ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಹೊಸ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೋಂಡಾ ಈ ಹೊಸ ಬೈಕನ್ನು ಇದೇ ತಿಂಗಳ 16ರಂದು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ.

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಹೋಂಡಾ ಬೈಕ್ ಸಿಬಿ350 ಆಧಾರಿತ ಕೆಫೆ ರೇಸರ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಹೋಂಡಾ ಸಿಬಿ350 ಕೆಫೆ ರೇಸರ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 350 ಸಿಸಿ ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ 21 ಬಿಹೆಚ್‌ಪಿ ಪವರ್ ಮತ್ತು 30 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಈ ಹೊಸ ಬೈಕಿನ ಬೆಲೆಯುನ್ನು ರೂ.2 ಲಕ್ಷ ಗಳವರೆಗೆ ನಿಗಧಿಪಡಿಸಬಹುದು.

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಬೈಕನ್ನು ಹೋಂಡಾದ ಪ್ರೀಮಿಯಂ ಡೀಲರುಗಳ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುವುದು, ಇದನ್ನು ಬಿಗ್ ವ್ಹೀಂಗ್ ಎಂದು ಕರೆಯಲಾಗುತ್ತದೆ. ಇಲ್ಲಿ ಹೊಂಡಾ ಕಂಪನಿಯು ತನ್ನ ಪ್ರೀಮಿಯಂ ಬೈಕುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ರಾಯಲ್ ಎನ್‌ಫೀಲ್ಡ್ ಬೈಕಿಗೆ ಪೈಪೋಟಿಯಾಗಿ ಹೋಂಡಾ ಮತ್ತೊಂದು ರೆಟ್ರೊ ಶೈಲಿಯ ಬೈಕನ್ನು ಬಿಡುಗಡೆಗೊಳಿಸುತ್ತಿದೆ. ಹೋಂಡಾ ಕಂಪನಿಯು ವಿಭಾಗದಲ್ಲಿ ಅನೇಕ ಮಾದರಿಗಳನ್ನು ವಿಭಿನ್ನ ಸ್ಟೈಲಿಂಗ್‌ನೊಂದಿಗೆ ಪರಿಚಯಿಸುತ್ತಿರುವುದನ್ನು ನೋಡಬಹುದು.

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ ಹೋಂಡಾ ಕಂಪನಿಯು ರಾಯಲ್ ಎನ್‌ಫೀಲ್ಡ್ ಬೈಕುಗಳನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಾಗುತ್ತಿದೆ. ಹೋಂಡಾ ಸಿಬಿ350 ಆಧಾರಿತ ಹೊಸ ಸ್ಕ್ರ್ಯಾಂಬ್ಲರ್ ಬೈಕನ್ನು ಕೂಡ ಬಿಡುಗಡೆಗೊಳಿಸಲಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಟೀಸರ್ ಚಿತ್ರದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳು ಸಿಬಿ350 ನಲ್ಲಿ ಬಳಸಿದಂತೆಯೇ ಕಾಣುತ್ತವೆ. ಹೊಸ ಹೋಂಡಾ ಸಿಬಿ350 ಕೆಫೆ ರೇಸರ್ ಸ್ಪೋರ್ಟಿರ್ ಲುಕ್ ಮತ್ತು ಫಾರ್ವರ್ಡ್-ಬಯಾಸ್ಡ್ ರೈಡಿಂಗ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಇದು ಕ್ಲಾಸಿಕ್ ಸಿಲ್ವರ್ ಬಾರ್-ಎಂಡ್ ಮೀರರ್ ಗಳು ಮತ್ತು ಬ್ಲ್ಯಾಕ್ಡ್-ಶಾಕ್ ಅಬ್ಸಾರ್ಬರ್ಗಳನ್ನು ಹೊಂದಿರುತ್ತದೆ.

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಫ್ಯೂಯಲ್ ಟ್ಯಾಂಕ್‌ನಲ್ಲಿ ಹೊಸ ಗ್ರಾಫಿಕ್ಸ್, ಕೆಫೆ ರೇಸರ್ ಮಾದರಿಯ ಸಿಂಗಲ್-ಪೀಸ್ ಸೀಟ್ ಮತ್ತು ಸೀಟ್ ಕೌಲ್ ಅನ್ನು ಪಡೆಯಲಿದೆ. ಹೊಸ ಟೈಲ್-ಲ್ಯಾಂಪ್‌ಗಳು ಮತ್ತು ವಿಭಿನ್ನ ಸೀಟುಗಳೊಂದಿಗೆ ಬೈಕು ಸಂಪೂರ್ಣವಾಗಿ ಪರಿಷ್ಕೃತ ಹಿಂಭಾಗದ ಪ್ರೊಫೈಲ್ ಅನ್ನು ಹೊಂದಿರುತ್ತದೆ ಎಂದು ಟೀಸರ್ ಖಚಿತಪಡಿಸುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೈನಸ್ ಸಿಬಿ350 ಬೈಕಿನಿಂದ ರೌಂಡ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟರ್ನ್ ಇಂಡಿಕೇಟರ್ಸ್ ಮತ್ತು ಟೈಲ್-ಲ್ಯಾಂಪ್‌ಗಳು, ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಅಲಾಯ್ ವ್ಹೀಲ್ ಗಳು ಮತ್ತು ಡಿಜಿಟಿಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಂತಹ ಹೆಚ್ಚಿನ ಯುನಿಟ್ ಗಳು ಮತ್ತು ಫೀಚರ್ ಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.

ಹೊಸ ಬೈಕಿನ ಟೀಸರ್ ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ಹೊಸ ಹೋಂಡಾ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಗಳನ್ನು ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಮುಂಭಾಗದಲ್ಲಿ 310 ಎಂಎಂ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಹೊಂದಿರುತ್ತದೆ.

Most Read Articles

Kannada
English summary
Honda Motorcycle And Scooter India Teases New Motorcycle. Read In Kannada.
Story first published: Monday, February 1, 2021, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X