ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 2,80,381 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಕಳೆದ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 2,56,170 ಯುನಿಟ್‌ಗಳನ್ನು ಮಾರಾಟಗೊಳಿಸಿದರೆ, ಉಳಿದ 24,211 ಯುನಿಟ್‌ಗಳನ್ನು ರಪ್ತು ಮಾಡಿದ್ದಾರೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,12,641 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.38 ರಷ್ಟು ಕುಸಿತವಾಗಿದೆ. ಇನ್ನು ಹೋಂಡಾ ಕಂಪನಿಯು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 20,565 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.38 ರಷ್ಟು ಕುಸಿತವನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್ ಕಂಪನಿಯ ಮಾರಾಟ ಮತ್ತು ಮಾರ್ಕೆಟ್ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಪ್ ಕೊರತೆಯ ಪೂರೈಕೆಯ ಬದಿಯ ಸವಾಲನ್ನು ಸೇರಿಸುವುದು ಮತ್ತು ಹಬ್ಬದ ಸೀಸನ್ ನಲ್ಲಿ ಕಡಿಮೆ ಮಾರುಟವಾಗಿದೆ. ಆದರೆ ಕಳೆದ ತ್ರೈಮಾಸಿಕದಂತೆ ನಾವು ಮಾರುಕಟ್ಟೆಯ ಸ್ವಲ್ಪ ಪುನರುಜ್ಜೀವನವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕರ್ನಾಟದಲ್ಲಿ ಇದುವರೆಗೆ ಸುಮಾರು 40 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲುಗಳನ್ನು ಸಾಧಿಸಿದೆ. ಕರ್ನಾಟಕದಲ್ಲಿ ಮೊದಲ 20 ಲಕ್ಷ ಮಾರಾಟ 16 ವರ್ಷಗಳಲ್ಲಿ ಆಗಿದೆ. ಇನ್ನು ಕೇವಲ 5 ವರ್ಷಗಳಲ್ಲಿ 20 ಲಕ್ಷ ಗ್ರಾಹಕರನ್ನು ಸೇರಿಸಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಮಹಾರಾಷ್ಟ್ರದ ಅಹ್ಮದ್‌ನಗರ, ಮಧ್ಯಪ್ರದೇಶದ ಗ್ವಾಲಿಯರ್, ಒಡಿಶಾದ ಅಂಗುಲ್, ಮಹಾರಾಷ್ಟ್ರದ ನಾಗ್ಪುರ, ಉತ್ತರ ಪ್ರದೇಶದ ಕಾನ್ಪುರ, ಕರ್ನಾಟಕದ ಮೈಸೂರು, ಆಂಧ್ರಪ್ರದೇಶದ ವಿಜಯವಾಡ, ಮುಜಾಫರ್‌ಪುರದಲ್ಲಿ ತನ್ನ ಬಿಗ್ ವಿಂಗ್ ಔಟ್‌ಲೆಟ್‌ಗಳನ್ನು ವಿಸ್ತರಿಸುವ ಮೂಲಕ ಹೋಂಡಾ ದೇಶಾದ್ಯಂತ ತನ್ನ ಪ್ರೀಮಿಯಂ ಮಾರಾಟ ಜಾಲವನ್ನು ಬಲಪಡಿಸಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದೆ.. ಹೋಂಡಾ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಆಕ್ಟಿವಾ ಸ್ಕೂಟರ್ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಹೋಂಡಾ 2001ರಲ್ಲಿ ಆಕ್ಟಿವಾ ಮೂಲಕ ನಮ್ಮ ದೇಶದಲ್ಲಿ ದ್ವಿಚಕ್ರ ವಾಹನಗಳ ಜಾಗವನ್ನು ಪ್ರವೇಶಿಸಿದ್ದರು, ಇದು ಇಲ್ಲಿಯವರೆಗೆ ನಮ್ಮ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಬೆಳವಣಿಗೆಯು ಇತ್ತೀಚಿನ ವರ್ಷಗಳಲ್ಲಿ ತೀವ್ರ ಹೆಚ್ಚಳವನ್ನು ಕಂಡಿದೆ. ಮೊದಲ 2.5 ಕೋಟಿ ಮಾರಾಟವನ್ನು 16 ವರ್ಷಗಳ ಕಾರ್ಯಾಚರಣೆಯಲ್ಲಿ ಸಾಧಿಸಲಾಗಿದೆ ಎಂದು ಹೋಂಡಾ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಮುಂದಿನ 2.5 ಕೋಟಿ ಯುನಿಟ್‌ಗಳು ಕೇವಲ 5 ವರ್ಷಗಳಲ್ಲಿ ಮಾರಾಟವಾದವು. ಕೆಲವು ತಿಂಗಳುಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ 2.5 ಕೋಟಿ ಮಾರಾಟದ ಮೈಲಿಗಲ್ಲನ್ನು ದಾಟಿದ ಮೊದಲ ಸ್ಕೂಟರ್ ಮಾದರಿಯೆಂದರೆ ಆಕ್ಟಿವಾ ಸರಣಿ ಎಂಬುದನ್ನೂ ಗಮನಿಸಬೇಕು. ಪ್ರಸ್ತುತ, ಆಕ್ಟಿವಾ ಸರಣಿಯು ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಅನ್ನು ಒಳಗೊಂಡಿದೆ, ಇವೆರಡೂ ಬಹು ರೂಪಾಂತರಗಳನ್ನು ಹೊಂದಿವೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಆಕ್ಟಿವಾ 6 ಜಿ 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದರೆ, ಆಕ್ಟಿವಾ 125 ಸ್ಕೂಟರ್ 124 ಸಿಸಿ ಸಿಂಗಲ್-ಪಾಟ್ ಮೋಟಾರ್ ಪಡೆಯುತ್ತದೆ. ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಡೀಲರ್ ನೆಟ್‌ವರ್ಕ್‌ಗಳನ್ನು ಹೊಂದಿದೆ. ಇದು ರೆಡ್‌ವಿಂಗ್ ಮತ್ತು ಬಿಗ್‌ವಿಂಗ್ ಆಗಿದೆ. ಇದರಲ್ಲಿ ರೆಡ್‌ವಿಂಗ್ ನೆಟ್‌ವರ್ಕ್‌ ನಲ್ಲಿ ಆಕ್ಟಿವಾ, ಗ್ರಾಜಿಯಾ, ಹಾರ್ನೆಟ್ 2.0, ಸಿಬಿ200ಎಕ್ಸ್, ಇತ್ಯಾದಿಗಳಂತಹ ಒಳ್ಳೆ ಮಾದರಿಗಳನ್ನು ಹೊಂದಿದ್ದರೆ, ಬಿಗ್‌ವಿಂಗ್ ನೆಟ್‌ವರ್ಕ್‌ ನಲ್ಲಿ ಸಿಬಿ350, ಹೈನಸ್350, ಸಿಬಿಆರ್650ರ್, ಸಿಬಿಆರ್650ರ್, ಆಫ್ರಿಕಾ ಟ್ವಿನ್, ಗೋಲ್ಡ್ ವಿಂಗ್, ಮುಂತಾದ ಬ್ರ್ಯಾಂಡ್‌ನ ಪ್ರೀಮಿಯಂ ಮಾದರಿಗಳನ್ನು ಒಳಗೊಂಡಿದೆ,

