ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ Honda ತನ್ನ 2022ರ Africa Twin ಬೈಕ್ ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಅನಾವರಣಗೊಳಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ Honda Africa Twin ಬೈಕ್ ಅನ್ನು ಐದು ವರ್ಷಗಳ ಹಿಂದೆ ಪರಿಚಯಿಸಲಾಯಿತು.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಈ Honda Africa Twin ಬೈಕ್ ಕಳೆದ ವರ್ಷ ಮರುವಿನ್ಯಾಸವನ್ನು ಪಡೆಯಿತು. ಸಾಮಾನ್ಯ Africa Twin ಬೈಕ್ ಹಾರ್ಡ್‌ಕೋರ್ ಆಫ್-ರೋಡಿಂಗ್ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡರೆ, ಅಡ್ವಂಚರ್ ಸ್ಪೋರ್ಟ್ಸ್ ಮಾದರಿಯು ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿವೆ. ಈಗಾಗಲೇ ಇವುಗಳ ಎಂಜಿನ್ ಅನ್ನು ಯೂರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ, ಇದರಿಂದ 1,084 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಮುಂದುವರೆಸಿದ್ದಾರೆ. ಈ ಎಂಜಿನ್ 100 ಬಿಎಚ್‌ಪಿ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಯಾವುದೇ ಪವರ್‌ಟ್ರೇನ್ ಬದಲಾವಣೆಗಳನ್ನು ಮಾಡಲಾಗಿಲ್ಲ. 2022ರ Honda Africa Twin ಬಿಗ್ ಲೋಗೋ ಎಂದು ಕರೆಯಲ್ಪಡುವ ಹೊಸ ಬಣ್ಣದ ಥೀಮ್ ಅನ್ನು ಪಡೆಯುತ್ತದೆ. ಏಕೆಂದರೆ ಅದರ ಮೇಲೆ ದೊಡ್ಡ ಲೋಗೋ ಇದೆ. ಅಡ್ವೆಂಚರ್ ಸ್ಪೋರ್ಟ್‌ನಲ್ಲಿ, ಹಿಂದಿನ ಲಗೇಜ್ ಕ್ಯಾರಿಯರ್ ಅನ್ನು ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಮಾಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

2022ರ Honda Adventure Sport ಮಾದರಿಯು ಹೊಸ ಬಣ್ಣದ ಆಯ್ಕೆಯನ್ನು ಸೇರಿಸಲಾಗಿದೆ, ಇದನ್ನು ಕ್ರ್ಯಾಕ್ಡ್ ಟೆರೈನ್ ಎಂದು ಕರೆಯಲಾಗುತ್ತದೆ ಮತ್ತು ಐದು-ಹಂತದ ಹೊಂದಾಣಿಕೆ ವಿಂಡ್‌ಸ್ಕ್ರೀನ್ 110 ಎಂಎಂ ಚಿಕ್ಕದಾಗಿದೆ, ಏಕೆಂದರೆ ಇದು ಹಿಂದಿನ ಮಾದರಿಯಲ್ಲಿ ಸ್ಥಿರ ಯುನಿಟ್ ಅನ್ನು ಬದಲಾಯಿಸುತ್ತದೆ. ಅದರ ಗರಿಷ್ಠ ಸನ್ನಿವೇಶದಲ್ಲಿ, ಗಾಳಿಯ ಹೊಡೆತದ ರಕ್ಷಣೆ ಹಳೆಯ ಅಡ್ವೆಂಚರ್ ಸ್ಪೋರ್ಟ್ ಬೈಕಿನಂತೆಯೇ ಇರುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಜನಪ್ರಿಯ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ಸಹ ಪರಿಷ್ಕರಿಸಲಾಗಿದೆ. ಮುಖ್ಯವಾಗಿ ಮೊದಲ ಮತ್ತು ಎರಡನೆಯ ಗೇರ್‌ಗಳಲ್ಲಿ ಕಡಿಮೆ ವೇಗದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ಇದು ಸುಗಮವಾಗಿದೆ. ಜಪಾನಿನ ತಯಾರಕರು ಮುಂಬರುವ ವಾರಗಳಲ್ಲಿ 2022ರ Honda Africa Twin ಬೈಕಿನ ಬೆಲೆಯನ್ನು ಘೋಷಿಸುತ್ತಾರೆ ಮತ್ತು ಇದು ಅದೇ ಸಮಯಾವಧಿಯಲ್ಲಿ ಶೋರೂಂಗಳನ್ನು ತಲುಪುತ್ತದೆ

