ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ KTM RC390, RC200 & RC125 ಬೈಕ್‌ಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ RC ಸರಣಿಯಲ್ಲಿರುವ ಬೈಕ್‌ಗಳ ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. KTM RC ಸರಣಿಯಲ್ಲಿ RC390, RC200 ಮತ್ತು RC125 ಬೈಕ್‌ಗಳನ್ನು ಒಳಗೊಂಡಿವೆ.

ಕೆಟಿಎಂ ಇಂಡಿಯಾ ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ದ RC ಸರಣಿಯು ಭಾರತೀಯ ಮಾರುಕಟ್ಟೆಯನ್ನು ಶೀಘ್ರದಲ್ಲೇ ಬರಲಿದೆ ಎಂದು ಘೋಷಿಸಿದೆ. ನವೀಕರಿಸಿದ RC ಸರಣಿಯನ್ನು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಅನಾವರಣಗೊಳಿಸಲಾಗಿದೆ. ಆದರೆ ಭಾರತ-ಸ್ಪೆಕ್ ಮಾದರಿಗಳು ಅಂತರರಾಷ್ಟ್ರೀಯ ಬೈಕ್‌ಗಳಿಗಿಂತ ಸ್ವಲ್ಪ ಭಿನ್ನವಾಗಿರಬಹುದು. ಭಾರತದಲ್ಲಿ ಬಿಡುಗಡೆಯಾಗಲಿರುವ ನ್ಯೂ ಜನರೇಷನ್ KTM RC ಬೈಕ್‌ಗಳು ಕೆಲವು ಫೀಚರ್ಸ್ ಗಳನ್ನು ಕಳೆದುಕೊಳ್ಳುವ ಸಾದ್ಯತೆಗಳಿದೆ.

ಭಾರತದಲ್ಲಿ ಬಿಡುಗಡೆಯಯಾಗುವ RC125 ಬೈಕ್ ಅಂತರಾಷ್ಟ್ರೀಯ-ಸ್ಪೆಕ್ ಮಾದರಿಯ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯದೇ ಇರಬಹುದು. ಬದಲಾಗಿ, ಕಂಪನಿಯು ಬಜೆಟ್ ಸ್ನೇಹಿ ಸಾಧನಗಳಾದ ಹ್ಯಾಲೊಜೆನ್ ಹೆಡ್‌ಲೈಟ್ ಮತ್ತು ಎಲ್‌ಸಿಡಿ ಇನ್ಸ್ ಟ್ರೂಮೆಂತ್ ಕ್ಲಸ್ಟರ್ ಬದಲಿಗೆ ಎಲ್‌ಇಡಿ ಲೈಟಿಂಗ್ ಮತ್ತು ಕಲರ್ ಟಿಎಫ್ಟಿ ಡಿಸ್‌ಪ್ಲೇ ಅನ್ನು ಅಂತರಾಷ್ಟ್ರೀಯ ಮಾದರಿಯಲ್ಲಿ ಬಳಸಬಹುದು.

ಇನ್ನು RC200 ಕೂಡ ಹ್ಯಾಲೊಜೆನ್ ಹೆಡ್‌ಲೈಟ್ ಮತ್ತು 250 ಅಡ್ವೆಂಚರ್-ಶೈಲಿಯ ಎಲ್‌ಸಿಡಿ ಡಿಸ್ ಪ್ಲೇಯನ್ನು ಹೊಂದಿರುತ್ತದೆ. 2021ರ RC390 ಅಂತರಾಷ್ಟ್ರೀಯ-ಸ್ಪೆಕ್ ಮಾದರಿಯಂತೆಯೇ ಇರುತ್ತದೆ, ಆದರೂ ಭಾರತದಲ್ಲಿ ಬಿಡುಗಡೆಯಾಗುವಾಗ ಬೆಲೆಗಳನ್ನು ಕಡಿಮೆ ಮಾಡಲು ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಫೋರ್ಕ್‌ಗಳನ್ನು ಕಳೆದುಕೊಳ್ಳಬಹುದು.

