ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಕೆಟಿಎಂ 250 ಅಡ್ವೆಂಚರ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಉತ್ತಮ ಅವಕಾಶವಾಗಿದೆ. ಕೆಟಿಎಂ ಕಂಪನಿಯು ತನ್ನ 250 ಅಡ್ವೆಂಚರ್ ಬೈಕಿನ ಬೆಲೆಯಲ್ಲಿ ಬರೊಬ್ಬರಿ ರೂ.25 ಸಾವಿರವನ್ನು ಕಡಿತಗೊಳಿಸಿದೆ. ಈಗ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆಯು ರೂ.2.30 ಲಕ್ಷಗಳಾಗಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಕೆಟಿಎಂ 250 ಅಡ್ವೆಂಚರ್ ಬೈಕಿನ ಹಿಂದಿನ ಬೆಲೆಯು ರೂ.2.55 ಲಕ್ಷಗಳಾಗಿದೆ. ಇನ್ನು ವಿಶೇಷ ಕೊಡುಗೆಯು 14 ಜುಲೈನಿಂದ ಆಗಸ್ಟ್ 31 ರವರೆಗಿನ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಕೆಟಿಎಂ 250 ಅಡ್ವೆಂಚರ್ ಬೈಕಿನ ಮಾರಾಟವನ್ನು ಹೆಚ್ಚಿಸಲು ಸೀಮಿತ ಅವಧಿಯಲ್ಲಿ ಬೆಲೆಯನ್ನು ಕಡಿತಗೊಳಿಸಿರಬಹುದು ಎಂದು ನಿರೀಕ್ಷಿಸುತ್ತೇವೆ, ಕೆಲವು ದಿನಗಳ ಹಿಂದೆ, ಬಜಾಜ್ ಆಟೋ ಕಂಪನಿಯು ತನ್ನ ಡೊಮಿನಾರ್ 250 ಬೈಕಿನ ಬೆಲೆಯನ್ನು ರೂ.16,500 ಗಳವರೆಗೆ ಕಡಿತಗೊಳಿಸಿತು.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಕೆಟಿಎಂ 250 ಅಡ್ವೆಂಚರ್ ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 248.8 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 30 ಬಿಹೆಚ್‍ಪಿ ಪವರ್ ಮತ್ತು 24 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್‌ನಂತೆ ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ. ಈ ಕೆಟಿಎಂ ಅಡ್ವೆಂಚರ್ ಬೈಕ್ ಆಕರ್ಷಕ ಫೀಚರ್ಸ್ ಮತ್ತು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಈ ಕೆಟಿಎಂ ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43ಎಂಎಂ ಡಬ್ಲ್ಯುಪಿ ಅಪ್‌ಸೈಡ್ ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ 170ಎಂಎಂ ಟ್ರಾವೆಲ್ ಮೊನೊ ಶಾರ್ಕ್ ಸೆಟಪ್ ಅನ್ನು ಒಳಗೊಂಡಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಈ ಅಡ್ವೆಂಚರ್ ಬೈಕಿನ ಹಿಂಭಾಗದ ಸಸ್ಪೆಂಕ್ಷನ್ ಸೌಲಭ್ಯವನ್ನು 177ಎಂಎಂ ವರೆಗೆ ಎತ್ತರ ಹೋಂದಾಣಿಕೆ ಮಾಡಿಕೊಳ್ಳಬಹುದಾಗಿದ್ದು, ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಕೆಟಿಎಂ 250 ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230-ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಈ ಬೈಕಿನಲ್ಲಿ ಮುಂಭಾಗದಲ್ಲಿ 19-ಇಂಚಿನ ಮತ್ತು ಹಿಂಬದಿಯಲ್ಲಿ 17-ಇಂಚಿನ ಟ್ಯೂಬ್‌ಲೆಸ್ ಟೈರ್ ನೀಡಲಾಗಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಈ ಅಡ್ವೆಂಚರ್ ಬೈಕಿನಲ್ಲಿ ಹಾಲೋಜೆನ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‍‌ಎಲ್ಎಸ್, ಎಲ್ಇಡಿ ಟೈಲ್ ಲೈಟ್ ಮತ್ತು ಟರ್ನ್ ಇಂಡಿಕೇಟರ್ ಮತ್ತು ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಬೈಕ್ 14.5-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಕೆಟಿಎಂ 250 ಅಡ್ವೆಂಚರ್ ಬೈಕಿನ ಬೆಲೆ

ಇನ್ನು ಕೆಟಿಎಂ 250 ಅಡ್ವೆಂಚರ್ ಬೈಕಿನ 855ಎಂಎಂ ಎತ್ತರದ ಸೀಟ್ ಅನ್ನು ಹೊಂದಿದೆ. ಈ ಕೆಟಿಎಂ 250 ಅಡ್ವೆಂಚರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹೊಸ ಮಿಟಿಯೊರ್ 350 ಜೊತೆಗೆ ದುಬಾರಿ ಬೆಲೆಯ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಕೆಟಿಎಂ ktm
English summary
KTM 250 Adventure Price Drop. Read In Kannada.
Story first published: Wednesday, July 14, 2021, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X