ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಟೂ ವ್ಹೀಲರ್ಸ್ ಇಂಡಿಯಾ ಕಂಪನಿಯು ತನ್ನ ಹೊಸ CB200X ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ Honda ಕಂಪನಿಯು ಈ ಹೊಸ CB200X ಅಡ್ವೆಂಚರ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಈ ಹೊಸ Honda CB200X ಅಡ್ವೆಂಚರ್ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.1.44 ಲಕ್ಷಗಳಾಗಿದೆ. ಆಸಕ್ತ ಗ್ರಾಹಕರು ಈ ಅಡ್ವೆಂಚರ್ ಬೈಕಿನ ಖರೀದಿಗಾಗಿ ಆನ್‌ಲೈನ್ ಅಥವಾ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ CB200X ಬೈಕ್ ಅಡ್ವಂಚರ್-ಟೂರರ್ ವಿಭಾಗದಲ್ಲಿ ಇರಿಸಲಾಗಿದೆ. ಈ ಬೈಕಿನಲ್ಲಿ ಗಾಳಿಯಿಂದ ರಕ್ಷಣೆ ಪಡೆಯಲು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ನೀಡಿದೆ. ಈ ಬೈಕಿನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಆಫ್-ರೋಡ್ ಕಾರ್ಯಕ್ಷಮತೆಗಾಗಿ ಕೆಲವು ಫೀಚರ್ಸ್ ಗಳನ್ನು ನೀಡಲಾಗಿದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಹೊಸ Honda CB200X ಅಡ್ವೆಂಚರ್ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ನಕಲ್ ಗಾರ್ಡ್‌ಗಳು, ಸ್ಪ್ಲಿಟ್-ಸೀಟ್‌ಗಳು ಮತ್ತು ಹಝರ್ಡ್ ಲೈಟ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಇನ್ನು ಈ Honda ಅಡ್ವೆಂಚರ್ ಬೈಕಿನ ಎರೋಗಾನಾಮಿಕ್ ಇಗ್ನಿಷನ್ ಕೀಯನ್ನು ಟ್ಯಾಂಕ್ ಮೇಲೆ ಇರಿಸಲಾಗಿದೆ. ಈ Honda CB200X ಬೈಕಿನಲ್ಲಿ ಎಂಜಿನ್ ಅನ್ನು ಹಾರ್ನೆಟ್ 2.0 ನಿಂದ ಎರವಲು ಪಡೆಯಲಾಗಿದೆ. ಈ ಬೈಕಿನಲ್ಲಿ 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 17 ಬಿಹೆಚ್‍ಪಿ ಪವರ್ ಮತ್ತು 16 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳ ವಿಷಯದಲ್ಲಿ, CB200X ಕೇವಲ ಡ್ಯುಯಲ್-ಚಾನೆಲ್ ABS ಅನ್ನು ಹೊಂದಿದೆ. ಇನ್ನು ಈ ಅಡ್ವೆಂಚರ್ ಬೈಕಿನಲ್ಲಿ ಡೈಮೆಂಡ್ ಟೈಪ್ ಫ್ರೇಮ್ ಅನ್ನು ಒಳಗೊಂಡಿದೆ. ಇದು ಈ ಅಡ್ವೆಂಚರ್ ಬೈಕನ್ನು ಉತ್ತಮ ನಿಯಂತ್ರಣ ಮತ್ತು ಕಾರ್ನರ್ ಗಳಲ್ಲಿ ಉತ್ತಮ ನಿಯಂತ್ರಣದಲ್ಲಿ ಸಾಗಲು ಸಹಕಾರಿಯಾಗಿರುತ್ತದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಈ Honda CB200X ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಈ ಅಡ್ವಂಚರ್ ಬೈಕ್ ಉತ್ತಮ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಇನ್ನು Honda CB200X ಬೈಕಿನಲ್ಲಿ ಎಂಜಿನ್ ಕೌಲ್ ಮತ್ತು ಡ್ಯುಯಲ್ ಪರ್ಪಸ್ ಟೈರ್‌ಗಳನ್ನು ಹೊಂದಿದೆ ಮತ್ತು ಹಾರ್ನೆಟ್ 2.0 ಯಿಂದ ಬಹುತೇಕ ಸಮತಟ್ಟಾದ ಹ್ಯಾಂಡಲ್‌ಬಾರ್ ಸೆಟಪ್‌ಗಿಂತ ಭಿನ್ನವಾಗಿ, ಹೋಂಡಾ CB200X ನೇರವಾದ ಹ್ಯಾಂಡಲ್‌ಬಾರ್ ಸೆಟಪ್ ಅನ್ನು ಹೊಂದಿದೆ. ಇದು ಆನ್ ಮತ್ತು ಆಫ್ ರೋಡಿಂಗ್‌ಗೆ ಸಹಾಯ ಮಾಡುತ್ತದೆ.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಈ ಹೊಸ ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 110/70 ಟೈರ್ ನೊಂದಿಗೆ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದರೆ, ಹಿಂಭಾಗದಲ್ಲಿ : 140/70 ಟೈರ್ ನೊಂದಿಗೆ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ,