ಇನ್ನು ಇತ್ತೀಚೆಗೆ ಬಹಿರಂಗಗೊಂಡ ಸ್ಪೈ ಚಿತ್ರಗಳಿಂದ 2021ರ KTM RC ಸರಣಿಯ ಬೈಕ್‌ಗಳ ಹೊಸ ವಿನ್ಯಾಸ ಶೈಲಿಯ ಮಾಹಿತಿಗಳು ಬಹಿರಂಗವಾಗಿವೆ. ಇದು ಫೇರಿಂಗ್ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು ಮತ್ತು ವಿಶಾಲವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುತ್ತದೆ.

ಇದರೊಂದಿಗೆ ತೀಕ್ಷ್ಣವಾದ ಮುಂಭಾಗದ ಫೇರಿಂಗ್, ಎತ್ತರದ ಹ್ಯಾಂಡಲ್‌ಬಾರ್ ಮತ್ತು ಪರಿಷ್ಕೃತ ಸೀಟ್ ನೊಂದಿಗೆ ಸುಧಾರಿತ ಏರೋಡೈನಾಮಿಕ್ ಸ್ಟೈಲಿಂಗ್ ಮತ್ತು ಸೌಕರ್ಯದ ಅಂಶಕ್ಕೆ ಹೆಚ್ಚಿನದನ್ನು ನೀಡುತ್ತದೆ. ಇನ್ನು ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ TFT ಡಿಸ್‌ಪ್ಲೇಯನ್ನು ಸ್ವಲ್ಪ ಮೇಲಕ್ಕೆ ಬದಲಾಯಿಸಲಾಗಿದೆ. ಹೊಸ RC ಸರಣಿಯಲ್ಲಿರುವ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಯುನಿಟ್ ಅನ್ನು ಪಡೆಯುತ್ತದೆ.

ಇತರ ಪ್ರಮುಖ ಅಪ್‌ಡೇಟ್‌ಗಳಲ್ಲಿ ಹೊಸ ಬಾಡಿ ಗ್ರಾಫಿಕ್ಸ್, ಸೆಂಟ್ರಲ್ ಎಲ್‌ಇಡಿ ಹೆಡ್‌ಲ್ಯಾಂಪ್, ದೊಡ್ಡ ಇಂಧನ ಟ್ಯಾಂಕ್, ಲಂಬ ಟೈಲ್‌ಲ್ಯಾಂಪ್‌ಗಳು, ಹೊಸ ವ್ಹೀಲ್ ಗಳು ಮತ್ತು ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಸೇರಿವೆ. ಡಿಸ್ಕ್ ಬ್ರೇಕ್‌ಗಳು ಮೊದಲಿಗಿಂತ ದೊಡ್ಡದಾಗಿರಬಹುದು ಮತ್ತು ಹಿಂದಿನ ಫ್ರೇಮ್ ಅನ್ನು ಕೂಡ ಪರಿಷ್ಕರಿಸಬಹುದು.

