ಭಾರತದಲ್ಲಿ ಬಿಡುಗಡೆಯಾಗಲಿವೆ ನ್ಯೂ ಜನರೇಷನ್ KTM RC390, RC200 & RC125 ಬೈಕ್‌ಗಳು

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ KTM ತನ್ನ RC ಸರಣಿಯಲ್ಲಿರುವ ಬೈಕ್‌ಗಳ ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. KTM RC ಸರಣಿಯಲ್ಲಿ RC390, RC200 ಮತ್ತು RC125 ಬೈಕ್‌ಗಳನ್ನು ಒಳಗೊಂಡಿದೆ.

ಇದೀಗ KTM ಕಂಪನಿಯು ನ್ಯೂ ಜನರೇಷನ್ RC ಬೈಕ್‌ಗಳ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಮುಂಬರುವ ವಾರಗಳಲ್ಲಿ ಈ ಬೈಕ್‌ಗಳನ್ನು ಜಾಗತಿಕ ಅನಾವರಣಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಟೀಸರ್ ನಲ್ಲಿ ನ್ಯೂ ಜನರೇಷನ್ RC ಬೈಕ್‌ಗಳ ಕೆಲವು ಭಾಗಶಃ ನೋಟವನ್ನು ಮಾತ್ರ ನೀಡುತ್ತದೆ.ಈಗಿರುವ ಮಾದರಿಗಳಿಗೆ ಹೋಲಿಸಿದರೆ, ನ್ಯೂ ಜನರೇಷನ್ ಮಾದರಿಗಳು ತುಸು ದುಬಾರಿಯಾಗಿರಬಹುದು. ಇವುಗಳಿಗೆ ರೂ.7,000 ದಿಂದ ರೂ.8,000 ವರೆಗೂ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ ಹೊಸ KTM RC390 ಮತ್ತು RC200 ಬುಕ್ಕಿಂಗ್‌ಗಳನ್ನು ಈಗಾಗಲೇ ಡೀಲರ್‌ಶಿಪ್ ಮಟ್ಟದಲ್ಲಿ ಪ್ರಾರಂಭಿಸಿದೆ. ಇದಕ್ಕೆ ರೂ.1,000 ದಿಂದ ರೂ.10,000 ವರೆಗೆ ಟೋಕನ್ ಮೊತ್ತದಲ್ಲಿ ಆರಂಭಿಸಲಾಗಿದೆ. ನಂತರ ಹೊಸ ಬೈಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಈ ಬುಕ್ಕಿಂಗ್ ಮೊತ್ತವನ್ನು ಮರುಪಾವತಿಸಲಾಗುತ್ತದೆ.

ಸ್ಪೈ ಚಿತ್ರಗಳಿಂದ 2021ರ KTM RC ಸರಣಿಯ ಬೈಕ್‌ಗಳ ಹೊಸ ವಿನ್ಯಾಸ ಶೈಲಿಯ ಮಾಹಿತಿಗಳು ಬಹಿರಂಗವಾಗಿವೆ. ಇದು ಫೇರಿಂಗ್ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು ಮತ್ತು ವಿಶಾಲವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ.

ಇನ್ನು ತೀಕ್ಷ್ಣವಾದ ಮುಂಭಾಗದ ಫೇರಿಂಗ್, ಎತ್ತರದ ಹ್ಯಾಂಡಲ್‌ಬಾರ್ ಮತ್ತು ಪರಿಷ್ಕೃತ ಸೀಟ್ ನೊಂದಿಗೆ ಸುಧಾರಿತ ಏರೋಡೈನಾಮಿಕ್ ಸ್ಟೈಲಿಂಗ್ ಮತ್ತು ಸೌಕರ್ಯದ ಅಂಶಕ್ಕೆ ಹೆಚ್ಚಿನದನ್ನು ನೀಡುತ್ತದೆ. ಇನ್ನು ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ TFT ಡಿಸ್‌ಪ್ಲೇಯನ್ನು ಸ್ವಲ್ಪ ಮೇಲಕ್ಕೆ ಬದಲಾಯಿಸಲಾಗಿದೆ.ಹೊಸ RC ಸರಣಿಯಲ್ಲಿರುವ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಯುನಿಟ್ ಅನ್ನು ಪಡೆಯುತ್ತದೆ.

ಇತರ ಪ್ರಮುಖ ಅಪ್‌ಡೇಟ್‌ಗಳಲ್ಲಿ ಹೊಸ ಬಾಡಿ ಗ್ರಾಫಿಕ್ಸ್, ಸೆಂಟ್ರಲ್ ಎಲ್‌ಇಡಿ ಹೆಡ್‌ಲ್ಯಾಂಪ್, ದೊಡ್ಡ ಇಂಧನ ಟ್ಯಾಂಕ್, ಲಂಬ ಟೈಲ್‌ಲ್ಯಾಂಪ್‌ಗಳು, ಹೊಸ ವ್ಹೀಲ್ ಗಳು ಮತ್ತು ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸೇರಿವೆ. ಡಿಸ್ಕ್ ಬ್ರೇಕ್‌ಗಳು ಮೊದಲಿಗಿಂತ ದೊಡ್ಡದಾಗಿರಬಹುದು ಮತ್ತು ಹಿಂದಿನ ಫ್ರೇಮ್ ಅನ್ನು ಪರಿಷ್ಕರಿಸಬಹುದು.

ನ್ಯೂ ಜನರೇಷನ್ KTM RC390 ಬೈಕಿನ ಹೊಸ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು. ಈ ಚಿತ್ರಗಳಲ್ಲಿ ಬೈಕ್‌ನ ಸೈಡ್-ಪ್ರೊಫೈಲ್ ಅನ್ನು ಯಾವುದೇ ಮರೆಮಾಚುವಿಕೆ ಇಲ್ಲದೆ ಸ್ಪಷ್ಟವಾಗಿ ಕಾಣಬಹುದು. ಈ ಚಿತ್ರದಲ್ಲಿ ಕಂಡುಬರುವ ಮಾದರಿಯು ನ್ಯೂ ಜನರೇಷನ್ ಆರ್‍‍ಸಿ 390ಯ ಉತ್ಪಾದನೆಗೆ ಸಿದ್ದವಾಗಿರುವ ಮಾದರಿಯಾಗಿದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ನ್ಯೂ ಜನರೇಷನ್ KTM RC390 ಬೈಕಿನ ಬಾಡಿಗೆ ಹೋಲಿಸಿದರೆ ಟೈರ್ ಸಣ್ಣದಾಗಿ ಕಾಣುತ್ತದೆ. ಹೊಸ ಮಾದರಿಯು ಹೆಚ್ಚು ಸಾಂಪ್ರದಾಯಿಕ ಸ್ಪ್ಲಿಟ್ ಸೀಟ್ ವಿನ್ಯಾಸವನ್ನು ಪಡೆಯುತ್ತದೆ, ಜೊತೆಗೆ ಸ್ಪ್ಲಿಟ್ ಪಿಲಿಯನ್ ಗ್ರ್ಯಾಬ್ ರೈಲ್ ಎಲ್ಇಡಿ ಟೈಲೈಟ್ ಹೊಸ ವಿನ್ಯಾಸವನ್ನು ಹೊಂದಿದೆ.

ಕೆಟಿಎಂ ಡ್ಯೂಕ್ ಸರಣಿಯಂತೆಯೇ ಹೊಸ ತಲೆಮಾರಿನ RC ಮಾದರಿಯು ಹಿಂಭಾಗದ ವಿಭಾಗಕ್ಕೆ ಬೋಲ್ಟ್-ಆನ್ ಸಬ್‌ಫ್ರೇಮ್ ಅನ್ನು ಪಡೆಯುತ್ತದೆ. ನ್ಯೂ ಜನರೇಷನ್ KTM RC390 ಬೈಕ್ ಹ್ಯಾಂಡಲ್‌ಬಾರ್‌ಗಳು ತುಂಬಾ ಲೋ-ಸೆಟ್ ಆಗಿ ಕಾಣುತ್ತಿಲ್ಲ, ಈ ಹೊಸ KTM RC390 ಬೈಕಿನ ಮೆಕ್ಯಾನಿಕಲ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಇದರಲ್ಲಿ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು ಎರಡು ಕಡೆಯಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಬಹುದು. ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಹೆಚ್ಚು ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

ಇನ್ನು KTM RC390 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಸಮರ್ಥ ಟ್ರ್ಯಾಕ್-ಬೇಸ್ಡ್ ಬೈಕ್ ಆಗಿದೆ. ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಬಿಡುಗಡೆಯಾಗಲಿದೆ. ಇದು ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯುತ್ತದೆ.

ಇದರಲ್ಲಿ ಹೊಸ KTM RC390 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್‌ಆರ್ 310 ಮತ್ತು ಕವಾಸಕಿ ನಿಂಜಾ 300 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ ಇನ್ನು ಬಹುನಿರೀಕ್ಷಿತ ನ್ಯೂ ಜನರೇಷನ್ RC ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Friday, August 27, 2021, 20:53 [IST]
English summary
Ktm teased new gen rc390 rc200 and rc125 launch soon details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+