ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾ ದೇಶದಲ್ಲಿ ಸಿಆರ್‌ಎಫ್‌300ಎಲ್ ಹೆಸರಿಗಾಗಿ ಪೇಟೆಂಟ್ ಸಲ್ಲಿಸಿದೆ. ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಡ್ಯುಯಲ್-ಪರ್ಪಸ್ ಡರ್ಟ್ ಬೈಕ್ ಆಗಿರುತ್ತದೆ. ಇದನ್ನು ಪ್ರಸ್ತುತ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಇದೇ ಸಿಆರ್‌ಎಫ್‌300ಎಲ್ ಬೈಕಿನ ಹೆಸರಿನ ಪೇಟೆಂಟ್ ಪಡೆದಿರುವುದರಿಂದ ಈ ಮಾದರಿಯು ಭಾರತಕ್ಕೆ ಬರುವ ಸಾಧ್ಯತೆಗಳಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಅಡ್ವೆಂಚರ್ ಬೈಕ್ ಗಳ ಪ್ರಿಯರಿಗಾಗಿ ಹೋಂಡಾ ಸಿಬಿ500ಎಕ್ಸ್ ಮತ್ತು ಹೋಂಡಾ ಆಫ್ರಿಕಾ ಟ್ವಿನ್ ಅನ್ನು ಈಗಗಾಲೇ ಮಾರಾಟಗೊಳಿಸುತ್ತಿದ್ದಾರೆ. ಆದರೆ ಈ ಎರಡು ಬೈಕುಗಳ ಬೆಲೆಯ ದುಬಾರಿಯಾಗಿದೆ. ಇದಕ್ಕಾಗಿ ಕೈಗೆಟುಕುವ ದರದಲ್ಲಿ ಬಿಡುಗಡೆಗೊಳಿಸಲು ಸಿಆರ್ಎಫ್300ಎಲ್ ಬೈಕನ್ನು ಬಿಡುಗಡೆಗೊಳಿಸಲು ಮುಂದಾಗಿರಬಹುದು.

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಹೋಂಡಾ ಸಿಆರ್‌ಎಫ್‌300ಎಲ್ ಬೈಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಬೈಕ್ ಅನ್ನು ಸಾಧ್ಯವಾದಷ್ಟು ಹಗುರವಾಗಿಸಿದೆ. ಇನ್ನು ಈ ಬೈಕಿನಲ್ಲಿ ಹೋಂಡಾ ಸಿಆರ್ಎಫ್300ಎಲ್ ಬೈಕ್ ಸರಳ ಹೆಡ್‌ಲ್ಯಾಂಪ್ ಕೌಲ್, ಸಿಂಗಲ್-ಪೀಸ್ ಸೀಟ್, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ರೈಸ್ಡ್ ಫ್ರಂಟ್ ಫೆಂಡರ್, ಅಪ್-ಸ್ವಿಪ್ಟ್ ಮತ್ತು ಅಂಡರ್-ಸೀಟ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕಿನಲ್ಲಿ ದೊಡ್ಡ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದರಲ್ಲಿ ಯುರೋ 5/ ಬಿಎಸ್ 6 ಕಂಪ್ಲೈಂಟ್ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ 286 ಸಿಸಿ ಡಿಒಹೆಚ್‌ಸಿ ಎಂಜಿನ್ ಅನ್ನು ಹೊಂದಿದೆ.

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಈ 286 ಸಿಸಿ ಡಿಒಹೆಚ್‌ಸಿ ಎಂಜಿನ್ 26 ಬಿಹೆಚ್‍ಪಿ ಪವರ್ ಮತ್ತು 26.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಈ ಹೋಂಡಾ ಸಿಆರ್‌ಎಫ್‌300ಎಲ್ ಬೈಕಿನಲ್ಲಿ ಆಫ್-ರೋಡ್ ಬಯಾಸ್ಡ್ ಸೆಟಪ್ ಕಾರಣ, 285 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ರೈಡರ್ ಸೀಟ್ ಎತ್ತರ 880 ಎಂಎಂ ಹೊಂದಿದೆ. ಇನ್ನು ಈ ಬೈಕಿನಲ್ಲಿ 7.8-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 234 ಟ್ರ್ಯಾವೆಲ್ ನೊಂದಿಗೆ ಎಂಎಂ 43 ಎಂಎಂ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಟ್ರ್ಯಾವೆಲ್ ನೊಂದಿಗೆ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಈ ಡರ್ಟ್ ಬೈಕ್‌ನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 256 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಬೈಕ್ 140 ಕೆಜಿ ತೂಕವನ್ನು ಹೊಂದಿರಲಿದೆ.

ಪೇಟೆಂಟ್ ನೋಂದಣಿ: ಭಾರತದಲ್ಲಿ ಬಿಡುಗಡೆಯಗಲಿದೆ ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಬೈಕ್!

ಹೊಸ ಹೋಂಡಾ ಸಿಆರ್‌ಎಫ್‌300ಎಲ್ ಡ್ಯುಯಲ್ ಪರ್ಪಸ್ ಬೈಕ್ ಆದರೂ ಹೆಚ್ಚು ಆಫ್-ರೋಡ್ ಬಳಕೆಯ ಮೇಲೆ ಗಮನಹರಿಸಿದ ಮಾದರಿಯಾಗಿದೆ. ಆನ್-ರೋಡ್ ಬಳಕೆಗೆ ಕೆಲವೇ ವೈಶಿಷ್ಟ್ಯಗಳಿರುತ್ತದೆ. ಉಳಿದಂತೆ ಈ ಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಹೋಂಡಾ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
Honda CRF300L Dual-Purpose Motorcycle India Launch On Cards. Read In Kannada.
Story first published: Friday, June 4, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X