350 ಆರ್‌ಎಸ್ ಬೈಕ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಚಾಸಿಸ್ ಅನ್ನು ಆಧರಿಸಿದೆ. ಇನ್ನು ಇದರ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್--ಹೈಡ್ರಾಲಿಕ್ ಅನ್ನು ಪಡೆಯುತ್ತದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 310ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದರೆ, ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿಗೆ ಎಬಿಎಸ್(ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಇನ್ನು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಸಾಧಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಸಾಮಾನ್ಯ ದ್ವಿಚಕ್ರಗಳ ಮಾರಾಟದ ಜೊತೆಗೆ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲೂ ಸಹ ಮುಂಚೂಣಿ ಸಾಧಿಸುತ್ತಿದ್ದು, ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟಕ್ಕಾಗಿ ಪ್ರತ್ಯೇಕ ಶೋರೂಂಗಳ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಎರಡು ಮಾದರಿಯ ಬೈಕ್ ಮಾರಾಟ ಮಳಿಗೆಗಳ ಸೌಲಭ್ಯ ಹೊಂದಿದ್ದು, 350 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಸಾಮಾನ್ಯ ಬೈಕ್ ಶೋರೂಂಗಳಲ್ಲಿ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಶೋರೂಂಗಳ ಮೂಲಕ ಮಾರಾಟಗೊಳಿಸುತ್ತಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೋಂಡಾ ಸಾಮಾನ್ಯ ಶೋರೂಂ ಈಗಾಗಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಜಾಲ ಹೊಂದಿದ್ದು, ಬಿಗ್‌ವಿಂಗ್ ಮಾರಾಟ ಮಳಿಗೆಗಳನ್ನು ಸಹ ಗ್ರಾಹಕರ ಬೇಡಿಕೆಯೆಂತೆ ಹೆಚ್ಚಿಸಲಾಗುತ್ತಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೈನೆಸ್ ಸಿಬಿ 350 ಕ್ಲಾಸಿಕ್ ಬೈಕ್ ಬಿಡುಗಡೆಯೊಂದಿಗೆ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇತ್ತೀಚೆಗೆ ದೆಹಲಿಯ ಕಾಂತಿ ನಗರದಲ್ಲಿ ಹೊಸ ಬಿಗ್‌ವಿಂಗ್ ಶೋರೂಂಗೆ ಚಾಲನೆ ನೀಡಿದ್ದು, ದಕ್ಷಿಣ ಭಾರತದಲ್ಲೂ ಬಿಂಗ್‌ವಿಂಗ್ ಶೋರೂಂಗಳ ಸಂಖ್ಯೆ ಹೆಚ್ಚುತ್ತಿದೆ.

ಹೈನೆಸ್ ಸಿಬಿ350 ಮತ್ತು ಸಿಬಿ350ಆರ್‌ಎಸ್ ಬೈಕ್ ಮಾರಾಟದಲ್ಲಿ ಹೋಂಡಾ ಬಿಗ್‌ವಿಂಗ್ ಹೊಸ ಮೈಲಿಗಲ್ಲು

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲೂ ಎರಡು ಮಾದರಿಯ ಮಾರಾಟ ಸೌಲಭ್ಯಗಳನ್ನು ಪರಿಚಯಿಸಿದ್ದು, ಬಿಗ್‌ವಿಂಗ್ ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ 350 ಸಿಸಿಯಿಂದ 500 ಸಿಸಿ ಬೈಕ್ ಮಾದರಿಗಳನ್ನು ಮತ್ತು ಬಿಗ್‌ವಿಂಗ್ ಟಾಪ್‌ಲೈನ್ ಮಾರಾಟ ಮಳಿಗೆಗಳಲ್ಲಿ 350 ಸಿಸಿ ಯಿಂದ 1800 ಸಿಸಿ ಸಾಮಾರ್ಥ್ಯದ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Article Published On: Thursday, November 18, 2021, 8:45 [IST]
English summary
Honda cb350 models sales crossed 30000 units in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+