ಆಕರ್ಷಕ ವಿನ್ಯಾಸದ ಹೊಸ Honda RSX 150 ಸ್ಕೂಟರ್ ಬಿಡುಗಡೆ

ಅಂಡರ್‌ಬೋನ್ ಶೈಲಿಯ ದ್ವಿಚಕ್ರ ವಾಹನಗಳು ಮಲೇಷ್ಯಾ ಮತ್ತು ಇತರ ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಇದೀಗ ಹೋಂಡಾ ಕಂಪನಿಯು ತನ್ನ ಮೊಪೆಡ್ ಶೈಲಿಯ ಆರ್‌ಎಸ್‌ಎಕ್ಸ್ 150 ಸ್ಕೂಟರ್ ಅನ್ನು ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಈ ಹೊಸ 2022ರ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ಆರಂಭಿಕ ಬೆಲೆಯು ಆರ್ಎಂ 8,688 ಆಗಿದೆ. ಭಾರತದ ಕರೆನ್ಸಿಯಲ್ಲಿ ಅಂದಾಜು ರೂ.1.55 ಲಕ್ಷಗಳಾಗಿದೆ. ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ಸ್ಪೋರ್ಟಿ ಲುಕ್ ಮತ್ತು ಇದರಲ್ಲಿ ಲಭ್ಯವಿರುವ ಸೌಕರ್ಯ ಮತ್ತು ಅನುಕೂಲತೆ ಉತ್ತಮವಾಗಿದೆ. ಈ ಸ್ಕೂಟರ್ ಅಗ್ರೇಸಿವ್ ಡ್ಯುಯಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಸ್ಪೋರ್ಟಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ವಿಶೇಷವಾಗಿ ಮುಂಭಾಗದಿಂದ ನೋಡಿದಾಗ. ಹ್ಯಾಂಡಲ್‌ಬಾರ್ ಕೌಲ್ ಸೆಂಟ್ರಲ್ ಏರ್ ಇನ್‌ಟೇಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಇದು ಈ ಸ್ಕೂಟರ್ ಸ್ಪೋರ್ಟಿ ಪ್ರೊಫೈಲ್ ಅನ್ನು ವರ್ಧಿಸಲು ಸಹ ಕಾರ್ಯನಿರ್ವಹಿಸುತ್ತದೆ. ಟ್ರೆಂಡಿ ರಿಯರ್ ವ್ಯೂ ಮಿರರ್‌ಗಳು, ಸ್ಲೀಕ್ ಟರ್ನ್ ಸಿಗ್ನಲ್‌ಗಳು, ಬ್ಲ್ಯಾಕ್ಡ್-ಔಟ್ ಎಂಜಿನ್, ಏರ್ಗೊಮಿಕ್ ಸೀಟ್, ಸ್ಪ್ಲಿಟ್ ಗ್ರಾಬ್ ರೈಲ್‌ಗಳು ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಇತರ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ನಲ್ಲಿ ಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಅನ್ನು ಹೊಂದಿದ್ದು ಅದು ಗೇರ್ ಸ್ಥಾನ, ಫ್ಯೂಯಲ್ ಲೆವೆಲ್ ಮತ್ತು ಇತ್ಯಾದಿಗಳಂತಹ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇನ್ನು ಇದರಲ್ಲಿ ಇರಿಸಲಾದ ಫುಟ್ ಪೆಗ್‌ಗಳೊಂದಿಗೆ ಆರಾಮದಾಯಕ ಸವಾರಿ ನಿಲುವು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

2022ರ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ಬಣ್ಣ ಆಯ್ಕೆಗಳು ಟ್ರೈಕೊ ಆವೃತ್ತಿಯನ್ನು ಒಳಗೊಂಡಿವೆ, ಇದು ರೆಡ್ ಮತ್ತು ಬ್ಲ್ಯಾಕ್ ಮಿಶ್ರಣವಾಗಿದೆ. ಕ್ಯಾಂಡಿ ಕ್ಯಾರಿಬಿಯನ್ ಬ್ಲೂ ಸೀ ಮತ್ತು ಬ್ಲೂ ಬಣ್ಣವನ್ನು ಹೊಂದಿದೆ. ಆದರೆ ಲೆಮನ್ ಐಸ್ ಯೆಲ್ಲೋ ಮತ್ತು ಬ್ಲ್ಯಾಕ್ ಬಣ್ಣವನ್ನು ಸಂಯೋಜಿಸುತ್ತದೆ. ಎಲ್ಲಾ ಮೂರು ಬಣ್ಣದ ಆಯ್ಕೆಗಳು ಬಾಡಿ-ಬಣ್ಣದ ಫೆಂಡರ್‌ಗಳನ್ನು ಪಡೆಯುತ್ತವೆ.ಬಣ್ಣದ ವ್ಹೀಲ್ ಗಳು ಸ್ಕೂಟರ್ ಲುಕ್ ಮತ್ತು ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ, ಆದರೆ ಅದು ಪ್ರಸ್ತುತ ಲಭ್ಯವಿಲ್ಲ. ವ್ಹೀಲ್ ಗಳು ಸ್ಟ್ಯಾಂಡರ್ಡ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ,

