ಭಾರತದಲ್ಲಿ ದುಬಾರಿಯಾಯ್ತು ಜನಪ್ರಿಯ ಜಾವಾ ಪೆರಾಕ್ ಬೈಕ್
ಜಾವಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಬಾಬರ್ ಶೈಲಿಯ ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಹೊಸ ಜಾವಾ ಪೆರಾಕ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಈ ಜಾವಾ ಪೆರಾಕ್ ಬೈಕಿನ ಹಿಂದಿನ ಬೆಲೆಗೆ ಹೋಲಿಸಿದರೆ ಹೊಸದಾಗಿ ರೂ.8,700 ಗಳವರೆಗೆ ಹೆಚ್ಚಿಸಲಾಗಿದೆ.

ಇದೀಗ ಜಾವಾ ಪೆರಾಕ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.06 ಲಕ್ಷಗಳಾಗಿದೆ. ಜಾವಾ ಮೋಟಾರ್‌ಸೈಕಲ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಹಲವು ದ್ವಿಚಕ್ರ ಕಂಪನಿಗಳು ಕೂಡ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಇದಕ್ಕೆ ಹಲವು ಕಾರಣಗಳಿವೆ.

ಜಾವಾ ಮೋಟಾರ್‌ಸೈಕಲ್ ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಜಾವಾ ಪೆರಾಕ್ ಬಾಬಾರಿ ಶೈಲಿಯ ವಿನ್ಯಾಸವನ್ನು ಹೊಂದಿರುವ ಬೈಕ್ ಆಗಿದೆ.

ಬಾಬರ್ ಶೈಲಿಯ ವಿಶಿಷ್ಟವಾದ ಜಾವಾ ಪೆರಾಕ್ ಬೈಕ್ ಉದ್ದವಾದ ವ್ಹೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್ ಅನ್ನು ಹೊಂದಿದೆ. ಅದರ ಬಾರ್-ಎಂಡ್ ರೌಂಡ್ ಮೀರರ್ ಗಳು, ಫ್ಲೋಟಿಂಗ್ ಶೈಲಿಯ ಸಿಂಗಲ್-ಪೀಸ್ ಸೀಟ್, ಅಂಡರ್ ಸೀಟ್ ಟೈಲ್ ಲ್ಯಾಂಪ್, ಫೆಂಡರ್‌ಗಳು ಮತ್ತು ಡ್ಯುಯಲ್ ಸ್ಲ್ಯಾಷ್-ಕಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಇನ್ನು ಜಾವಾ ಪೆರಾಕ್ ಬೈಕಿನಲ್ಲಿ ಓಲ್ಡ್ ಸ್ಕೋಲ್ ವಿನ್ಯಾಸದ ರೌಂಡ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಒಳಗೊಂಡಿದೆ

ಇನ್ನು ಈ ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ 334 ಸಿಸಿ ಎಂಜಿನ್ 30 ಬಿಹೆಚ್‌ಪಿ ಪವರ್ ಮತ್ತು 31 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನ ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಫೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ.

ಇನ್ನು ಜಾವಾ ಪೆರಾಕ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಈ ಹೊಸ ಜಾವಾ ಪೆರಾಕ್ ಬೈಕ್ 175 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 14 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕಿನಲ್ಲಿ 18-17-ಇಂಚಿನ ಸ್ಪೋಕ್ ವ್ಹೀಲ್ ಅನ್ನು ಹೊಂದಿವೆ.

ಜಾವಾ ಪೆರಾಕ್ ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಈ ಬೆಲೆ ಏರಿಕೆಯಿಂದ ಜಾವಾ ಪೆರಾಕ್ ತುಸು ದುಬಾರಿಯಾಗಿದೆ. ಇದರಿಂದಾಗಿ ಜಾವಾ ಪೆರಾಕ್ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.


Click it and Unblock the Notifications








