ಕೈಗೆಟುಕುವ ಬೆಲೆ, 130 ರೇಂಜ್ ಹೊಂದಿರುವ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಡೆ ವಿಶೇಷ ಗಮನ ಹರಿಸುತ್ತಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ ಪಾರುಪತ್ಯ ಸಾಧಿಸಲಿದೆ ಎಂದು ಅರಿತ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿಲ್ಲದ ವಾಹನ ತಯಾರಕ ಕಂಪನಿಗಳು ಭವಿಷ್ಯದಲಿ ಹಿಂದೇ ಉಳಿಯಬಹುದು. ಹೋಂಡಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಹು ಪೇಟೆಂಟ್‌ಗಳನ್ನು ಸಲ್ಲಿಸಿದ್ದರೂ, ಅವುಗಳಲ್ಲಿ ಯಾವುದೂ ಅಂತಿಮವಾಗಿ ಉತ್ಪಾದನಾ ಮಟ್ಟವನ್ನು ತಲುಪುವುದು ಎಂಬುದರ ಮಾಹಿತಿಗಳು ಬಹಿರಂಗವಾಗಿಲ್ಲ. ಮತ್ತೊಂದೆಡೆ ಚೀನಾದಲ್ಲಿ ಹೋಂಡಾ ಈಗಾಗಲೇ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸಸಿದೆ.

ಹೋಂಡಾ ಮೋಟಾರ್ ಕಂಪನಿಯ ಚೀನಾದ ಅಂಗವಾದ ವುಯಾಂಗ್ ಹೋಂಡಾ ಯು-ಗೋ ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ಆರಂಬಿಕ ಬೆಲೆಯು ರೂ ಸಿಎನ್‌ವೈ 7,499 ಭಾರತೀಯ ಕರೆನ್ಸಿ ಪ್ರಕಾರ ಅಂದಾಜು ರೂ.86,000 ಆಗಿದೆ.

ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ರೆಗ್ಯೂಲರ್ ಮತ್ತು ಲೋ-ಸ್ಫೀಡ್ ಎಂಬ ಎರಡು ರೂಪಾಂತಗಳಲ್ಲಿ ಲಭ್ಯವಿದೆ. ಈ ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಎಥರ್ 450ಎಕ್ಸ್ ಮಾದರಿಯಂತೆ ಕಾಣುತ್ತದೆ.

ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಸಿಂಪಲ್ ಮತ್ತು ಬೋಲ್ಡ್ ವಿನ್ಯಾಸವನ್ನು ನೀಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದ ಏಪ್ರನ್‌ನಲ್ಲಿ ಟ್ರಿಪಲ್ ಕಿರಣಗಳನ್ನು ಹೊಂದಿರುವ ನಯವಾದ ಎಲ್‌ಇಡಿ ಹೆಡ್‌ಲೈಟ್ ಮತ್ತು ಮುಖ್ಯ ಕ್ಲಸ್ಟರ್ ಅನ್ನು ಸುತ್ತುವರಿದ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಅನ್ನು ಹೊಂದಿದೆ.

ಹ್ಯಾಂಡಲ್‌ಬಾರ್‌ನ ಬದಿಗಳಲ್ಲಿ ಟರ್ನ್ ಇಂಡಿಕೇಟರ್ಸ್ ಅಂದವಾಗಿ ಸಂಯೋಜಿಸಲಾಗಿದೆ. ಹಿಂಭಾಗವು ಸ್ಲಿಮ್ ಎಲ್ಇಡಿ ಟೈಲ್‌ಲೈಟ್ ಅನ್ನು ತೋರಿಸುತ್ತದೆ ಮತ್ತು ಸಿಂಗಲ್-ಪೀಸ್ ಪಿಲಿಯನ್ ಗ್ರಾಬ್ ರೇಲ್ ಅನ್ನು ಬಾಡಿ ಮೇಲೆ ಸಂಯೋಜಿಸಲಾಗಿದೆ.