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಹೋಂಡಾ ತನ್ನ ಬಿಗ್‌ವಿಂಗ್ ಡೀಲರ್ ನೆಟ್‌ವರ್ಕ್ ಅನ್ನು ದೇಶದಾದ್ಯಂತ ವಿಸ್ತರಿಸಲು ಯೋಜಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಕೆಲವು ಹೊಸ ಮಾದರಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಅನ್ನು ಇತ್ತೀಚೆಗೆ ತೆರೆದಿದೆ.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ಈ ಶೋರೂಂ ಮೂಲಕ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸುವಾಗ ಡಿಜಿಟಲ್ ಅನುಭವವನ್ನು ಪಡೆಯಬಹುದು. ಹೋಂಡಾ ತನ್ನ ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್‌ಗಳಿಗಾಗಿ ಈ ವರ್ಚುವಲ್ ಶೋರೂಂ ಅನ್ನು ಆರಂಭಿಸಿದೆ.ಗ್ರಾಹಕರು ಬಿಗ್ ವಿಂಗ್ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಮಾತ್ರ ಈ ವರ್ಚುವಲ್ ಶೋರೂಂ ಮೂಲಕ ಖರೀದಿಸಬಹುದು. ಹೋಂಡಾ ಮೋಟಾರ್‌ಸೈಕಲ್ ಈ ವರ್ಚುವಲ್ ಶೋರೂಂ ಮೂಲಕ ಗ್ರಾಹಕರು ತಮ್ಮ ಮನೆಯಲ್ಲಿಯೇ ಕುಳಿತು ಬೈಕ್ ಖರೀದಿಸಬಹುದು.

ನವೆಂಬರ್ ತಿಂಗಳಿನಲ್ಲಿ 2.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ Honda Motorcycle

ವರ್ಚುವಲ್ ಶೋರೂಂನಲ್ಲಿ ಬೈಕ್ ಖರೀದಿಸುವ ಅನುಭವವು ನೈಜ ಶೋರೂಂನಲ್ಲಿ ಬೈಕ್ ಖರೀದಿಸಿದಂತೆ ಮಾಡಲು ಬೈಕಿನ 360 ಡಿಗ್ರಿ ಚಿತ್ರಗಳನ್ನು ಕೂಡ ತೋರಿಸಲಾಗುತ್ತದೆ. ಈ ಚಿತ್ರಗಳು ಬೈಕಿನ ಪ್ರತಿಯೊಂದು ಭಾಗದ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ. ಇದರ ಹೊರತಾಗಿ ಆಡಿಯೋ, ವೀಡಿಯೊ ಮೂಲಕ ಬೈಕ್‌ಗಳ ಪ್ರತಿಯೊಂದು ಬಿಡಿ ಭಾಗಗಳ ಬಗ್ಗೆಯೂ ವಿವರವಾದ ಮಾಹಿತಿಯನ್ನು ನೀಡಲಾಗುತ್ತದೆ. ಈ ವೆಬ್‌ಸೈಟ್‌ನಲ್ಲಿ ಹ್ವರ್ಚುವಲ್ ಚಾಟ್ ಸಪೋರ್ಟ್ ಸಹ ನೀಡಲಾಗುತ್ತದೆ. ಇದರಿಂದ ಗ್ರಾಹಕರ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಬಹುದು.

Most Read Articles

Kannada
English summary
Honda motorcycle and scooter india sales decline 35 percent in november 2021 details
Story first published: Thursday, December 2, 2021, 19:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X