ಮೂರು ಹೊಸ ಬಣ್ಣಗಳ ಆಯ್ಕೆ ಪಡೆದುಕೊಂಡ ಹೋಂಡಾ ಹೈನೆಸ್ ಸಿಬಿ350
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೈನೆಸ್ ಸಿಬಿ350 ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಬೈಕ್ ಮಾದರಿಯನ್ನು ಭಾರತದಲ್ಲೇ ಉತ್ಪಾದನೆ ಮಾಡುವ ಮೂಲಕ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳುತ್ತಿದೆ.

ಜಪಾನ್‌ನಲ್ಲಿ ತನ್ನ ಅತಿ ದೊಡ್ಡ ಬೈಕ್ ಉತ್ಪದನಾ ಘಟಕದ ಹೊರತಾಗಿಯೂ ಹೈನೆಸ್ ಸಿಬಿ350 ಬೈಕ್ ಮಾದರಿಯನ್ನು ಭಾರತದಿಂದಲೇ ಜಪಾನ್ ಮಾರುಕಟ್ಟೆಗೆ ರಫ್ತು ಕೈಗೊಳ್ಳುತ್ತಿರುವ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ಮಾದರಿಗಿತಲೂ ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರಾಟಗೊಳಿಸುತ್ತಿದ್ದು, ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ಮೂರು ಹೊಸ ಬಣ್ಣಗಳ ಆಯ್ಕೆಯನ್ನು ಪರಿಚಯಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಮ್ಯಾಟ್ ಗ್ರೇ ಮೆಟಾಲಿಕ್, ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್, ವರ್ಚುವಸ್ ವೈಟ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹಾಗೂ ಸ್ಪಿಯರ್ ಸಿಲ್ವರ್ ಮೆಟಾಲಿಕ್ ಪರ್ಲ್ ನೈಟ್ ಸ್ಟಾರ್ ಮೆಟಾಲಿಕ್ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ.

ಜಪಾನ್ ಮಾರುಕಟ್ಟೆಗಾಗಿ ಕಂಪನಿಯು ಮ್ಯಾಟೆ ಪರ್ಲ್ ಮಾರಿಯನ್ ಬ್ಲ್ಯಾಕ್, ಮ್ಯಾಟೆ ಜೀನ್ಸ್ ಬ್ಲ್ಯೂ ಮೆಟಾಲಿಕ್ ಮತ್ತು ಕ್ಯಾಂಡಿ ರೆಡ್ ಬಣ್ಣಗಳ ಆಯ್ಕೆಗಳ ಆಯ್ಕೆ ನೀಡಿದ್ದು, ಹೊಸ ಬಣ್ಣಗಳು ಜಪಾನ್ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಗೊಳ್ಳಲಿವೆ.

2020ರ ಅಕ್ಬೋಬರ್ ಮಧ್ಯಂತರದಲ್ಲಿ ಹೈನೆಸ್ ಸಿಬಿ350 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಇದುವರೆಗೆ 13 ಸಾವಿರ ಯುನಿಟ್ ಬೈಕ್ ವಿತರಣೆ ಮಾಡಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬೆನೆಲ್ಲಿ ಇಂಪೀರಿಯಲ್ 400 ಮತ್ತು ಜಾವಾ ಕ್ಲಾಸಿಕ್ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,86,500 ಮತ್ತು ಹೈ ಎಂಡ್ ಮಾದರಿಯು ರೂ. 1,92,500 ಬೆಲೆ ಹೊಂದಿದೆ.

ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕ ಬೆಲೆ ಮತ್ತು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಹೈನೆಸ್ ಸಿಬಿ350 ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 13 ಸಾವಿರ ಯುನಿಟ್ ಮಾರಾಟ ಗುರಿ ಸಾಧಿಸಿದೆ.

ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸಲಿದ್ದು, ಈ ಬೈಕಿನ ಮುಂಭಾಗದಲ್ಲಿ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್ ಹಾಗೂ ಫೋರ್ಕ್‌ಗಳನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ದೊಡ್ಡದಾದ 15-ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಿಸಲಾಗಿದ್ದು, ಈ ಬೈಕಿನ ಸೈಡ್ ಗಳಲ್ಲಿ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ.

ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದ್ದು, ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದ್ದು, ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಈ ಬೈಕಿನಲ್ಲಿ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಬೈಕಿನಲ್ಲಿ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಬೇಸ್ ಮಾದರಿಯನ್ನು ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಹಾಗೂ ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸದ್ಯ ಹೊಸ ಬೈಕ್ ಮಾದರಿಯ ಹೋಂಡಾ ಬಿಗ್‌ವಿಂಗ್ ಮಾರಾಟ ಮಳಿಗೆಗಳಿಗೆ ಮಾತ್ರವೇ ಖರೀದಿಗೆ ಲಭ್ಯವಿದೆ.


Click it and Unblock the Notifications