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಇನ್ನು Honda Motorcycl ತನ್ನ ಹೊಸ ಆಫ್ರಿಕಾ ಟ್ವಿನ್ (Africa Twin) ಮಾದರಿಯ 300 ಯೂನಿಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಿದೆ ಎಂದು ಘೋಷಿಸಿದೆ. ಅದರಲ್ಲಿ 100 ಯೂನಿಟ್‌ಗಳನ್ನು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವಿತರಿಸಲಾಗಿದೆ. ಈ 100ನೇ ಆಫ್ರಿಕಾ ಟ್ವಿನ್ ಅಡ್ವಂಚರ್ ಬೈಕನ್ನು ಬೆಂಗಳೂರಿನ ಬಿಗ್‌ವಿಂಗ್ ಟಾಪ್‌ಲೈನ್‌ನಿಂದ ಇತ್ತೀಚೆಗೆ ವಿತರಿಸಲಾಯಿತು.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಈ ಸಂದರ್ಭದಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಯದ್ವಿಂದರ್ ಸಿಂಗ್ ಗುಲೇರಿಯಾ ಅವರು ಮಾತನಾಡಿ, ಕರ್ನಾಟಕದಲ್ಲಿ 100ನೇ ಆಫ್ರಿಕಾ ಟ್ವಿನ್ ಅಡ್ವಂಚರ್ ಬೈಕನ್ನು ವಿತರಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಕರ್ನಾಟಕದಲ್ಲಿ ಭಾರೀ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದರು.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

Honda Motorcycle ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಮಾರಾಟಕ್ಕಾಗಿ ವರ್ಚುವಲ್ ಶೋರೂಂ ಅನ್ನು ತೆರೆದಿದೆ. ಈ ಶೋರೂಂ ಮೂಲಕ ಗ್ರಾಹಕರು ಬೈಕ್ ಖರೀದಿಸುವಾಗ ಡಿಜಿಟಲ್ ಅನುಭವವನ್ನು ಪಡೆಯಲಿದ್ದಾರೆ. Honda ತನ್ನ ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್‌ಗಳಿಗಾಗಿ ಈ ವರ್ಚುವಲ್ ಶೋರೂಂ ಅನ್ನು ಆರಂಭಿಸಿದೆ. ಇನ್ನು ಗ್ರಾಹಕರು ಬಿಗ್ ವಿಂಗ್ ಡೀಲರ್‌ಶಿಪ್‌ನಲ್ಲಿ ಮಾರಾಟವಾಗುವ ಬೈಕ್‌ಗಳನ್ನು ಮಾತ್ರ ಈ ವರ್ಚುವಲ್ ಶೋರೂಂ ಮೂಲಕ ಖರೀದಿಸಬಹುದು.

ಹೊಸ Honda CB200X ಅಡ್ವೆಂಚರ್ ಬೈಕ್ ವಿತರಣೆ ಆರಂಭ

ಹೋಂಡಾ ತನ್ನ ಎಂಟ್ರಿ ಲೆವೆಲ್ ಅಡ್ವೆಂಚರ್-ಟೂರರ್ CB200X ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ತಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಇತರ ಅಡ್ವೆಂಚರ್ ಬೈಕ್ ಹೆಚ್ಚಿನ ಸಾಮರ್ಥ್ಯದ ಮಾದರಿಗಳಿಗಿರುವುದರಿಂದ ಇದಕ್ಕೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ, ಆದರೆ Honda CB200X ಭಾರತೀಯ ಮಾರುಕಟ್ಟೆಯಲ್ಲಿ Xpulse 200T ಬೈಕಿಗೆ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Honda motorcycles starts deliveries of new cb200x adventure tourer in india details
Story first published: Tuesday, September 7, 2021, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X