ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ ಬಹುನಿರೀಕ್ಷಿತ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳನ್ನು ಭಾರತೀಯ ಮಾರುಕಟ್ತೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕೆಟಿಎಂ ಆರ್‌ಸಿ 200(KTM RC 200) ಬೈಕಿನ ಬೆಲೆಯು ರೂ.2.09 ಲಕ್ಷಗಳಾದರೆ, ಕೆಟಿಎಂ ಆರ್‌ಸಿ 125(KTM RC 125) ಬೈಕಿನ ಬೆಲೆಯು ರೂ.1.82 ಲಕ್ಷಗಳಾಗಿದೆ, ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಈ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಕೆಟಿಎಂ ಕ್‌ಗಳು ಹೊಸ ಚಾಸಿಸ್, ಕ್ಲಾಸ್ ಲೀಡಿಂಗ್ ಕಾರ್ಯಕ್ಷಮತೆ, ನವೀಕರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ಗ್ರ್ಯಾಂಡ್ ಪ್ರಿಕ್ಸ್-ಪ್ರೇರಿತ ಸ್ಟೈಲಿಂಗ್‌ನೊಂದಿಗೆ ಪ್ರಮುಖ ಅಪ್‌ಡೇಟ್ ನೀಡಲಾಗಿದೆ. ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಅನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಟಿಎಂ ಇಂಡಿಯಾ ಹೇಳಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಇದರಲ್ಲಿ ಮೊದಲಿಗೆ 2022ರರ ಕೆಟಿಎಂ ಆರ್‌ಸಿ 200 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ ಹೊಸ ಹೊಂದಾಣಿಕೆ ಹ್ಯಾಂಡಲ್‌ಬಾರ್‌ಗಳು, ಎಲ್‌ಸಿಡಿ ಡ್ಯಾಶ್‌ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ 9.5 ಲೀಟರ್‌ನಿಂದ 13.7 ಲೀಟರ್‌ಗಳಿಗೆ ಹೆಚ್ಚಳ ಮಾಡಿದ್ದಾರೆ, ಇದರೊಂದಿಗೆ ಹೆಡ್‌ಲ್ಯಾಂಪ್ ಮತ್ತು ದೊಡ್ಡ ಏರ್‌ಬಾಕ್ಸ್ ಅನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಇದರಲ್ಲಿ ಈ ಸ್ಪ್ಲಿಟ್ ಸ್ಟೀಲ್ ಟ್ರೆಲಿಸ್ ಫ್ರೇಮ್ ಹಗುರ ಮತ್ತು ಗಟ್ಟಿಯಾಗಿರುತ್ತದೆ ಮತ್ತು ಸೂಪರ್ ಮೋಟೋ ಎಬಿಎಸ್ ಅನ್ನು ಹೊಸ ಬೈಕಿನಲ್ಲಿ ಪರಿಚಯಿಸಲಾಗಿದೆ. ವ್ಹೀಲ್ ಗಳು ಸಹ ಹೆಚ್ಚಿನ ಸಾಮರ್ಥ್ಯ ಮತ್ತು ಹಗುರವಾಗಿರುತ್ತವೆ ಆದರೆ ಆಂಕರೇಜ್ ಅನ್ನು ಹೊಸ 320 ಎಂಎಂ ಫ್ರಂಟ್ ಡಿಸ್ಕ್ ಮತ್ತು 230 ಎಂಎಂ ರಿಯರ್ ಡಿಸ್ಕ್ ಬ್ರೇಕ್‌ಗಳಿಂದ ನಿರ್ವಹಿಸಲಾಗುತ್ತದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಇನ್ನು ವಿನ್ಯಾಸಕ್ಕೆ ಸಂಬಂಧಿಸಿದಂತೆ, ಹೊಸ ಫೇರಿಂಗ್ ಸುಧಾರಿತ ಏರೋಡೈನಾಮಿಕ್ ಹೊಂದುವಂತೆ ಹೇಳಲಾಗಿದೆ. ಇತರ ಮುಖ್ಯಾಂಶಗಳು ರೇಡಿಯೇಟರ್, ಗಟ್ಟಿಯಾದ ಆಕ್ಸಲ್, ಅನನ್ಯ ಲೇಸರ್ ವಿನ್ಯಾಸದೊಂದಿಗೆ ವಿಂಡ್‌ಸ್ಕ್ರೀನ್, ಫ್ರಂಟ್ ಬ್ಲಿಂಕರ್‌ಗಳೊಂದಿಗೆ ಇಂಟಿಗ್ರೇಟೆಡ್ ಫ್ರಂಟ್ ಪೊಸಿಷನ್ ಲ್ಯಾಂಪ್ ಮತ್ತು ಅಲ್ಯೂಮಿನಿಯಂ ಕ್ಯಾಸ್ಟ್ ಮತ್ತು ಸ್ಪ್ಲಿಟ್ ಪಿಲಿಯನ್ ಗ್ರ್ಯಾಬ್ ಆಗಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಇಂಡಿಯಾ-ಸ್ಪೆಕ್ 2022ರ ಕೆಟಿಎಂ ಆರ್‌ಸಿ 200 ಅಂತಾರಾಷ್ಟ್ರೀಯ ಆವೃತ್ತಿಯಂತೆ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ವ್ಯವಸ್ಥೆಯನ್ನು ಒಳಗೊಂಡಿದೆ. ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 200 ಅಪೆಕ್ಸ್ ಬಿಗ್ ಪಿಸ್ಟನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಹೊಸ WP ಅಪೆಕ್ಸ್ ಶಾಕ್ ಅಬ್ಸಾರ್ಬರ್ ಹೊಂದಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಅದೇ 199.5 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫೋರ್-ಸ್ಟ್ರೋಕ್ ಫ್ಯುಯೆಲ್-ಇಂಜೆಕ್ಟೆಡ್ ಇಂಜಿನ್ ಅನ್ನು ಟ್ವಿನ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳೊಂದಿಗೆ ಬಳಸಲಾಗುತ್ತದೆ. ಇನ್ನು ದೊಡ್ಡ ಏರ್‌ಬಾಕ್ಸ್ ಎಂಜಿನ್ ಅನ್ನು ಸುಲಭವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ, ಸುಧಾರಿತ ಸ್ಪಂದನೆ ಮತ್ತು ಹೆಚ್ಚಿದ ಟಾರ್ಕ್ ಅನ್ನು ಒದಗಿಸುತ್ತದೆ. ಈ ಬೈಕಿನ ಹೊಸ ಬಾಡಿವರ್ಕ್ ಆಗಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಇನ್ನು ಕೆಟಿಎಂ ಆರ್‌ಸಿ 125 ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕಿನ ಹಿಂದಿನ ಮಾದರಿಗೆ ಹೋಲಿಸಿದರೆ ಕಡಿಮೆ ಉದ್ದವನ್ನು ಹೊಂದಿದೆ. ಬದಲಾದ ಆಯಾಮಗಳಿಗೆ ಕಾರಣ ಹೊಸ ವಿನ್ಯಾಸ; ಹೊಸ ತಲೆಮಾರಿನ ಆರ್‌ಸಿ ಸರಣಿಯು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಇನ್ನೊಂದು ಪ್ರಮುಖ ಬದಲಾವಣೆ ಹೊಸ ಫ್ರೇಮ್, ನ್ಯೂ ಜನರೇಷನ್ ಆರ್‌ಸಿ ಸರಣಿಯು ಸ್ಪ್ಲಿಟ್-ಟ್ರೆಲಿಸ್ ಫ್ರೇಮ್ ಅನ್ನು ಪಡೆಯುತ್ತದೆ, ಹಿಂಭಾಗದಲ್ಲಿ ಬೋಲ್ಟ್-ಆನ್ ಸಬ್‌ಫ್ರೇಮ್, ಪ್ರಸ್ತುತ ಡ್ಯೂಕ್ ಸರಣಿಯಂತೆಯೇ ಇದೆ. ಈ ಬೈಕಿನಲ್ಲಿ ಸ್ವಲ್ಪ ಎತ್ತರಿಸಿದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ಸೆಂಟರ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 125 ದೊಡ್ಡ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ. ಡಬ್ಲ್ಯೂಪಿ ಅಪೆಕ್ಸ್ ಬಿಗ್ ಪಿಸ್ಟನ್ ಫ್ರಂಟ್ ಫೋರ್ಕ್ಸ್, ರಿಯರ್ ಮೊನೊಶಾಕ್, ಎರಡೂ ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಎಲ್ಲಾ ಹೊಸ ಎಲ್‌ಸಿಡಿ ಡ್ಯಾಶ್ ಡಿಸ್‌ಪ್ಲೇ, ಎಲ್ಲಾ ಹೊಸ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಸೂಪರ್‌ಮೋಟೋ ಮೋಡ್‌ನೊಂದಿಗೆ ಹೊಸ ಎಬಿಎಸ್ ಅನ್ನು ಪಡೆದುಕೊಂಡಿದೆ,

