ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಕಂಪನಿಯು ಮಲೇಷ್ಯಾದ ಮಾರುಕಟ್ಟೆಯಲ್ಲಿ ತನ್ನ 2021ರ ಹೋಂಡಾ ಸಿಬಿಆರ್150ಆರ್(Honda CBR150R) ಬೈಕನ್ನು ಬಿಡುಗಡೆಗೊಳಿಸಿದೆ. ಈ ಹೋಂಡಾ ಸಿಬಿಆರ್150ಆರ್ ಬೈಕನ್ನು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಹೊಸ ಹೋಂಡಾ ಸಿಬಿಆರ್150ಆರ್ ಬೈಕಿನ ಆರಂಭಿಕ ಬೆಲೆಯು ಆರ್ಎಂ 12,499 (ಸುಮಾರು ರೂ.2.21 ಲಕ್ಷ) ವಾಗಿದೆ. ಈ ನವೀಕರಿಸಿದ ಹೋಂಡಾ ಸಿಬಿಆರ್150ಆರ್ ಬೈಕ್ ಮುಂಭಾಗದ ಹೆಡ್‌ಲ್ಯಾಂಪ್ ಕ್ವಾಡ್-ಎಲ್ಇಡಿ ಸೆಟಪ್ ಅನ್ನು ಹೊಂದಿದೆ, ಜೊತೆಗೆ ಓರೆಯಾದ ವಿಸರ್ ಮತ್ತು ತೀಕ್ಷ್ಣವಾದ ಫೇರಿಂಗ್. ಇದು ಗೋಲ್ಡನ್-ಫಿನಿಶ್ಡ್ USD ಫ್ರಂಟ್ ಫೋರ್ಕ್‌ಗಳನ್ನು ಪಡೆಯುತ್ತದೆ, ಇದು ಅತ್ಯಂತ ಪ್ರೀಮಿಯಂ ಆಗಿ ಕಾಣುತ್ತದೆ. ಈ ಬೈಕ್ ಎಲ್ಇಡಿ ಟರ್ನ್ ಇಂಡಿಕೇಟರ್ಸ್ ನೀಡುತ್ತದೆ, ಜೊತೆಗೆ ನಯವಾದ ಟೈಲ್‌ಲೈಟ್. ಅದನ್ನು ಹೊರತುಪಡಿಸಿ, ಇದು ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಇನ್ನು ಈ ಬೈಕ್ ಅಪ್ಸ್ವಿಫ್ಟ್ ಎಕ್ಸಾಸ್ಟ್ ಅನ್ನು ಕೂಡ ಪಡೆಯುತ್ತದೆ. ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ .ರೈಡಿಂಗ್ ಸ್ಥಾನವು ತುಂಬಾ ಬದ್ಧತೆಯಿಲ್ಲದೆ ಸ್ಪೋರ್ಟಿ ಆಗಿದೆ, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ಸೆಂಟರ್-ಸೆಟ್ ಫೂಟ್‌ಪೆಗ್‌ಗಳನ್ನು ಹೊಂದಿದೆ. ಮಲೇಷ್ಯಾ-ಸ್ಪೆಕ್ ಮಾದರಿಯು ಮ್ಯಾಟ್ ಚಾರ್ಕೋಲ್ ಗ್ರೇ ಮೆಟಾಲಿಕ್ ಮತ್ತು ಕ್ಯಾಂಡಿ ಸಿಂಟಿಲ್ಲೇಟ್ ರೆಡ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಇನ್ ಟ್ರೂಮೆಂಟ್ ಕ್ಲಸ್ಟರ್ ಸಂಪೂರ್ಣ ಡಿಜಿಟಲ್ LCD ಇನ್ ಟ್ರೂಮೆಂಟ್ ಕನ್ಸೋಲ್ ಆಗಿದ್ದು, ಇದರಲ್ಲಿ ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಇಂಧನ ಬಳಕೆ ರೀಡ್ಔಟ್ ಕೂಡ ಇರುತ್ತದೆ. ಬ್ರೇಕಿಂಗ್ ಸಿಸ್ಟಂ ಎರಡು ವ್ಹೀಲ್ ಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್‌ಎಸ್) ನ ಸುರಕ್ಷತಾ ಜಾಲವನ್ನು ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಹೊಸ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೊಸ ಶೋವಾ ಯುಎಸ್ಡಿ (ಅಪ್ಸೈಡ್ ಡೌನ್ ಫ್ರಂಟ್ ಫೋರ್ಕ್ಸ್) ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಮೊನೊಶಾಕ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಇದರಲ್ಲಿ ನೀಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ 149 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 16.3 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 14.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಇಂಡೋನೇಷ್ಯಾ-ಸ್ಪೆಕ್ ಸಿಬಿಆರ್150ಆರ್ ಮಾದರಿಗೆ ಹೋಲಿಸಿದರೆ, ಇದು ಸುಮಾರು 1 ಬಿಹೆಚ್‍ಪಿ ಮತ್ತು 0.7 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ನಿರ್ವಹಿಸುತ್ತದೆ, ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಕ್ಲಚ್ ಲಿವರ್ ಅನ್ನು ನಿರ್ವಹಿಸಲು ಇದು ಶೇಕಡಾ 15 ರಷ್ಟು ಕಡಿಮೆ ಪ್ರಯತ್ನವನ್ನು ತೆಗೆದುಕೊಳ್ಳುತ್ತದೆ. ಇದು ಅಗ್ರೇಸಿವ್ ಆಗಿ ಕೆಳಮುಖವಾಗಿ ಚಲಿಸುವಾಗ ವ್ಹೀಲ್-ಲಾಕಿಂಗ್ ಮತ್ತು ಜಿಗಿತವನ್ನು ತಡೆಯುತ್ತದೆಬೈಕು ಎರಡೂ ತುದಿಗಳಲ್ಲಿ 17 ಇಂಚಿನ ಚಕ್ರಗಳನ್ನು ಪಡೆಯುತ್ತದೆ, ಮುಂಭಾಗದಲ್ಲಿ 100/80 ಟೈರ್‌ಗಳು ಮತ್ತು ಹಿಂಭಾಗದಲ್ಲಿ 130/70 ಟೈರ್‌ಗಳು, ಎರಡೂ ಟ್ಯೂಬ್‌ಲೆಸ್ ಆಗಿದೆ,

