ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಕಂಪನಿಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ 2021ರ ಹೋಂಡಾ ಸಿಬಿ150ಆರ್ ಬೈಕನ್ನು ಬಿಡುಗಡೆಗೊಳಿಸಿದೆ. ಈ 2021ರ ಹೋಂಡಾ ಸಿಬಿ150ಆರ್ ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ ಹಲವಾರು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಹೋಂಡಾ ಕಂಪನಿಯ ಈ ಸಿಬಿ150ಆರ್ ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿಲ್ಲ. ಯಾಕೆಂದರೆ ಭಾರತೀಯ ಮಾರುಕಟ್ಟೆಯಲ್ಲಿ ಇದನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಹೆಚ್ಚಿನ ಮಾರಾಟವಾಗುವುದಿಲ್ಲವೆಂದು ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲು ಹಿಂದೇಟು ಹಾಕಿದೆ. ಈ ಬೈಕನ್ನು ಇಂಡೋನೇಷ್ಯಾದಲ್ಲಿ 2021ರ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಎಂದು ಕರೆಯುತ್ತಾರೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

2021ರ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಬೈಕ್ ಎಲ್‌ಇಡಿ ಲೈಟಿಂಗ್ ಸಿಸ್ಟಂ ಅನ್ನು ಹೊಂದಿದೆ. ಕಂಪನಿಯು ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ನವೀಕರಿಸಿದೆ ಬೈಕ್‌ಗೆ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್-ಲ್ಯಾಂಪ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಇನ್ನು ಈ ಬೈಕಿನಲ್ಲಿ 12-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಸ್ಟ್ರೀಟ್‌ಫೈರ್ ಆವೃತ್ತಿಗೆ ಬೆಲ್ಲಿ ಗಾರ್ಡ್ ಇದೆ. ಈ ಹೊಸ ಸ್ಟ್ರೀಟ್‌ಫೈಟರ್ ಬೈಕ್ ಒಟ್ಟಾರೆಯಾಗಿ ಅಗ್ರೇಸಿವ್ ಲುಕ್ ಅನ್ನು ಹೂಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಹೊಸ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಬೈಕಿನಲ್ಲಿನ ಇನ್ಸ್ ಟ್ರೂಮೆಂಟ್ ಕನ್ಸೋಲ್ ಈಗ ಗೇರ್ ಪೊಸಿಷನ್ ಇಂಡಿಕೇಟರ್, ಸ್ಪೀಡೋಮೀಟರ್, ಓಡೋಮೀಟರ್, ಫ್ಯೂಯಲ್ ಲೆವೆಲ್ ಬಾರ್ ಮತ್ತು ರೆವ್ ಕೌಂಟರ್ ಅನ್ನು ಮಾಹಿತಿಯನ್ನು ನೀಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಇನ್ನು ಈ ಹೊಸ ಬೈಕಿನಲ್ಲಿ ಅದೇ 149 ಸಿಸಿ, ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 16.3 ಬಿಹೆಚ್‍ಪಿ ಪವರ್ ಮತ್ತು 13.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಹೊಸ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹೊಸ 37 ಎಂಎಂ ಶೋವಾ ಯುಎಸ್ಡಿ (ಅಪ್ಸೈಡ್ ಡೌನ್ ಫ್ರಂಟ್ ಫೋರ್ಕ್ಸ್) ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಮೊನೊಶಾಕ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಎಬಿಎಸ್ ಅನ್ನು ನೀಡಲಾಗಿಲ್ಲವೆಂದು ನಿರೀಕ್ಷಿಸುತ್ತೇಚೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಸಿಬಿ150ಆರ್ ಬೈಕ್

2021ರ ಹೋಂಡಾ ಸಿಬಿ150ಆರ್ ಸ್ಟ್ರೀಟ್ ಫೈರ್ ಬೈಕ್ಫ್ಯೂರಿ ಮ್ಯಾಟ್ ರೆಡ್, ರಾಪ್ಟರ್ ಮ್ಯಾಟ್ ಬ್ಲ್ಯಾಕ್ ಮತ್ತು ಆರ್ಮರ್ಡ್ ಮ್ಯಾಟ್ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಸಾಮಾನ್ಯ ಮಾದರಿ ಸ್ಟಿಂಗರ್ ರೆಡ್ ಬ್ಲ್ಯಾಕ್ ಮತ್ತು ಮ್ಯಾಕೊ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಹೋಂಡಾ ಸಿಬಿ150ಆರ್ ಬೈಕ್ ಶೀಘ್ರದಲ್ಲೇ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ.

Article Published On: Thursday, May 6, 2021, 17:46 [IST]
English summary
2021 Honda CB150R Introduced. Read In Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+