ಈ ನ್ಯೂ ಜನರೇಷನ್ KTM RC390 ಬೈಕಿನ ಹೊಸ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿತ್ತು. ಈ ಚಿತ್ರಗಳಲ್ಲಿ ಬೈಕ್‌ನ ಸೈಡ್-ಪ್ರೊಫೈಲ್ ಅನ್ನು ಯಾವುದೇ ಮರೆಮಾಚುವಿಕೆ ಇಲ್ಲದೆ ಸ್ಪಷ್ಟವಾಗಿ ಕಾಣಬಹುದು. ಈ ಚಿತ್ರದಲ್ಲಿ ಕಂಡುಬರುವ ಮಾದರಿಯು ನ್ಯೂ ಜನರೇಷನ್ ಆರ್‍‍ಸಿ 390ಯ ಉತ್ಪಾದನೆಗೆ ಸಿದ್ದವಾಗಿರುವ ಮಾದರಿಯಾಗಿದೆ. ಈ ಹೊಸ ಕೆಟಿಎಂ RC390 ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಈ ನ್ಯೂ ಜನರೇಷನ್ KTM RC390 ಬೈಕಿನ ಬಾಡಿಗೆ ಹೋಲಿಸಿದರೆ ಟೈರ್ ಸಣ್ಣದಾಗಿ ಕಾಣುತ್ತದೆ. ಹೊಸ ಮಾದರಿಯು ಹೆಚ್ಚು ಸಾಂಪ್ರದಾಯಿಕ ಸ್ಪ್ಲಿಟ್ ಸೀಟ್ ವಿನ್ಯಾಸವನ್ನು ಪಡೆಯುತ್ತದೆ, ಜೊತೆಗೆ ಸ್ಪ್ಲಿಟ್ ಪಿಲಿಯನ್ ಗ್ರ್ಯಾಬ್ ರೈಲ್ ಎಲ್ಇಡಿ ಟೈಲೈಟ್ ಹೊಸ ವಿನ್ಯಾಸವನ್ನು ಹೊಂದಿರಲಿದೆ.

ಕೆಟಿಎಂ ಡ್ಯೂಕ್ ಸರಣಿಯಂತೆಯೇ ಹೊಸ ತಲೆಮಾರಿನ RC ಮಾದರಿಯು ಹಿಂಭಾಗದ ವಿಭಾಗಕ್ಕೆ ಬೋಲ್ಟ್-ಆನ್ ಸಬ್‌ಫ್ರೇಮ್ ಅನ್ನು ಪಡೆಯುತ್ತದೆ. ನ್ಯೂ ಜನರೇಷನ್ KTM RC390 ಬೈಕ್ ಹ್ಯಾಂಡಲ್‌ಬಾರ್‌ಗಳು ತುಂಬಾ ಲೋ-ಸೆಟ್ ಆಗಿ ಕಾಣುತ್ತಿಲ್ಲ, ಈ ಹೊಸ KTM RC390 ಬೈಕಿನ ಮೆಕ್ಯಾನಿಕಲ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಇದರಲ್ಲಿ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು ಎರಡು ಕಡೆಯಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಬಹುದು. ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಹೆಚ್ಚು ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.

ಇನ್ನು KTM RC390 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಸಮರ್ಥ ಟ್ರ್ಯಾಕ್-ಬೇಸ್ಡ್ ಬೈಕ್ ಆಗಿದೆ. ಹೊಸ ಕೆಟಿಎಂ RC390 ಬೈಕ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಬಿಡುಗಡೆಯಾಗಲಿದೆ. ಇದು ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯುತ್ತದೆ. ಇದರಲ್ಲಿ ಹೊಸ KTM RC390 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್‌ಆರ್ 310 ಮತ್ತು ಕವಾಸಕಿ ನಿಂಜಾ 300 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಕಂಪನಿಯು ನ್ಯೂ ಜನರೇಷನ್ KTM RC ಬೈಕ್‌ಗಳ ಬಿಡುಗಡೆ ಅವಧಿಯನ್ನು ಇನ್ನೂ ಬಹಿರಂಗಪಡಿಸಿಲ್ಲ, ಆದರೂ ಹೊಸ ಮಾದರಿಗಳು ಹೆಚ್ಚಿನ ಬೇಡಿಕೆಯ ಹಬ್ಬದ ಸೀಸನ್‌ಗೆ ಮುಂಚಿತವಾಗಿ ಬರಬಹುದು. ನವೀಕರಿಸಿದ ನ್ಯೂ ಜನರೇಷನ್ RC ಸರಣಿಯು ಮುಂದಿನ ತಿಂಗಳ ಅರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Thursday, September 30, 2021, 15:05 [IST]
English summary
Ktm to launch new gen rc series in india in the coming weeks details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+