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಈ ಮೈಲ್ಡ್ ಅಪ್ಡೇಟ್ ಪಡೆದ Honda Africa Twin ಬೈಕ್ ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ. ಇನ್ನು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ Honda Africa Twin ಬೈಕ್ ಟಾಪ್ ಬಾಕ್ಸ್, ರಿಯರ್ ಕ್ಯಾರಿಯರ್, ರ್ಯಾಲಿ ಸ್ಟೆಪ್, ಡಿಸಿಟಿ ಪ್ಯಾಡಲ್ ಶಿಫ್ಟರ್, ಫಾಗ್ ಲ್ಯಾಂಪ್, ಫಾಗ್ ಲ್ಯಾಂಪ್ ಎಟಿಟಿ, ವಿಸರ್ ಮತ್ತು ಸೈಡ್ ಪೈಪ್ ಮುಂತಾದವುಗಳನ್ನು ಒಳಗೊಂಡಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಇನ್ನು ಸ್ಪೋರ್ಟ್ಸ್ ಬೈಕ್ ಅಡ್ವೆಂಚರ್-ಟೂರರ್ ಅರ್ಬನ್, ಟೂರ್, ಗ್ರೇವೆಲ್, ಆಫ್-ರೋಡ್ ಮತ್ತು ಇತರ ಕಸ್ಟಮೈಸ್ ಮಾಡಬಹುದಾದ ಮೋಡ್‌ಗಳನ್ನು ಒಳಗೊಂಡಂತೆ ಅನೇಕ ರೈಡಿಂಗ್ ಮೋಡ್‌ಗಳೊಂದಿಗೆ ಕೂಡ ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಈ ಬೈಕ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕಾರ್ನರಿಂಗ್ ಲೈಟ್ಸ್, ಕ್ರೂಸ್ ಕಂಟ್ರೋಲ್, 5-ಹಂತದ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಮತ್ತು ಹೊಂದಾಣಿಕೆ ಮಾಡಬಹುದಾದ ಸೀಟುಗಳೊಂದಿಗೆ ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಇನ್ನು ಈ ಆಫ್ರಿಕಾ ಟ್ವಿನ್ ಸ್ಪೋರ್ಟ್ಸ್ ಬೈಕ್ ಅಫ್‌ರ್ಸಿಯಾ ಟ್ವಿನ್ 6.5-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್ ಪ್ಲೇಯನ್ನು ಹೊಂದಿದೆ, ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಹೋಂಡಾ ಟೂ ವ್ಹೀಲರ್ಸ್ ಇಂಡಿಯಾ ಕಂಪನಿಯು ತನ್ನ ಹೊಸ CB200X ಅಡ್ವೆಂಚರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ Honda CB200X ಅಡ್ವೆಂಚರ್ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.44 ಲಕ್ಷಗಳಾಗಿದೆ. ಹೊಸ Honda CB200X ಅಡ್ವೆಂಚರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಆಗಿ ಪ್ರಾರಂಭಿಸಿದ್ದಾರೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಈ ಅಡ್ವೆಂಚರ್ ಬೈಕಿನ ಖರೀದಿಗಾಗಿ ಆನ್‌ಲೈನ್ ಅಥವಾ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ CB200X ಬೈಕ್ ಅಡ್ವಂಚರ್-ಟೂರರ್ ವಿಭಾಗದಲ್ಲಿ ಇರಿಸಲಾಗಿದೆ. ಈ ಬೈಕಿನಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ನೀಡಿದೆ. ಈ ಬೈಕಿನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಕೆಲವು ಫೀಚರ್ಸ್ ಗಳನ್ನು ನೀಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

ಇನ್ನು Honda CB200X ಅಡ್ವೆಂಚರ್ ಬೈಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿರಬಹುದು. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Honda Africa Twin ಬೈಕ್

Honda Africa Twin ಭಾರತದಲ್ಲಿ ಮಾರಾಟವಾಗುತ್ತಿರುವ ಬ್ರ್ಯಾಂಡ್‌ನ ಅತ್ಯಂತ ಪ್ರೀಮಿಯಂ ಮತ್ತು ಪ್ರಮುಖ ಅಡ್ವೆಂಚರ್ ಟೂರರ್ ಕೊಡುಗೆಯಾಗಿದೆ. Honda Africa Twin ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಆರ್ 1250 ಜಿಎಸ್, ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಮತ್ತು ಟ್ರಯಂಫ್ ಟೈಗರ್ 900 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda motorcycle unveiled 2022 africa twin with new colour theme details
Story first published: Sunday, August 29, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X