2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಎರಡು ಹೊಸ ಪ್ರೀಮಿಯಂ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳಾಗಿವೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಹೋಂಡಾ ಟೂ ವೀಲರ್ಸ್ ಕಂಪನಿಯು ತನ್ನ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆಯನ್ನು ಬಿಗ್‌ವಿಂಗ್ ಟಾಪ್‌ಲೈನ್ ಶೋ ರೂಮ್‌ಗಲ್ಲಿ ಪ್ರಾರಂಭಿಸಿದೆ. ಇನ್ನು ಈ ಎರಡು ಪ್ರೀಮಿಯಂ ಬೈಕ್‌ಗಳ ಬೆಲೆ ಬಗ್ಗೆ ಹೇಳುವುದಾದರೆ. ಇದರಲ್ಲಿ 2021ರ ಹೋಂಡಾ ಸಿಬಿಆರ್650ಆರ್ ಬೈಕಿನ ಬೆಲೆಯು ರೂ.8.88 ಲಕ್ಷಗಳಾದರೆ, ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್ ಬೆಲೆಯು ರೂ.8.67 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಗುರುಗ್ರಾಮ್ ಎಕ್ಸ್ ಶೋರೂಂ ಪ್ರಕಾರವಾಗಿದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಈ ಎರಡು ಪ್ರೀಮಿಯಂ ಬೈಕ್‌ಗಳು ಪರಸ್ಪರ ಯಾಂತ್ರಿಕತೆಯನ್ನು ಹಂಚಿಕೊಳ್ಳುತ್ತವೆ. ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳು ಕ್ಯಾಂಡಿ ಕ್ರೋಮೋಸ್ಫಿಯರ್ ರೆಡ್ ಮತ್ತು ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಇನ್ನು ಸಿಬಿ650ಆರ್ ಅನ್ನು ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್‌ನಲ್ಲಿ ನೀಡಲಾಗುತ್ತದೆ. ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳು ನವೀಕರಿಸಿದ ಎಂಜಿನ್ ಅನ್ನು ಒಳಗೊಂಡಿರುತ್ತವೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಇತ್ತೀಚಿನ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಪೂರೈಸಲು ಇನ್-ಲೈನ್ ನಾಲ್ಕು-ಸಿಲಿಂಡರ್ 649 ಸಿಸಿ ಎಂಜಿನ್ ಅನ್ನು ನವೀಕರಿಸಲಾಗಿದೆ. ಈ ಎಂಜಿನ್ 12,000 ಆರ್‌ಪಿಎಂನಲ್ಲಿ 86 ಬಿಹೆಚ್‌ಪಿ ಮತ್ತು 8,500 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ 57.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಸಿಬಿಆರ್650ಆರ್ ಮತ್ತು ಸಿಬಿ650ಆರ್ ಬೈಕ್‌ಗಳು ಸೈಡ್-ಸ್ವಿಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದ್ದು, ಇದು ಬೈಕ್‌ಗಳ ಒಟ್ಟಾರೆ ಲುಕ್ ಅನ್ನು ಹೆಚ್ಚಿಸುತ್ತದೆ. ಈ ಬೈಕ್‌ಗಳಲ್ಲಿ ಒಂದೇ ರೀತಿಯ ಚಾಸಿಸ್, ಸಸ್ಪೆಂಕ್ಷನ್ ಮತ್ತು ಬ್ರೇಕ್‌ಗಳ ಸೆಟಪ್ ಅನ್ನು ಬಳಿಸಿದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಈ ಹೊಸ ಹೋಂಡಾ ಪ್ರೀಮಿಯಂ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಶೋವಾ ಸೆಪರೇಟ್ ಫಂಕ್ಷನ್-ಬಿಗ್ ಪಿಸ್ಟನ್ (ಎಸ್‌ಎಸ್‌ಎಫ್-ಬಿಪಿ) ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಇನ್ನು ಈ ಪ್ರೀಮಿಯಂ ಬೈಕ್‌ಗಳಲ್ಲಿ ಬ್ರೇಕಿಂಗ್ ಅನ್ನು ಡ್ಯುಯಲ್ 310 ಎಂಎಂ ರೋಟರ್‌ಗಳ ಮೂಲಕ ನಾಲ್ಕು ಪಿಸ್ಟನ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಮುಂಭಾಗದಲ್ಲಿ ಒಂದೇ 240 ಎಂಎಂ ರೋಟರ್ ಸಿಸ್ಟಂ ಅನ್ನು ಹೊಂದಿದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಇನ್ನು ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ಬೈಕ್‌ಗಳಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ಏಡ್ಸ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, (ಎಚ್ಐಎಸ್ಎಸ್) ಹೋಂಡಾ ಇಗ್ನಿಷನ್ ಸೆಕ್ಯುರಿಟಿ ಸಿಸ್ಟಂ ಮತ್ತು (ಎಚ್ಎಸ್ಟಿಸಿ) ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಅನ್ನು ಒಳಗೊಂಡಿದೆ.

2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳ ವಿತರಣೆ ಆರಂಭ

ಇನ್ನು ಎಡ ಹ್ಯಾಂಡಲ್‌ಬಾರ್‌ನಲ್ಲಿರುವ ಸ್ವಿಚ್ ಮೂಲಕ ಟಾರ್ಕ್ ನಿಯಂತ್ರಣವನ್ನು (ಟಿಸಿ) ಆನ್ ಅಥವಾ ಆಫ್ ಮಾಡಲು ರೈಡರ್ ಆಯ್ಕೆ ಮಾಡಬಹುದು. ಎರಡು ಬೈಕ್‌ಗಳಲ್ಲಿ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಒಂದೇ ಆಗಿರುತ್ತದೆ. ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಗೇರ್ ಪೋಷಿಸನ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಬಾರ್-ಗ್ರಾಫ್ ಟ್ಯಾಕೋಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ಡಿಜಿಟಲ್ ಫ್ಯೂಯಲ್ ಗೇಜ್ ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ.

Most Read Articles

Kannada
English summary
Honda Starts Deliveries Of New CBR650R, CB650R Bikes. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X