ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ 2021ರ ಎಕ್ಸ್-ಎಡಿವಿ(ಅಡ್ವೆಂಚರ್) ಸ್ಕೂಟರ್ ಅನ್ನು ಫಿಲಿಪೈನ್ಸ್‌ನಲ್ಲಿ ಬಿಡುಗಡೆಗೊಳಿಸಿದೆ. 2021ರ ಈ ಹೋಂಡಾ ಅಡ್ವೆಂಚರ್ ಸ್ಕೂಟರ್ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೊಸ 2021ರ ಎಕ್ಸ್-ಎಡಿವಿ ಸ್ಕೂಟರ್ ನವೀಕರಿಸಿದ ವಿನ್ಯಾಸವನ್ನು ಪಡೆದುಕೊಂಡಿದೆ. 2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಅಡ್ವೆಂಚರ್ ಸ್ಕೂಟರ್ ಮುಂಭಾಗ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಇನ್ನು 2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಮುಂಭಾಗ ಫಾಸಿಕ ಪ್ಯಾನೆಲ್ ಅನ್ನು ಹೆಚ್ಚು ಅಗ್ರೇಸಿವ್ ಆಗಿ ಕಾಣುವಂತೆ ನವೀಕರಿಸಲಾಗಿದೆ. ಟೈಲ್ ವಿಭಾಗದ ವಿನ್ಯಾಸವನ್ನು ಕೂಡ ನವೀಕರಿಸಲಾಗಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಇದರೊಂದಿಗೆ ಐದು-ಹಂತದ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಹೊಸ ಹ್ಯಾಂಡ್‌ಗಾರ್ಡ್‌ಗಳು ಮತ್ತು ಅಲ್ಯೂಮಿನಿಯಂ ಬ್ಯಾಷ್ ಪ್ಲೇಟ್ ಅನ್ನು ಗುಣಮಟ್ಟದ ಸಾಧನವಾಗಿ ಅಳವಡಿಸಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ನಲ್ಲಿ 745ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 57 ಬಿಹೆಚ್‌ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆಫ್ರಿಕಾ ಟ್ವಿನ್ ನಂತಹ ಆರು-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ ಮತ್ತು ಡಿಸಿಟಿ ಆಯ್ಕೆಯನ್ನು ನೀಡಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಈ ಹೊಸ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಅನ್ನು ಹೆಚ್ಚಿನ ಮೈಲೇಜ್ ನೀಡುವಂತೆ ಮತ್ತು ಸ್ಪೀಡ್ ಅನ್ನು ಹೆಚ್ಚಿಸುವಂತೆ ನವೀಕರಿಸಲಾಗಿದೆ. ಆಫ್-ರೋಡ್ ಆಧಾರಿತ ಸ್ಕೂಟರ್ ಆದರೂ ಉತ್ತಮ ಮೈಲೇಜ್ ಅನ್ನು ನೀಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ದೊಡ್ದ ಹೋಂಡಾ ಎಕ್ಸ್-ಎಡಿವಿ ಆಫ್-ರೋಡ್ ಸ್ಕೂಟರ್ ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಇನ್ನು ಹೆಚ್ಚಿನ ಸ್ಟ್ರೋರೇಜ್ ಸ್ಪೇಸ್, ಯುಎಸ್‌ಬಿ ಚಾರ್ಜರ್ ಮತ್ತು ಹೊಸ ಗ್ಲೋವ್‌ಬಾಕ್ಸ್ ಅನ್ನು ಸಹ ಪಡೆಯುತ್ತದೆ.

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ನವೀಕರಿಸಿದ ಎಂಜಿನ್ ನೊಂದಿಗೆ ಎಕ್ಸ್-ಎಡಿವಿ ರೈಡ್-ಬೈ-ವೈರ್ ಟೆಕ್ ಅನ್ನು ಸಹ ಪಡೆಯುತ್ತದೆ, ಮೊದಲಿಗಿಂತ ಹೆಚ್ಚಿನ ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ನೀಡುತ್ತದೆ. ಎಕ್ಸ್-ಎಡಿವಿ ಸ್ಕೂಟರ್ ನಲ್ಲಿ ರೈನ್, ಸ್ಟ್ಯಾಂಡರ್ಡ್, ಸ್ಪೋರ್ಟ್, ಗ್ರ್ಯಾವೆಲ್ ಮತ್ತು ಯೂಸರ್ಸ್ ಎಂಬ ರೈಡಿಂಗ್ ಮೋಡ್ ಅನ್ನು ಹೊಂದಿದೆ. ಇದರಲ್ಲಿ ಗ್ರ್ಯಾವೆಲ್ ಹೆಚ್ಚು ಅಗ್ರೇಸಿವ್ ಮೋಡ್ ಆಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಈ ಹೊಸ ಆಫ್-ರೋಡ್ ಬೈಕಿನಲ್ಲಿ ಹೋಂಡಾ ಡೈಮಂಡ್ ಸ್ಟೀಲ್ ಟ್ಯೂಬ್ ಫ್ರೇಮ್ ಅನ್ನು ಸುಧಾರಿಸಿದೆ. ಅಂಡರ್ ಸೀಟ್ ಸ್ಟ್ರೋರೇಜ್ 22 ಲೀಟರ್ ನಷ್ಟು ಸ್ಪೇಸ್ ಅನ್ನು ಹೊಂದಿದೆ.

ಹೊಸ ಅಡ್ವೆಂಚರ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಹೊಸ ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಸ್ಪೋಕ್ ವ್ಹೀಲ್ ಮತ್ತು ಡ್ಯುಯಲ್-ಸ್ಪೋರ್ಟ್ ಟೈರ್‌ಗಳನ್ನು ಹೊಂದಿವೆ. ಇನ್ನು ಹೋಂಡಾ ಎಕ್ಸ್-ಎಡಿವಿ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

Most Read Articles

Kannada
English summary
2021 Honda X-ADV Scooter Launched. Read In Kannada.
Story first published: Saturday, February 13, 2021, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X