ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಹೊಂಡಾ ಕಂಪನಿಯು ತನ್ನ ಹೊಸ ಸಿಬಿ150 ವರ್ಜಾ ಬೈಕನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿದೆ. ಈ ನೇಕೆಡ್ ಬೈಕ್ ಸ್ಲೀಕ್ ನಿಯೊ-ಕ್ಲಾಸಿಕ್ ವಿನ್ಯಾಸವನ್ನು ಹೊಂದಿದ್ದು, ಇದರಲ್ಲಿ ಅತ್ಯಾಧುನಿಕ ಪೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್ ವೃತ್ತಾಕಾರದ ಹೆಡ್‌ಲ್ಯಾಂಪ್, ಎರಡೂ ಬದಿಗಳಲ್ಲಿ ಟ್ಯಾಂಕ್ ವಿಸ್ತರಣೆಗಳು, ಸಿಂಗಲ್ ಫೀಸ್ ಸೀಟ್ ಮತ್ತು 12.2-ಲೀಟರ್ ಫ್ಯೂಯಲ್ ಟ್ಯಾಂಕ್‌ನಾದ್ಯಂತ ಗ್ರಾಫಿಕ್ಸ್ ಹೊಂದಿದೆ. ಇದು ಹ್ಯಾಲೊಜೆನ್ ಲ್ಯಾಂಪ್ ಗಳು, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಟೋಮ್ಯಾಟಿಕ್ ಮತ್ತು ಆಟೋ ಕೀ ಶಟರ್ ನಂತಹ ಫೀಚರ್ಸ್ ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಹೊಸ ಹೋಂಡಾ ಸಿಬಿ150 ವರ್ಜಾ ಬೈಕ್ 149.15 ಸಿಸಿ ಪಿಜಿಎಂ-ಎಫ್‌ಐ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 13.2 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 12.73 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೊಸ ಹೋಂಡಾ ಸಿಬಿ150 ವರ್ಜಾ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ಯುಯಲ್ ಸಸ್ಪಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿರುವ ಹೈಡ್ರಾಲಿಕ್ ಸಿಸ್ಟಂ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಈ ಹೊಸ ಹೋಂಡಾ ಸಿಬಿ150 ವರ್ಜಾ ಬೈಕ್ ಬೋಲ್ಡ್ ರೆಡ್, ಮ್ಯಾಕೊ ಮ್ಯಾಟ್ ಬ್ಲ್ಯಾಕ್ ಮತ್ತು ಮಸ್ಲ್ಕಿನ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಇನ್ನು ಈ ಹೊಸ ಬೈಕ್ ಕ್ಯಾಸ್ಟ್ ವ್ಹೀಲ್ ಟೈಪ್ ಮತ್ತು ಸ್ಪೋಕ್ ವ್ಹೀಲ್ ಟೈಪ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.ಈ ಹೊಸ ಹೋಂಡಾ ಸಿಬಿ150 ವರ್ಜಾ ಬೈಕಿನ ಬೆಲೆಯು ಭಾರತದ ಕರೆನ್ಸಿ ಪ್ರಕಾರ ಅಂದಾಜು ರೂ.1.04 ಲಕ್ಷವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಹೋಂಡಾ ಸಿಬಿ150 ವರ್ಜಾ ಬೈಕ್ 773 ಎಂಎಂ ನಷ್ಟು ಸೀಟ್ ಎತ್ತರವನ್ನು ಹೊಂದಿದೆ. ಈ ಬೈಕ್ ಸಿಟಿಗಳ ಟ್ರಾಫಿಕ್ ಗಳಲ್ಲಿ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಈ ಹೊಸ ಹೋಂಡಾ ಸಿಬಿ150 ವರ್ಜಾ ಬೈಕ್ 129 ಕೆ.ಜಿ ತೂಕವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಹೊಂಡಾ ಸಿಬಿ150 ವರ್ಜಾ ಬೈಕ್

ಈ ಹೊಸ ಹೋಂಡಾ ಸಿಬಿ150 ವರ್ಜಾ ಬೈಕ್ ಶೀಘ್ರದಲ್ಲೇ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಹೋಂಡಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

Article Published On: Friday, June 18, 2021, 13:44 [IST]
English summary
New Honda CB150 Verza launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+