ಆಕರ್ಷಕ ವಿನ್ಯಾಸದಲ್ಲಿ ಹೋಂಡಾ ಬಿಎಫ್190ಟಿಆರ್ ಸ್ಪೆಷಲ್ ಎಡಿಷನ್ ಬಿಡುಗಡೆ
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತನ್ನ ಬಿಎಫ್190ಟಿಆರ್ ನಿಯೋ-ರೆಟ್ರೊ ಎಂಬ ಸ್ಪೆಷಲ್ ಎಡಿಷನ್ ಮಾದರಿಯನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೋಂಡಾ ಬಿಎಫ್190ಟಿಆರ್ ಬೈಕನ್ನು ಕೆಲವು ನವೀಕರಣಗಳೊಂದಿಗೆ ಪರಿಚಯಿಸಿದೆ.

ಹೋಂಡಾ ಬಿಎಫ್190ಟಿಆರ್ ಸ್ಪೆಷಲ್ ಎಡಿಷನ್ ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಈ ಸ್ಪೆಷಲ್ ಎಡಿಷನ್ ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳನ್ನು ಹೊಂದಿದೆ. ಈ ಫ್ಯೂಯಲ್ ಟ್ಯಾಂಕ್ ಮೇಲೆ ರೆಡ್ ಅಸ್ಸೆಟ್ ನೊಂದಿಗೆ ಗ್ರೇ ಬಣ್ಣವನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ರೆಡ್ ರಿಮ್ ವ್ಹೀಲ್ ಗಳು ಮತ್ತು ಬ್ರೌನ್ ಬಣ್ಣದ ಸೀಟನ್ನು ಹೊಂದಿದೆ. ಮುಂಭಾಗದಲ್ಲಿ ಸಣ್ಣ ಪ್ಲೇ ಸ್ಕ್ರೀನ್ ಅನ್ನು ಹೊಂದಿದೆ.

ಹೋಂಡಾ ಬಿಎಫ್190ಟಿಆರ್ ಸ್ಪೆಷಲ್ ಎಡಿಷನ್ ಒಲ್ಡ್ ಸ್ಕೂಲ್ ಶೈಲಿಯ ವಿನ್ಯಾಸವು ಆಕರ್ಷಕವಾಗಿದೆ. ಈ ಸ್ಪೆಷಲ್ ಎಡಿಷನ್ ಫುಲ್ ಎಲ್ಇಡಿ ಲೈಟಿಂಗ್, ನೆಗೆಟಿವ್ ಬ್ಲೂ-ಬ್ಯಾಕ್ಲಿಟ್ ಎಲ್ಸಿಡಿ ಸ್ಕ್ರೀನ್, ಸಿಂಗಲ್-ಚಾನೆಲ್ ಎಬಿಎಸ್ ಸೆಟಪ್ ಮತ್ತು ಚಾರ್ಜಿಂಗ್ ಪೋರ್ಟ್ ನಂತಹ ಫೀಚರ್ಸ್ ಗಳನ್ನು ಹೊಂದಿವೆ.

ಈ ಸ್ಪೆಷಲ್ ಎಡಿಷನ್ ಮಾದರಿಯಲ್ಲಿ 184.4 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಹಾರ್ನೆಟ್ 2.0 ಬೈಕಿನ ಬಳಸಲಾಗಿದೆ.

ಈ ಎಂಜಿನ್ 16.8 ಬಿಹೆಚ್‍ಪಿ ಪವರ್ ಮತ್ತು 16.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಬಿಎಫ್190ಟಿಆರ್ ಮಾದರಿಯಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಇನ್ನು ಹೋಂಡಾ ಬಿಎಫ್190ಟಿಆರ್ ಸ್ಪೆಷಲ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ನೀಡಿದ್ದಾರೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟರ್ ಸೈಕಲ್ ಕಂಪನಿಯು ಗೋಲ್ಡ್ ವಿಂಗ್ ಟೂರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಇತ್ತೀಚೆಗೆ ಈ ಐಷಾರಾಮಿ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ ಕೇವಲ 24 ಗಂಟೆಯೊಳಗೆ ಸೋಲ್ಡ್ ಔಟ್ ಆಗಿತ್ತು,

ಹೋಂಡಾ ಬಿಎಫ್190ಟಿಆರ್ ಸ್ಪೆಷಲ್ ಎಡಿಷನ್ ವಿಭಿನ್ನ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಬಿಎಫ್190ಟಿಆರ್ ಸ್ಪೆಷಲ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.


Click it and Unblock the Notifications