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಶೀಘ್ರದಲ್ಲೇ ಭಾರತಕ್ಕೆ ಬರುವುದಿಲ್ಲ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಹೊಸ ಸಿಬಿ200ಎಕ್ಸ್ ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ Honda ಕಂಪನಿಯು ಈ ಹೊಸ ಸಿಬಿ200ಎಕ್ಸ್ ಅಡ್ವೆಂಚರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಈ ಹೊಸ ಹೋಂಡಾ ಸಿಬಿ200ಎಕ್ಸ್ ಅಡ್ವೆಂಚರ್ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.44 ಲಕ್ಷಗಳಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಆಸಕ್ತ ಗ್ರಾಹಕರು ಈ ಅಡ್ವೆಂಚರ್ ಬೈಕಿನ ಖರೀದಿಗಾಗಿ ಆನ್‌ಲೈನ್ ಅಥವಾ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೋಂಡಾ ಸಿಬಿ200ಎಕ್ಸ್ ಬೈಕ್ ಅಡ್ವಂಚರ್-ಟೂರರ್ ವಿಭಾಗದಲ್ಲಿ ಇರಿಸಲಾಗಿದೆ. ಈ ಬೈಕಿನಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ನೀಡಿದೆ. ಈ ಬೈಕಿನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಕೆಲವು ಫೀಚರ್ಸ್ ಗಳನ್ನು ನೀಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಹೋಂಡಾ ತನ್ನ ಎಂಟ್ರಿ ಲೆವೆಲ್ ಅಡ್ವೆಂಚರ್-ಟೂರರ್ ಸಿಬಿ200ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ತಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಇತರ ಅಡ್ವೆಂಚರ್ ಬೈಕ್ ಹೆಚ್ಚಿನ ಸಾಮರ್ಥ್ಯದ ಮಾದರಿಗಳಿಗಿರುವುದರಿಂದ ಇದಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಪ್ರೀಮಿಯಂ ಬೈಕ್ ಗಳನ್ನು ಬಿಡುಗಡೆಗೊಳಿಸುತ್ತಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Honda CBR150R ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಅನ್ನು ತೆರೆದಿದೆ. ಈ ಶೋರೂಂ ಮೂಲಕ ಗ್ರಾಹಕರು ಬೈಕ್ ಖರೀದಿಸುವಾಗ ಡಿಜಿಟಲ್ ಅನುಭವವನ್ನು ಪಡೆಯಲಿದ್ದಾರೆ. ಹೋಂಡಾ ತನ್ನ ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್‌ಗಳಿಗಾಗಿ ಈ ವರ್ಚುವಲ್ ಶೋರೂಂ ಅನ್ನು ಆರಂಭಿಸಿದೆ. ಇನ್ನು ಗ್ರಾಹಕರು ಬಿಗ್ ವಿಂಗ್ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಮಾತ್ರ ಈ ವರ್ಚುವಲ್ ಶೋರೂಂ ಮೂಲಕ ಖರೀದಿಸಬಹುದಾಗಿದೆ.

Most Read Articles

Kannada
English summary
Honda introduced 2021 cbr150r with new updates details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X