ವಿಡಿಯೋ: ಹೋಂಡಾ ಸಿಬಿ350 ಆರ್‌ಎಸ್ ಪರ್ಫಾಮೆನ್ಸ್ ರಿವ್ಯೂ
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಪ್ರೀಮಿಯಂ ಬೈಕ್ ಮಾರಾಟವನ್ನು ಹೆಚ್ಚಿಸುತ್ತಿದ್ದು, ಹೊಸ ಸಿಬಿ350 ಆರ್‌ಎಸ್ ಬೈಕ್ ಮಾದರಿಯ ಮೂಲಕ 350ಸಿಸಿ ಬೈಕ್ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಸಿಬಿ350 ಆರ್‌ಎಸ್ ಮಾದರಿಯು ಬಿಡುಗಡೆಯ ನಂತರ ಇದುವರೆಗೆ ಸಾವಿರಾರು ಯುನಿಟ್‌ಗಳು ಮಾರಾಟಗೊಂಡಿದ್ದು, ಹೊಸ ಬೈಕ್ ಕಾರ್ಯಕ್ಷಮತೆ ಕುರಿತಂತೆ ಡ್ರೈವ್‌ಸ್ಪಾರ್ಕ್ ತಂಡವು ರೋಡ್ ಟೆಸ್ಟ್ ಕೈಗೊಂಡಿತ್ತು.
ಹೊಚ್ಚ ಹೊಸ ಸಿಬಿ350 ಆರ್‌ಎಸ್ ಬೈಕ್ ಮಾದರಿಯು ಹೋಂಡಾ ಮೋಟಾರ್‌ಸೈಕಲ್ ಕಂಪನಿಯ 350ಸಿಸಿ ಸಾಮಾರ್ಥ್ಯದ ಎರಡನೇ ಮೋಟಾರ್‌ಸೈಕಲ್ ಮಾದರಿಯಾಗಿದ್ದು, ಈ ಬೈಕ್ ಮಾದರಿಯು ಹೈನೆಸ್ ಸಿಬಿ350 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿದೆ. ಹೊಸ ಮೋಟಾರ್‌ಸೈಕಲ್ ಮಾದರಿಯು ರೆಟ್ರೊ-ರೋಡ್‌ಸ್ಟರ್ ವಿನ್ಯಾಸದೊಂದಿಗೆ ಹೈನೆಸ್ ಸಿಬಿ350 ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.
ಆದಾಗ್ಯೂ ಹೊಸ ಬೈಕಿನಲ್ಲಿ ಕೆಲವು ಸುಧಾರಿತ ತಂತ್ರಜ್ಞಾನ ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಹೊಸ ಬೈಕ್ ಮಾದರಿಗಳ ಮೂಲಕ ಹೋಂಡಾ ಕಂಪನಿಯು ರಾಯಲ್ ಎನ್‌ಫೀಲ್ಡ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.
ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಸಿಬಿ350ಆರ್‌ಎಸ್ ಮಾದರಿಯು ಹೈನೆಸ್ ಸಿಬಿ350 ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದು, 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಮೂಲಕ 20 ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಹೊಸ ಹೋಂಡಾ ಸಿಬಿ350 ಆರ್‌ಎಸ್ ಬೈಕ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಚಾಸಿಸ್ ಅನ್ನು ಆಧರಿಸಿದ್ದು, ಈ ಬೈಕ್ ಮಾದರಿಯು ಹೋಂಡಾ ಪ್ರೀಮಿಯಂ ಬೈಕ್ ಮಾರಾಟ ಮಳಿಗೆಯಾದ ಬಿಗ್‌ವಿಂಗ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ. ಹೊಸ ಬೈಕ್ ಮಾದರಿಯ ಸಿಂಗಲ್ ಟೋನ್ ಮಾದರಿಯು ನಮ್ಮ ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ. 2.51 ಲಕ್ಷ ಮತ್ತು ಡ್ಯುಯಲ್ ಟೋನ್ ಮಾದರಿಯು ರೂ. 2.52 ಲಕ್ಷ ಬೆಲೆ ಹೊಂದಿದೆ.


Click it and Unblock the Notifications