ಜಾವಾ ಮತ್ತು ಜಾವಾ 42 ಬೈಕುಗಳ ಮೇಲೆ ಭರ್ಜರಿ ಆಫರ್
ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ 2021ರ ಜಾವಾ 42 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಸ್ಟ್ಯಾಂಡರ್ಡ್ ಜಾವಾ ಬೈಕ್ ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿತ್ತು.

ಇದು ಸ್ಪೋರ್ಟಿಯರ್ ಲುಕ್ ನೀಡಿತು ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಕೂಡ ಸೇರಿಸಿತು. ಜಾವಾ ಮೋಟಾರ್‌ಸೈಕಲ್ ಕಂಪನಿಯ ಜಾವಾ ಮತ್ತು ಜಾವಾ 42 ಬೈಕುಗಳನ್ನು ಈ ತಿಂಗಳು ಖರೀದಿಸಿದ ಗ್ರಾಹಕರು ಟ್ಯೂಬ್‌ಲೆಸ್ ಟೈರ್‌ಗಳಲ್ಲಿ ಸುತ್ತಿದ ಒಂದು ಜೋಡಿ ಅಲಾಯ್ ವ್ಹೀಲ್ ಗಳನ್ನು ಮತ್ತು ಒಂದು ಬಾರ್-ಎಂಡ್ ಮೀರರ್ ಅನ್ನು ಪಡೆಯಬಹುದು.

ಹೊಸ ಅಲಾಯ್ ವ್ಹೀಲ್ ಗಳು ಮತ್ತು ಬಾರ್ ಎಂಡ್ ಮೀರರ್ ಗಳು ಜಾವಾ ಗೋಲ್ಡನ್ ಸ್ಕೀಮ್ ಅಡಿಯಲ್ಲಿ ರೂ.7,999 ವರೆಗಿನ ರಿಯಾಯಿತಿ ದರದಲ್ಲಿ ಲಭ್ಯವಿದೆ. ಎರಡೂ ಭಾಗಗಳ ಮೂಲ ಬೆಲೆ ರೂ.14,498 ಗಳಾಗಿದೆ. ಇನ್ನು ಗೋಲ್ಡನ್ ಸ್ಕೀಮ್ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಅಕ್ಸೆಸರೀಸ್ ಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ. ಇನ್ನು ಎರಡು ಜಾವಾ ಬೈಕುಗಳಲ್ಲಿ 93 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 26.5 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಜಾವಾ 42 ಬೈಕ್ ಸ್ಟ್ಯಾಂಡರ್ಡ್ ಮಾದರಿಗಿಂತ 0.8 ಬಿಹೆಚ್‍ಪಿ ಪವರ್ ಹೆಚು ಉತ್ಪಾದಿಸುತ್ತದೆ. ಹೊಸ ಜಾವಾ 42 ಬೈಕಿನಲ್ಲಿ ಎಂಜಿನ್ ಈಗ ಕ್ರಾಸ್-ಪೋರ್ಟ್ ಹರಿವಿನೊಂದಿಗೆ ಬರುತ್ತದೆ, ಇದು ಉತ್ತಮ ಮೈಲೇಜ್, ಬಲವಾದ ಎಕ್ಸ್ ಲೇರಷನ್ ಮತ್ತು ಅದರ ಡ್ಯುಯಲ್ ಪೈಪ್‌ಗಳಿಂದ ಥ್ರೋಟಿಯರ್ ಎಕ್ಸಾಸ್ಟ್ ನೋಟ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಜಾವಾ 42 ಬೈಕ್ ಹೊಸ ಫೀಚರ್ ಗಳು ಮತ್ತು ಸ್ವಲ್ಪ ಕಾಸ್ಮೆಟಿಕ್ ನವೀಕರಣಗಳು ಮತ್ತು ಮೂರು ಹೊಸ ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆಗೊಂಡಿತು. ಹೊಸ ಜಾವಾ ಬೈಕ್ 2 ಕೆಜಿ ಹಗುರವಾಗಿದೆ. ಇದು ಒಟ್ಟು 172 ಕೆಜೆ ತೂಕವನ್ನು ಹೊಂದಿದೆ

ಈ ಹೊಸ ಜಾವಾ 42 ಬೈಕ್ ಸಿರಿಯಸ್ ವೈಟ್, ಆಲ್-ಸ್ಟಾರ್ ಬ್ಲ್ಯಾಕ್ ಮತ್ತು ಓರಿಯನ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ. ಇನ್ನು ಈ ಬೈಕಿನ ಫ್ಯೂಯಲ್ ಟ್ಯಾಂಕ್ ನಲ್ಲಿ '42' ಮತ್ತು 'ಕ್ಲಾಸಿಕ್ ಲೆಜೆಂಡ್ಸ್' ಗ್ರಾಫಿಕ್ಸ್ ಎಂಬ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ./p>
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು 2021ರ ಜಾವಾ 42 ಬೈಕಿನಲ್ಲಿ ಈಗ ಬಾರ್-ಎಂಡ್ ಮೀರರ್, ರೈಡರ್ ಮತ್ತು ಪಿಲಿಯನ್ ಎರಡಕ್ಕೂ ವಿಶಾಲವಾದ ಮತ್ತು ಹೆಚ್ಚು ಆರಾಮದಾಯಕವಾದ ಸೀಟ್, ಮರುವಿನ್ಯಾಸಗೊಳಿಸಲಾದ ಸೈಡ್ ಸ್ಟ್ಯಾಂಡ್, ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಅಲಾಯ್ ವ್ಹೀಲ್ ಮತ್ತು ಹೆಚ್ಚಿನ ಫೀಚರ್ ಗಳು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಇನ್ನು ಈ ಬೈಕಿಗೆ ಹೆಡ್‌ಲ್ಯಾಂಪ್ ಗ್ರಿಲ್ ಮತ್ತು ಫ್ಲೈ-ಸ್ಕ್ರೀನ್ ಅನ್ನು ಬಿಡಿಭಾಗಗಳಾಗಿ ನೀಡಲಿವೆ. 2021ರ ಜಾವಾ 42 ಬೈಕಿನಲ್ಲಿ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ನೀಡಲು ಸಸ್ಪೆಂಕ್ಷನ್ ಸೆಟಪ್ ಅನ್ನು ರಿ-ಟ್ಯೂನ್ ಮಾಡಲಾಗಿದೆ.


Click it and Unblock the Notifications








