ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ತನ್ನ ಐಷಾರಾಮಿ ಬಿಎಸ್6 ಗೋಲ್ಡ್ ವಿಂಗ್ ಟೂರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೊಸ ಹೋಂಡಾ ಗೋಲ್ಡ್ ವಿಂಗ್ ಜಾಗತಿಕವಾಗಿ ಜನಪ್ರಿಯ ಐಷಾರಾಮಿ ಬೈಕ್‌ಗಳಲ್ಲಿ ಒಂದಾಗಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಈ ಐಷಾರಾಮಿ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ಕೇವಲ 24 ಗಂಟೆಯೊಳಗೆ ಸೋಲ್ಡ್ ಔಟ್ ಆಗಿತ್ತು, ಇದೀಗ ಹೋಂಡಾ ಮೋಟರ್ ಸೈಕಲ್ ಕಂಪನಿಯು ಈ ಗೋಲ್ಡ್ ವಿಂಗ್ ಟೂರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಇನ್ನು ಈ ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.37.20 ಲಕ್ಷಗಳಾಗಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಹೋಂಡಾ ಗೋಲ್ಡ್ ವಿಂಗ್ ಬೈಕ್ ಟೂರ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್-ಅಪ್ ಯುನಿಟ್(ಸಿಬಿಯು) ಆಗಿ ತರಲಾಗಿದೆ. ಈ ಬೈಕನ್ನು ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗಿದೆ. ಇನ್ನು 2021ರ ಹೋಂಡಾ ಗೋಲ್ಡ್ ವಿಂಗ್ ಬೈಕನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಕೆಲವು ಸಣ್ಣ ಬದಲಾವಣೆಗಳಿವೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಹೋಂಡಾ ಗೋಲ್ಡ್ ವಿಂಗ್ ಜಗತ್ತಿನಾದ್ಯಂತ ಲಭ್ಯವಿರುವ ಐಕಾನಿಕ್ ಬೈಕ್ ಗಳಲ್ಲಿ ಒಂದಾಗಿದೆ. ಹೊಸ ಬೈಕಿನಲ್ಲಿ ಎದ್ದು ಕಾಣುವ ವೈಶಿಷ್ಟ್ಯವೆಂದರೆ ಇದರ 1695 ಎಂಎಂ ಲಾಂಗ್-ವೀಲ್‌ಬೇಸ್. ಡ್ಯುಯಲ್-ಪಾಡ್ ಹೆಡ್‌ಲ್ಯಾಂಪ್‌ಗಳೊಂದಿಗೆ ಅದರ ಡಿಸ್ಕ್ಟಿಕ್ಟಿವ್ ಫ್ರಂಟ್-ಎಂಡ್ ಸ್ಟೈಲಿಂಗ್ ಆಗಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಈ ಬೈಕಿನಲ್ಲಿ 1,833 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 125 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಬಹಳಷ್ಟು ಪ್ರೀಮಿಯಂ ಫೀಚರ್ಸ್ ಗಳನ್ನು ಸಹ ಹೊಂದಿದೆ. ಇದರಲ್ಲಿ 7.0-ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಕೂಡ ಹೊಂದಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಇದರೊಂದಿಗೆ ಗೈರೊಕಾಂಪಾಸ್ ನ್ಯಾವಿಗೇಷನ್, ಸ್ಮಾರ್ಟ್ ಕೀ, ಎಲೆಕ್ಟ್ರಾನಿಕ್-ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಹಿಲ್ ಸ್ಟಾರ್ಟ್ ಅಸಿಸ್ಟ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ (ಡಿಸಿಟಿ ಮಾತ್ರ) ಮತ್ತು ಆಲ್-ಎಲ್ಇಡಿ ಲೈಟಿಂಗ್ ಅನ್ನು ಕೂಡ ಒಳಗೊಂಡಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಈ ಗೋಲ್ಡ್ ವಿಂಗ್ ಟೂರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬಲ್-ವಿಷ್ಬೋನ್ ಯುನಿಟ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಸೆಟಪ್ ಅನ್ನು ಹೊಂದಿದೆ. ಇದನ್ನು ಎಲೆಕ್ಟ್ರಿಕ್ ಕಂಟ್ರೋಲ್ ಜೊತೆ ಸಸ್ಪೆಂಕ್ಷನ್-ಡ್ಯಾಂಪಿಂಗ್ ಹೊಂದಾಣಿಕೆಯನ್ನು ಹೊಂದಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಇನ್ನು ಈ ಗೋಲ್ಡ್ ವಿಂಗ್ ಟೂರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆರು-ಪಿಸ್ಟನ್ ಕಾಲಿಪರ್‌ಗಳನ್ನು ಹೊಂದಿರುವ ಟ್ವಿನ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಮೂರು ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಸಿಂಗಲ್ 316 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಹೊಸ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ವಿತರಣೆ ಆರಂಭ

ಈ ಹೊಸ ಗೋಲ್ಡ್ ವಿಂಗ್ ಟೂರ್ ಬೈಕ್ ಟ್ರ್ಯಾವೇಲ್, ಸ್ಪೋಟ್ಸ್, ರೈನ್ ಮತ್ತು ಇಕಾನ್ ಎಂಬ ರೈಡಿಂಗ್ ಮೋಡ್ ಅನ್ನು ಹೊಂದಿದೆ. 2021ರ ಗೋಲ್ಡ್ ವಿಂಗ್ ಅತ್ಯಂತ ಬೃಹತ್ ಗಾತ್ರದ ಅಲ್ಟ್ರಾ ಪ್ರೀಮಿಯಂ ಬೈಕ್ ಆಗಿದೆ. ಇನ್ನು ಈ ಬೈಕ್ ಸ್ಟೆಪ್ಡ್ ಸೀಟುಗಳನ್ನು ಸಹ ಹೊಂದಿದೆ, ಇದು ದೀರ್ಘ ಸವಾರಿಗಳಿಗೆ ಸಾಕಷ್ಟು ಆರಾಮದಾಯಕವಾಗಿರುತ್ತದೆ.

Article Published On: Monday, July 12, 2021, 21:24 [IST]
English summary
Honda Gold Wing Tour Deliveries Commence. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+