ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ದೇಶಿಯ ಮಾರುಕಟ್ಟೆ ಭಾರೀ ನೀರಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಜಾವಾ ಕ್ಲಾಸಿಕ್ ಬೈಕ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜಾವಾ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಿದ ನಂತರ ಕ್ಲಾಸಿಕ್ ಲೆಜೆಂಡ್ ಕಂಪನಿಯು ಇದೀಗ ಮತ್ತಷ್ಟು ಹೊಸ ಯೋಜನೆಗಳಿಗೆ ಚಾಲನೆ ನೀಡುವ ಸಿದ್ದತೆಯಲ್ಲಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಭಾರತದಲ್ಲಿ ಜಾವಾ ಬೈಕ್‌ಗಳನ್ನು ಈಗಾಗಲೇ ಹೊಸ ರೂಪದೊಂದಿಗೆ ಬಿಡುಗಡೆ ಮಾಡಿರುವ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಯಜ್ಡಿ ಕ್ಲಾಸಿಕ್ ಬೈಕ್‌ಗಳನ್ನು ಸಹ ಹೊಸ ಎಂಜಿನ್ ಮತ್ತು ನವೀಕರಿಸಿದ ವಿನ್ಯಾಸದಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಯೋಜನೆಯಲ್ಲಿ ಭವಿಷ್ಯ ವಾಹನಗಳಾದ ಎಲೆಕ್ಟ್ರಿಕ್ ಮಾದರಿಗಳ ಮೇಲೂ ಹೆಚ್ಚಿನ ಗಮನಹರಿಸಲಾಗುತ್ತಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಕ್ಲಾಸಿಕ್ ಲೆಜೆಂಡ್ ಕಂಪನಿಯು ಹೊಸ ಬೈಕ್‌ಗಳನ್ನು ವಿವಿಧ ಎಂಜಿನ್‌ ಆಯ್ಕೆಯೊಂದಿಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ಮಾದರಿಯಲ್ಲೂ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮತ್ತೊಮ್ಮೆ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಭಾರತದಲ್ಲಿ ಜಾವಾ ಬೈಕ್‌ಗಳನ್ನು ಹೊಸ ರೂಪದೊಂದಿಗೆ ಬಿಡುಗಡೆ ಮಾಡಿರುವ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯಜ್ಡಿ ರೋಡ್ ಕಿಂಗ್ ಬೈಕ್‌ ಮಾದರಿಯನ್ನು ಸಹ ಹೊಸ ವಿನ್ಯಾಸದಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಹೊಸ ಬೈಕ್ ಮಾದರಿಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಗಳು ಸಹ ಸ್ಥಾನ ಪಡೆದಿವೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆಯೇ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮತ್ತು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಜಾವಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯ ಕುರಿತಂತೆ ಮಾತನಾಡಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯ ಸಿಇಒ ಅಶಿಸ್ ಸಿಂಗ್ ಜೋಶಿ ಅವರು 2022ರ ಮಧ್ಯಂತರದಲ್ಲಿ ಮೊದಲ ಇವಿ ಬೈಕ್ ಬಿಡುಗಡೆಯಾಗುವುದು ಖಚಿತಪಡಿಸಿದ್ದು, ಭವಿಷ್ಯ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಭವಿಷ್ಯ ವಾಹನಗಳ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಸದ್ಯ ಜಾವಾ ಮತ್ತು ಯಜ್ಡಿ ಬೈಕ್‌ಗಳ ಮರು ನಿರ್ಮಾಣ ಮತ್ತು ಮಾರಾಟದ ಹಕ್ಕು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿ ಬಳಿಯಿದ್ದು, ಇದು ಮಹೀಂದ್ರಾ ಅಂಗಸಂಸ್ಥೆಯಾಗಿ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಜಾವಾ, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯೇ ಅಭಿವೃದ್ದಿಗೊಳಿಸಿ ನಿರ್ಮಾಣ ಮಾಡುತ್ತಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಅಸಲಿಗೆ ಜಾವಾ ಮತ್ತು ಯೆಜ್ಡಿ ಕಂಪನಿಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್‌‌ಸೈಕಲ್ ಕಂಪನಿಯ ಪಾಲಾಗಿದ್ದು, ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬಿಎಸ್ಎ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ನಂತರ ಯಜ್ಡಿ ಬೈಕ್‌ಗಳನ್ನು ಸಹ ಪ್ರಸ್ತುತ ಮಾರುಕಟ್ಟೆ ಬೇಡಿಕೆ ಅನುಸಾರ ಉತ್ಪಾದನೆ ಪುನಾರಂಭಿಸುವ ಬಗ್ಗೆ ಯೋಜನೆ ರೂಪಿಸಿವೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಜಾವಾ ಹೊಸ ಕ್ಲಾಸಿಕ್ ಬೈಕ್‌ಗಳು 300ಸಿಸಿ ವಿಭಾಗದಲ್ಲಿ ಸದ್ದು ಮಾಡಲಿದ್ದರೆ ಯಜ್ಡಿ ಹೊಸ ಬೈಕ್ ಮಾದರಿಗಳು 250ಸಿಸಿ, 650 ಸಿಸಿ ಸಾಮರ್ಥ್ಯ ಎಂಜಿನ್‌‌ನೊಂದಿಗೆ ಮಾರುಕಟ್ಟೆ ಲಗ್ಗೆಯಿಡಲಿದ್ದು, ರೆಟ್ರೋ ಲುಕ್‌ನೊಂದಿಗೆ ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಇದಷ್ಟೇ ಅಲ್ಲದೇ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಕೆಲವು ಪ್ರೀಮಿಯಂ ಬೈಕ್‌ಗಳನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಬಿಎಸ್ಎ 550ಸಿಸಿ, 750ಸಿಸಿ ಬೈಕ್‌ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆಸಿದೆ.

ಜಾವಾ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಹಿತಿ ಬಹಿರಂಗ

ಜೊತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಎಲೆಕ್ಟ್ರಿಕ್ ಕ್ಲಾಸಿಕ್ ಬೈಕ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆಯಿದ್ದು, ಜಾವಾ ಬೈಕಿನಲ್ಲೂ ಕೂಡಾ ಎಲೆಕ್ಟ್ರಿಕ್ ಆವೃತ್ತಿಯನ್ನು ಅಭಿವೃದ್ದಿಗೊಳ್ಳುತ್ತಿರುವುದಾಗಿ ಕ್ಲಾಸಿಕ್ ಲೆಜೆಂಡ್ ಕಂಪನಿ ಇದೀಗ ಖಚಿತಪಡಿಸಿದೆ.

More from DriveSpark

Article Published On: Saturday, July 31, 2021, 11:33 [IST]
English summary
Jawa Revealed First Electric Motorcycle Launch Timeline. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+