ಇದು 350 ಎಂಎಂ ಉದ್ದದ ಫ್ಲೋರ್‌ಬೋರ್ಡ್ ಪಡೆಯುತ್ತದೆ. ಹ್ಯಾಂಡಲ್‌ಬಾರ್, ಫ್ಲೋರ್‌ಬೋರ್ಡ್, ಅಂಡರ್‌ಬೆಲ್ಲಿ, ಟೈಲ್ ಸೆಕ್ಷನ್, ರಿಯರ್ ಸಸ್ಪೆನ್ಷನ್ ಮತ್ತು ಹಿಂಭಾಗದ ಮಡ್‌ಗಾರ್ಡ್‌ನಲ್ಲಿನ ಬ್ಲ್ಯಾಕ್-ಔಟ್ ಪ್ಯಾನಲ್‌ಗಳು ಸ್ಪೋರ್ಟಿ ಕಾಂಟ್ರಾಸ್ಟ್‌ನ ಸುಳಿವು ನೀಡುತ್ತದೆ. ಸಿಂಗಲ್-ಪೀಸ್ ಫ್ಲಾಟ್ ಸೀಟ್ ಸರಳವಾದ ರೈಡಿಂಗ್ ಅನುಭವ ಭರವಸೆ ನೀಡುತ್ತದೆ.

ಹೊಸ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಉದರಲ್ಲಿ ಸಾಕಷ್ಟು ವಿಶಾಲವಾದ ಬೂಟ್ ಅನ್ನು ಪಡೆಯುತ್ತದೆ, ಇದು 26 ಲೀಟರ್‌ಗಳಷ್ಟು ಸ್ಟೊರೇಜ್ ಸ್ಪೇಸ್ ಅನ್ನು ಹೊಂದಿದೆ. ಇತರ ವೈಶಿಷ್ಟ್ಯಗಳಲ್ಲಿ ಆಲ್-ಎಲ್ಇಡಿ ಇಲ್ಯೂಮಿನೇಷನ್, ಯುಟಿಲಿಟಿ ಗ್ಲೌವ್ ಬಾಕ್ಸ್, ಅಂಟಿ ಥೀಫ್ಟ್ ಅಲರ್ಮ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿವೆ.

ಇನ್ನು ಸ್ಪೀಡ್, ರೇಂಜ್, ಬ್ಯಾಟರಿ ಸ್ಟೇಟಸ್ ಮತ್ತು ರೈಡಿಂಗ್ ಮೋಡ್ ನಂತಹ ಮೂಲ ಮಾಹಿತಿಯನ್ನು ಒದಗಿಸುವ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ. ಸ್ಕೂಟರ್ ಮುಂಭಾಗ 12 ಇಂಚಿನ ಮತ್ತು ಹಿಂಭಾಗ 10 ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಿದೆ.

ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ 48ವಿ 30ಎಹೆಚ್ ಲಿಥಿಯಂ-ಐಯಾನ್ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ., ಇದನ್ನು ಸಾಮಾನ್ಯ ಮಾದರಿಯಲ್ಲಿ 1.2 ಕಿವ್ಯಾಟ್ ಹಬ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಲೋ-ಸ್ಪೀಡ್ ರೂಪಾಂತರವು 800ವ್ಯಾಟ್ ಮೋಟಾರ್ ಅನ್ನು ಪಡೆಯುತ್ತದೆ.

ಇದು ಪವರ್‌ಟ್ರೇನ್ ಗರಿಷ್ಠ 65 ಕಿ.ಮೀ ರೇಂಜ್ ಅನ್ನು ನೀಡಿದರೆ ಇನ್ನೊಂದು ರೂಪಾಂತರವು 130 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಎರಡನೇ ಬ್ಯಾಟರಿಯ ಸೇರ್ಪಡೆಯು ಕಡಿಮೆ ಸೀಟಿನ ಸ್ಟೋರೆಜ್ ಸ್ಪೇಸ್ ಅನ್ನು ನೀಡುತ್ತದೆ. ರೆಗ್ಯೂಲರ್ ರೂಪಾಂತರವು 53 ಕಿ.ಮೀ ಗರಿಷ್ಠ ವೇಗವನ್ನು ನೀಡುತ್ತದೆ.

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಗಳು ಪ್ರಿಲೋಡ್ ಹೊಂದಾಣಿಕೆಯನ್ನು ನೀಡುತ್ತದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ. ಇನ್ನು 740 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.


Click it and Unblock the Notifications