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

2022ರ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ 149.2 cc, ಲಿಕ್ವಿಡ್ ಕೂಲ್ಡ್, PGM-FI, DOHC ಮೋಟಾರ್ ಆಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 15.8 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 13.6 ಎನ್ಎಂ ಟಾರ್ಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಇನ್ನು ಈ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಟ್ವಿನ್ ಟ್ಯೂಬ್ ಫ್ರೇಮ್ ಅನ್ನು ಬಳಸುತ್ತದೆ ಮತ್ತು ಹಿಂಭಾಗದಲ್ಲಿ ಪ್ರಿಲೋಡ್ ಹೊಂದಾಣಿಕೆಯೊಂದಿಗೆ ಮೊನೊಶಾಕ್ ಸಸ್ಪೆಂಕ್ಷನ್ ಅನ್ನು ಬಳಸುತ್ತದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಇನ್ನು ಈ ಹೊಸ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಇನ್ನು 90/80 ಮುಂಭಾಗ ಮತ್ತು 120/70 ಹಿಂಭಾಗದ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿವೆ. ಈ ಸ್ಕೂಟರ್ 122 ಕೆಜಿ ಕರ್ಬ್ ತೂಕ ಹೊಂದಿದೆ. ಇನ್ನು ಸ್ಕೂಟರ್ 4.5 ಲೀಟರ್ ಗಳಷ್ಟು ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಇನ್ನು ಹೋಂಡಾ ತನ್ನ ಇತ್ತೀಚಿನ ಕ್ರೂಸರ್ ಕೊಡುಗೆಯಾದ ರೆಬೆಲ್ 250 ಬೈಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಹೋಂಡಾ ರೆಬೆಲ್ 250 ಬ್ರಾಂಡ್‌ನ ಕ್ರೂಸರ್ ಬೈಕ್‍ಗಳ ಸರಣಿಯ ಕೆಳಭಾಗದಲ್ಲಿದೆ. ಹೋಂಡಾ ಕ್ರೂಸರ್ ಮೋಟಾರ್‌ಸೈಕಲ್‌ಗಳ ಸಾಲಿನಲ್ಲಿ ರೆಬೆಲ್ 300, ರೆಬೆಲ್ 500 ಮತ್ತು ರೆಬೆಲ್ 1100 ಸೇರಿವೆ. 2022ರ ಹೋಂಡಾ ರೆಬೆಲ್ 250 ಬೈಕ್ ಜಪಾನ್‌ನಲ್ಲಿ ಹೊಸ ಪರ್ಲ್ ಸ್ಪೆನ್ಸರ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ, ಆದರೆ ಪೇಂಟ್ ಸ್ಕೀಮ್ ಅನ್ನು ಟಾಪ್-ಸ್ಪೆಕ್ ರೆಬೆಲ್ 250ಎಸ್ ಆವೃತ್ತಿಗಾಗಿ ಕಾಯ್ದಿರಿಸಲಾಗಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಈ ಬೈಕ್ ಡಾರ್ಕ್ ಬ್ಲೂ ಮೆಟಾಲಿಕ್ ಬಣ್ಣವನ್ನು ಆಧರಿಸಿದ್ದು, ಅದರ ಇಂಧನ ಟ್ಯಾಂಕ್ ಮತ್ತು ಹಿಂಭಾಗದ ಫೆಂಡರ್‌ನಲ್ಲಿ ಪ್ರಮುಖವಾಗಿದೆ. ಬೈಕಿನ ಎಂಜಿನ್ ಮತ್ತು ಗೇರ್‌ಬಾಕ್ಸ್ ಜೋಡಣೆ ಮತ್ತು ಹಾರ್ಡ್‌ವೇರ್ ಸೆಟಪ್ ಸೇರಿದಂತೆ ಉಳಿದ ಭಾಗಗಳಿಗೆ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇದು ಉತ್ತಮವಾದ ಸ್ಪೋರ್ಟಿ ಕಾಂಟ್ರಾಸ್ಟ್ ಅನ್ನು ಸೃಷ್ಟಿಸುತ್ತದೆ. ಕ್ರೂಸರ್ ಬೈಕಿನ ಈ ಪ್ರೀಮಿಯಂ ರೂಪಾಂತರವು ಡೈಮೆಂಡ್-ಸ್ಟಿಜ್ ಶೈಲಿಯ ಸೀಟುಗಳು, ಫೋರ್ಕ್ ಗೈಟರ್‌ಗಳು ಮತ್ತು ಹೆಡ್‌ಲ್ಯಾಂಪ್ ಕೌಲ್ ಅನ್ನು ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ಗಳೊಂದಿಗೆ ಹೊಂದಿದೆ.

ಆಕರ್ಷಕ ವಿನ್ಯಾಸದ ಹೊಸ Honda RSX ಸ್ಕೂಟರ್ ಬಿಡುಗಡೆ

ಈ ಹೊಸ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿಲ್ಲ. ಇನ್ನು ಭಾರತದಲ್ಲಿ ಲಭ್ಯವಿರುವ ಮೊಪೆಡ್‌ಗಳು ದೇಶದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ದ್ವಿಚಕ್ರ ವಾಹನ ಆಯ್ಕೆಗಳಲ್ಲಿ ಒಂದಾಗಿದೆ. ಮೊಪೆಡ್‌ಗಳು ಇಂಧನ ದಕ್ಷತೆಯನ್ನು ಹೊಂದಿವೆ ಮತ್ತು ಗಮನಾರ್ಹ ಪ್ರಮಾಣದ ಲೋಡ್ ಅನ್ನು ಸಾಗಿಸಬಲ್ಲವು. ಇದರಿಂದ ಈ ಮೊಪೆಡ್ ಮಾದರಿಯ ಹೋಂಡಾ ಆರ್‌ಎಸ್‌ಎಕ್ಸ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

Most Read Articles

Kannada
English summary
Honda introduced new rsx 150 scooter price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X