ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ದೆಹಲಿ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಕೊಮಾಕಿ ಶೀಘ್ರದಲ್ಲೇ ಮತ್ತಷ್ಟು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಇವಿ ವಾಹನಗಳಲ್ಲಿ ಕಂಪನಿಯ ವೆನಿಸ್ ಎಂಬ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಡೀಲರ್‌ಶಿಪ್ ಸರಪಳಿಯನ್ನು ಹೊಂದಿರುವ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಕೊಮಾಕಿ ಕಂಪನಿಯು ಹೊಸ ವೆನಿಸ್ ಇವಿ ಸ್ಕೂಟರ್ ಮಾದರಿಯನ್ನು ವಿವಿಧ ಹತ್ತು ಬಣ್ಣಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದಾಗಿ ಹೇಳಿಕೊಂಡಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ವೆನಿಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪುನರುತ್ಪಾದಕ(ರಿಜನರೇಟ್) ಬ್ರೇಕಿಂಗ್, ರಿಪೇರಿ ಸ್ವಿಚ್‌ಗಳು ಮತ್ತು ಮೊಬೈಲ್ ಸಂಪರ್ಕದಂತಹ ಹೊಸ ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಹೊಸ ಸ್ಕೂಟರ್‌ನಲ್ಲಿ ರಿಪೇರಿ ಸ್ವಿಚ್ ಮತ್ತು ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಂ ನಂತಹ ಎಲ್ಲಾ ಆಧುನಿಕ ವೈಶಿಷ್ಟ್ಯತೆಗಳೊಂದಿಗೆ ಸಜ್ಜುಗೊಂಡಿದ್ದು, ಹೀಗಾಗಿ ಕಂಪನಿಯು ಹೊಸ ಇವಿ ಸ್ಕೂಟರ್ ಮೂಲಕ ಭಾರತೀಯ ರಸ್ತೆಗಳಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುವುದಾಗಿ ಹೇಳಿಕೊಂಡಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಜೊತೆಗೆ ಕೊಮಾಕಿ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರಸ್ತುತ ಮಾದರಿಗಳಿಂತಲೂ ದೊಡ್ಡ ಆಸನ ಮತ್ತು ಹೆಚ್ಚುವರಿ ಶೇಖರಣಾ ಬಾಕ್ಸ್ ಸೌಲಭ್ಯ ಹೊಂದಿರಲಿದ್ದು, ಹೊಸ ಸ್ಕೂಟರಿನ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ಬಗ್ಗೆ ಕಂಪನಿಯು ಯಾವುದೇ ತಾಂತ್ರಿಕ ಮಾಹಿತಿಯನ್ನು ಹಂಚಿಕೊಂಡಿಲ್ಲ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಆದಾಗ್ಯೂ ಹೊಸ ಇವಿ ಸ್ಕೂಟರ್ ಮಾದರಿಯು ರೂ. 1 ಲಕ್ಷಕ್ಕಿಂತ ಕಡಿಮೆಯಿರುವ ನಿರೀಕ್ಷೆಯಿದ್ದು, ಕಂಪನಿಯು ಹೊಸ ಸ್ಕೂಟರ್‌ನ ಟೀಸರ್ ಚಿತ್ರವನ್ನು ಮಾತ್ರ ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಮಾದರಿಯು ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಮಾರುಕಟ್ಟೆ ಪ್ರವೇಶಿಸಿರುವ ಹೊಸ ಇವಿ ಸ್ಕೂಟರ್‌ಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಜೊತೆಗೆ ಕೊಮಾಕಿ ಕಂಪನಿಯು ಶೀಘ್ರದಲ್ಲೇ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೈ ಸ್ಪೀಡ್ ಇವಿ ಸ್ಕೂಟರ್ ಜೊತೆಗೆ ಒಂದು ಕ್ರೂಸರ್ ಬೈಕ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಮಾದರಿಯ ನ್ಯೂ ಜನರೇಷನ್ ಗ್ರಾಹಕರ ಬೇಡಿಕೆಯೆಂತೆ ಹೊಸ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪ್ರೇರಣೆಯೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಬೈಕ್ ಮಾದರಿಯ ಮೊದಲ ಟೀಸರ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಕೊಮಾಕಿ ಕಂಪನಿಯು ಸದ್ಯ ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಲೋ-ಸ್ಪೀಡ್ ಮಾದರಿಗಳಲ್ಲಿ ಎಕ್ಸ್‌ಜಿಟಿ ಸರಣಿಗಳನ್ನು ಮತ್ತು ಹೈ ಸ್ಪೀಡ್ ಮಾದರಿಗಳಲ್ಲಿ ಟಿಎನ್ 95, ಎಂ-5, ಎಸ್ಇ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಲೋ ಸ್ಪೀಡ್ ಸ್ಕೂಟರ್‌ಗಳಲ್ಲಿ ಎಕ್ಸ್‌ಜಿಟಿ ಸರಣಿಯ ಎಕ್ಸ್ ಒನ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಲೀಡ್ ಆ್ಯಸಿಡ್ ಮತ್ತು ಲೀಥಿಯಂ ಅಯಾಲ್ ಬ್ಯಾಟರಿ ಆಯ್ಕೆ ಹೊಂದಿರುವ ಈ ಸ್ಕೂಟರ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಕೊಮಾಕಿ ಟಿಎನ್95 ಸ್ಕೂಟರ್ ಮಾದರಿಯು ಸದ್ಯ ಕಂಪನಿಯು ಹೈ ಎಂಡ್ ಪ್ರೀಮಿಯಂ ಮಾದರಿಯಾಗಿದ್ದು, ಕಂಪನಿಯು ಇತ್ತೀಚೆಗೆ ಎಂಎಕ್ಸ್3 ಎನ್ನುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿತ್ತು.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಸಾಮಾನ್ಯ ಮಾದರಿಯ 125 ಸಿಸಿ ಬೈಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಎಂಎಕ್ಸ್3 ಇವಿ ಬೈಕ್ ಮಾದರಿಯು ಪ್ರತಿ ಚಾರ್ಜ್‌ಗೆ ವಿವಿಧ ರೈಡಿಂಗ್ ಮೋಡ್‌ಗಳಿಗೆ ಅನುಗುಣವಾಗಿ 85 ಕಿ.ಮೀ ನಿಂದ 100 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಇವಿ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 95 ಸಾವಿರಕ್ಕೆ ನಿಗದಿಪಡಿಸಲಾಗಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಹೊಸ ಬೈಕ್ ಮಾದರಿಯು ಒಂದು ಬಾರಿ ಪೂರ್ಣ 3 ರಿಂದ ನಾಲ್ಕು ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಪೂರ್ಣ ಪ್ರಮಾಣದಲ್ಲಿ ಒಂದು ಬಾರಿ ಚಾರ್ಜಿಂಗ್ ಮಾಡಲು 1.5 ಯುನಿಟ್ ವಿದ್ಯುತ್ ಬಳಕೆ ಮಾಡುತ್ತದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಒಂದು ಬಾರಿ ಚಾರ್ಜ್ ಮಾಡಲು ಗರಿಷ್ಠ ರೂ.20 ವೆಚ್ಚದೊಂದಿಗೆ 100 ಕಿ.ಮೀ ಮೈಲೇಜ್ ಹಿಂಪಡೆದುಕೊಳ್ಳಬಹುದಾಗಿದ್ದು, ಪೆಟ್ರೋಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಉಳಿತಾಯವಾಗಲಿದೆ.

 ಶೀಘ್ರದಲ್ಲೇ ಹೊಸ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೊಮಾಕಿ

ಇನ್ನು ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

More from DriveSpark

Article Published On: Monday, November 15, 2021, 9:45 [IST]
English summary
Komaki to introduce high speed electric scooter soon
Read more on ಕೊಮಾಕಿ komaki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+