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 125 ಬೈಕ್ 13.7 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ, ಈ ಹೊಸ ಬೈಕಿನಲ್ಲಿ ಎಂಜಿನ್ ಸಂಪೂರ್ಣವಾಗಿ ಬದಲಾಗದೆ ಉಳಿಯುತ್ತದೆ. ಈ ಬೈಕಿನಲ್ಲಿ 124.71 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,250 ಆರ್‌ಪಿಎಂನಲ್ಲಿ 15 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ, ಭಾರತ-ಸ್ಪೆಕ್ ಮಾದರಿಯು ಸ್ಲಿಪ್/ಅಸಿಸ್ಟ್ ಕ್ಲಚ್ ಅಥವಾ ವೆಚ್ಚವನ್ನು ಕಡಿಮೆ ಮಾಡಲು ಕ್ವಿಕ್‌ಶಿಫ್ಟರ್ ಅನ್ನು ಪಡೆಯುವುದಿಲ್ಲ. ಈ ಬೈಕಿಗೆ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಅದರ ಹತ್ತಿರದ ಪ್ರತಿಸ್ಪರ್ಧಿಯು ಇತ್ತೀಚೆಗೆ ಬಿಡುಗಡೆಗೊಂಡ ಯಮಹಾ ವೈಝಡ್ಎಫ್-ಆರ್5 ವಿ4 ಬೈಕ್ ಆಗಿದೆ. ಇದು ಹೆಚ್ಚು ಕೈಗೆಟುಕುವಂತಿದೆ

ಭಾರತದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೊಂಡ 2022ರ KTM RC 200, KTM RC 125 ಬೈಕ್‌ಗಳು

ಕೆಟಿಎಂ ತನ್ನ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳ ಖರೀದಿಗಾಗಿ ಅಧಿಕೃತ ಕೆಟಿಎಂ ಡೀಲರ್‌ಶಿಪ್‌ಗಳು ಬುಕ್ಕಿಂಗ್ ಆರಂಭಿಸಿದೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕ್ಕೊಳ್ಳಬಹುದು. ನಿರೀಕ್ಷಿತ ಗ್ರಾಹಕರು ವಿಶೇಷ ಹಣಕಾಸು ಯೋಜನೆಯನ್ನು ಪಡೆಯಬಹುದು, ಇನ್ನು ಮುಂದಿನ ತಿಂಗಳಿನಿಂದ ಈ ಹೊಸ ಕೆಟಿಎಂ ಆರ್‌ಸಿ ಬೈಕ್‌ಗಳು ಶೋರೂಂಗಳನ್ನು ತಲುಪಲು ಆರಂಭವಾಗುತ್ತದೆ,

Most Read Articles

Kannada
Read more on ಕೆಟಿಎಂ ktm
English summary
Ktm launched updated 2022 rc 125 and rc 200 motorcycles in india prices details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X