ಮೇಡ್ ಇನ್ ಇಂಡಿಯಾ Honda Navi ಮಿನಿ ಬೈಕ್ ವಿತರಣೆ ಆರಂಭ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಈ ವರ್ಷದ ಜುಲೈ ತಿಂಗಳಿನಿಂದ ನವಿ ಮಾದರಿಯ 5,000 CKD ಕಿಟ್‌ಗಳನ್ನು ರವಾನಿಸಿದೆ ಎಂದು ಘೋಷಿಸಿದೆ. ನವಿಯನ್ನು ಭಾರತದಿಂದ ಹೋಂಡಾದ ಮೆಕ್ಸಿಕೋ ಸ್ಥಾವರಕ್ಕೆ ರಫ್ತು ಮಾಡಲಾಗಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಇದೀಗ ಯುಎಸ್‌ನಲ್ಲಿ ಈ ಹೊಸ ಮಿನಿ ಬೈಕ್ ಮಾದರಿಯ ವಿತರಣೆಯನ್ನು ಹೋಂಡಾ ಕಂಪನಿಯು ಪ್ರಾರಂಭಿಸಿದೆ. ಹೋಂಡಾ ತನ್ನ ನವಿ ಮಿನಿ ಬೈಕ್ ಅನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು ಈ ಹೊಸ ಹೋಂಡಾ ನವಿ ಮಿನಿ ಬೈಕ್ ಭಾರತದಲ್ಲಿ ತಯಾರಿಸಲಾಗಿದೆ. ಅಮೆರಿಕಾದಲ್ಲಿ ಇದರ ಬೆಲೆಯು USD 1,807(ಅಂದಾಜು. ರೂ.1.34 ಲಕ್ಷ) ಆಗಿದೆ. ಹೋಂಡಾ ನವಿ ಮಿನಿ ಬೈಕ್ 2016 ಮತ್ತು 2017ರ ನಡುವೆ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿತ್ತು.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಭಾರತದಲ್ಲಿ ಈ ನವಿ ಮಿನಿ ಬೈಕ್ ಮಾರಾಟದಲ್ಲಿ ದೊಡ್ಡ ಕುಸಿತವ ಕಂಡು ನಂತರ ಸ್ಥಗಿತಗೊಳಿಸಲಾಯಿತು. ಆದರೆ ಭಾರತದಿಂದ ಸ್ಥಗಿತಗೊಂಡಿದ್ದರೂ ಸಹ, ಇದು ಇನ್ನೂ ಭಾರತದಲ್ಲಿ ತಯಾರಿಸಲಾಗುತ್ತಿದೆ. ಭಾರತದಲ್ಲಿ ತಯಾರಿಸಿದ ಮಿನಿ ಬೈಕ್ ಮಾದರಿಯನ್ನು ರಫ್ತು ಮಾಡಲಾಗುತ್ತಿದೆ. ಅಲ್ಲದೇ ನವಿ ಹೋಂಡಾ ಕಂಪನಿಯು ಅತಿ ಹೆಚ್ಚು ರಫ್ತು ಮಾಡಲಾದ ಹೋಂಡಾ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ನವಿ ಮಿನಿ ಬೈಕ್ ಒಟ್ಟಾರೆ ನೋಟವು ಕಂಪನಿಯ ಮಂಕಿ ಬೈಕ್ ಗ್ರೋಮ್‌ನೊಂದಿಗೆ ಸಾಕಷ್ಟು ಹೋಲಿಕೆಯನ್ನು ಹಂಚಿಕೊಳ್ಳುತ್ತದೆ. ಚಮತ್ಕಾರಿ ವಿನ್ಯಾಸ ಮತ್ತು ಸವಾರಿ ಮಾಡಲು ಮೋಜಿನ ಅನುಭವ ನೀಡುವ ಈ ಹೊಸ ಮಿನಿ ಬೈಕ್ ಯುವ ಗ್ರಾಹಕರನ್ನು ಸೆಳೆಯಬಹುದು. ಕಾಂಪ್ಯಾಕ್ಟ್ ಆಯಾಮಗಳು ಯುವ ಗ್ರಾಹರಿಗೆ ಹೆಚ್ಚು ಪ್ರಯೋಜನವಾಗಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಹೊಸ ಹೋಂಡಾ ನವಿ ಮಿನಿ ಬೈಕಿನಲ್ಲಿ 109.2 ಸಿಸಿ ಏರ್-ಕೂಲ್ಡ್, ನಾಲ್ಕು-ಸ್ಟ್ರೋಕ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಹೋಂಡಾದ ವರ್ಧಿತ ಸ್ಮಾರ್ಟ್ ಪವರ್ (eSP) ತಂತ್ರಜ್ಞಾನದೊಂದಿಗೆ ಆಕ್ಟಿವ್‌ನಿಂದ ಪಡೆಯಲಾಗಿದೆ. ಈ ಎಂಜಿನ್8000 ಆರ್‌ಪಿಎಂನಲ್ಲಿ 7.68 ಬಿಹೆಚ್‍ಪಿ ಪವರ್ ಮತ್ತು 5250 ಆರ್‌ಪಿಎಂನಲ್ಲಿ 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಈ ಎಂಜಿನ್ ನೊಂದಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್ 45 ಕಿ,ಮೀ ಮೈಲೇಜ್ ಅನ್ನು ಒದಗಿರುತ್ತದೆ. ಆದರೆ ಭಾರತದಲ್ಲಿನ ಆಕ್ಟಿವಾದಂತೆ, ಈ ಮೋಟಾರ್ ಇನ್ನೂ ಫ್ಯೂಯಲ್ ಇಂಜೆಕ್ಟರ್ ಬದಲಿಗೆ ಕಾರ್ಬ್ಯುರೇಟರ್ ಅನ್ನು ಒಳಗೊಂಡಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಈ ಹೊಸ ಹೋಂಡಾ ನವಿ ಮಿನಿ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಇನ್ ವರ್ಟಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ, ಇನ್ನು ಪ್ರಮುಖವಾಗಿ ನವಿ ಮಿನಿ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ,

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಈ ಹೊಸ ಹೋಂಡಾ ಮಿನಿ ಬೈಕಿನಲ್ಲಿ 12-ಇಂಚಿನ ಮುಂಭಾಗ ಮತ್ತು 10-ಇಂಚಿನ ಹಿಂಭಾಗದ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ. ಸೂಕ್ಷ್ಮವಾಗಿ ಗಮನಿಸಿದಾಗ, ಎಂಜಿನ್ ಅನ್ನು ಕಡಿಮೆ ಮತ್ತು ಹಿಂದಿನ ವ್ಹೀಲ್ ಹತ್ತಿರವಿರುವ ಅಸಾಮಾನ್ಯ ಸ್ಥಳದಲ್ಲಿ ಇರಿಸಲಾಗಿದೆ ಕಂಡುಕೊಳ್ಳಬಹುದು. ಇದು ಸಂಪೂರ್ಣ ಬೈಕ್ ಮಾದರಿಯಾಗಿ ಅರ್ಹತೆ ಹೊಂದಿಲ್ಲ ಮತ್ತು ಸಾಂಪ್ರದಾಯಿಕ ಸ್ಕೂಟರ್‌ಗಿಂತ ವಿನ್ಯಾಸದಲ್ಲಿ ತುಂಬಾ ಭಿನ್ನವಾಗಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಆರಂಭಿಕರಿಗಾಗಿ, ಇದರಲ್ಲಿ ದೊಡ್ಡ ಸೆಂಟ್ರಲ್ ಫ್ಲೋರ್‌ಬೋರ್ಡ್‌ನೊಂದಿಗೆ ಹಂತ-ಹಂತದ ವಿನ್ಯಾಸವನ್ನು ಹೊಂದಿಲ್ಲ ಅಥವಾ ಅನೇಕ ಮ್ಯಾಕ್ಸಿ-ಸ್ಕೂಟರ್‌ಗಳಂತೆ ಫ್ಯೂಯಲ್ ಟ್ಯಾಂಕ್ ಕುಳಿತುಕೊಳ್ಳುವ ಕಡಿಮೆ ಗೂನು ಸಹ ಒಳಗೊಂಡಿಲ್ಲ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಇನ್ನು ಸಾಮಾನ್ಯ ಬೈಕ್ ಗಳ ರೀತಿಯ ಫುಟ್‌ಪೆಗ್‌ಗಳ ಮೇಲೆ ಇರಿಸಲಾಗುತ್ತದೆ ಆದರೆ ಇದು ಮುಂಭಾಗದಲ್ಲಿ ಲಾಕ್ ಮಾಡಬಹುದಾದ ಕ್ಯೂಬಿಯನ್ನು ಒದಗಿಸುತ್ತದೆ, ಈ ಹೊಸ ನವಿ ಮಿನಿ ಬೈಕ್ 107 ಕೆಜಿಯ ಕರ್ಬ್ ತೂಕದ ಈ ಮಿನಿ ಬೈಕ್ ಟ್ರಾಫಿಕ್ ನಲ್ಲಿ ಸುಲಭವಾಗಿ ಚಲಾಯಿಸಬಹುದಾಗಿದೆ. ಈ ಹೊಸ ಹೋಂಡಾ ಮಿನಿ ಸ್ಕ್ವಾರಿಶ್ ಹೆಡ್‌ಲ್ಯಾಂಪ್, ಸಿಂಗಲ್-ಸೈಡೆಡ್ ಎಕ್ಸಾಸ್ಟ್ ಡಬ್ಬಿ ಮತ್ತು ಬ್ಲ್ಯಾಕ್ಡ್-ಔಟ್ ಸೈಡ್ ಪ್ಯಾನೆಲ್‌ಗಳು ಮತ್ತು ರನ್ನಿಂಗ್ ಗೇರ್ ಸ್ಕೂಟರ್‌ಗೆ ಡ್ಯುಯಲ್-ಟೋನ್ ಥೀಮ್ ಅನ್ನು ನೀಡುತ್ತದೆ ಅದು ಅದರ ಒಟ್ಟಾರೆ ಸ್ಪೋರ್ಟಿ ಆಕರ್ಷಣೆಯನ್ನು ಒತ್ತಿಹೇಳುವಂತಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಇನ್ನು ನವಿ ಮಿನಿ ಬೈಕ್ ರೆಡ್, ಗ್ರಾಸ್ ಹೋಪರ್, ನಟ್ ಬ್ರೌನ್ ಮತ್ತು ರೇಂಜರ್ ಗ್ರೀನ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಐಕಾನ್ ಮತ್ತು ಟ್ರೂಟಿಂಬರ್ ಹೆಸರಿನ ಗ್ರಾಫಿಕ್ಸ್ ಪ್ಯಾಕೇಜ್‌ಗಳೊಂದಿಗೆ ಈ ಹೊಸ ಮಿನಿ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೋಂಡಾ ಮಿನಿ ಅಮೆರಿಕಾ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವ ಮಾದರಿಯಾಗಿದೆ.

ಮೇಡ್ ಇನ್ ಇಂಡಿಯಾ Honda NAVI ಮಿನಿ ಬೈಕ್ ವಿತರಣೆ ಆರಂಭ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ತನ್ನ 2021ರ ನವೆಂಬರ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 2,80,381 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳಿನಲ್ಲಿ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 2,56,170 ಯುನಿಟ್‌ಗಳನ್ನು ಮಾರಾಟಗೊಳಿಸಿದರೆ, ಉಳಿದ 24,211 ಯುನಿಟ್‌ಗಳನ್ನು ರಪ್ತು ಮಾಡಿದ್ದಾರೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 4,12,641 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.38 ರಷ್ಟು ಕುಸಿತವಾಗಿದೆ.

Most Read Articles

Kannada
English summary
Made in india honda navi deliveries starts in us market details
Story first published: Thursday, December 23, 2021, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X