ಭಾರತದಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕಿನ ವಿಶೇಷತೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಹೋಂಡಾ ಕಂಪನಿಯು ಈಗಾಗಲೇ ಈ ಹೊಸ ಅಡ್ವೆಂಚರ್ ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ. ಈ ಬಹುನಿರೀಕ್ಷಿತ ಹೋಂಡಾ ಅಡ್ವೆಂಚರ್ ಬೈಕ್ ಇದೇ ತಿಂಗಳ 19 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಮತ್ತು ಮಾಹಿತಿಯನ್ನು ಹೋಂಡಾ ಕಂಪನಿಯು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಂಡಾ ಕಂಪನಿಯು ಎನ್‌ಎಕ್ಸ್200 ಎಂಬ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದ್ದರು. ಇದರಿಂದ ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಹೋಂಡಾ ಎನ್‌ಎಕ್ಸ್200 ಆಗಿರಬಹುದು ಎಂದು ಹೇಳಲಾಗುತ್ತಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಇದು ಹೋಂಡಾ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಬೈಕ್ ಆಗಿರಬಹುದು. ಮುಂಬರು ಹೊಸ ಹೋಂಡಾ ಅಡ್ವೆಂಚರ್ ಬೈಕ್ ಹಾರ್ನೆಟ್ 2.0 ಮಾದರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ಹೋಂಡಾ ಎನ್‌ಎಕ್ಸ್200 ಬೈಕಿನ ವಿನ್ಯಾಸ ಮತ್ತು ಸ್ಟೈಲಿಂಗ್ ಅನ್ನು ಹೋಂಡಾ ಸಿಎಕ್ಸ್-02 ಕಾನ್ಸೆಪ್ಟ್ ಮತ್ತು ಸಿಬಿಎಫ್-190 ಟಿಆರ್ ಮಾದರಿಗಳಂತೆ ಇರಬಹುದು ಎಂದು ನಿರೀಕ್ಷಿಸುತ್ತೇವೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ವಿನ್ಯಾಸ

ಟೀಸರ್ ನಲ್ಲಿ ಕಂಡಂತೆ ಹೊಸ ಹೋಂಡಾ ಅಡ್ವೆಂಚರ್ ಬೈಕ್ ಎಲ್ಇಡಿ ಹೆಡ್ ಲೈಟ್ ಮತ್ತು ನಕಲ್-ಗಾರ್ಡ್ ಇಂಟಿಗ್ರೇಟೆಡ್ ಫ್ರಂಟ್ ಟರ್ನ್ ಇಂಡಿಕೇಟರ್ ಗಳನ್ನು ಮುಂಭಾಗದಲ್ಲಿ ಹೊಂದಿದೆ ಎಂದು ತಿಳಿಸುತ್ತದೆ. ಎತ್ತರದ ವಿಂಡ್‌ಸ್ಕ್ರೀನ್ ಮತ್ತು ಸೆಮಿ-ಫೇರಿಂಗ್ ವಿನ್ಯಾಸವು ಕಾಣಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕ್ ಸ್ಪ್ಲಿಟ್ ಸ್ಟೈಲ್ ಸೀಟುಗಳು ಹಾಗೂ ಎರಡು ಪೀಸ್ ಪಿಲಿಯನ್ ಗ್ರ್ಯಾಬ್ ರೇಲ್ ನೀಡುವ ಸಾಧ್ಯತೆಯಿದೆ. ಈ ಮಾದರಿಯು ತನ್ನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಅನ್ನು ಹೋಂಡಾ ಹಾರ್ನೆಟ್ 2.0 ನೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಎಂಜಿನ್

ಇದು ಹೊಸ ಡೈಮಂಡ್ ಫ್ರೇಮ್ ಚಾಸಿಸ್ ಮೇಲೆ 184.4 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಹೋಂಡಾ ಇಕೋ ಟೆಕ್ನಾಲಜಿ (ಎಚ್‌ಇಟಿ) ಯೊಂದಿಗೆ ಹೋಂಡಾದ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್ ಇಂಜೆಕ್ಷನ್ (ಪಿಜಿಎಂ-ಎಫ್‌ಐ) ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಇದು ಬೈಕಿನ ಮೈಲೇಜ್ ಅನ್ನು ಹೆಚ್ಚಿಸಲು ಸಹಾಯಮಾಡುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಇನ್ನು ಈ 184.4 ಸಿಸಿ ಎಂಜಿನ್ 8,200 ಆರ್‌ಪಿಎಂನಲ್ಲಿ 17.2 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ಹೋಂಡಾ ಎನ್‌ಎಕ್ಸ್200 ಬೈಕ್ 17 ಇಂಚಿನ ಅಲಾಯ್ ವ್ಹೀಲ್ ಗಳ ಜೊತೆಗೆ ಫ್ಯಾಟ್ 110 ಎಂಎಂ ಫ್ರಂಟ್ ಮತ್ತು 140 ಎಂಎಂ ಹಿಂದಿನ ಟೈರ್‌ಗಳನ್ನು ಹೊಂದಿರಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಸಸ್ಪೆಂಕ್ಷನ್

ಇನ್ನು ಈ ಹೊಸ ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿರಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಬ್ರೇಕಿಂಗ್ ಸಿಸ್ಟಂ

ಇನ್ನು ಈ ಹೊಸ ಅಡ್ವೆಂಚರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಸಿಂಗಲ್ ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಹೊಂದಿರಲಿದೆ. ಹೊಸ ಹೋಂಡಾ ಅಡ್ವೆಂಚರ್ ಬೈಕಿನ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಬೆಲೆ

ಹೊಸ ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ1.50 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ, ಇ ಹೋಂಡಾ ಎನ್‌ಎಕ್ಸ್200 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೀರೋ ಎಕ್ಸ್‌ಪಲ್ಸ್ 200, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಕೆಟಿಎಂ 250 ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ,

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಜುಲೈ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತು. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 3.85 ಲಕ್ಷ ಯೂನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 3,40,133 ಯುನಿಟ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಳಿಸಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ ಹೋಂಡಾ ಎನ್‌ಎಕ್ಸ್200 ಬೈಕಿನ ವಿಶೇಷತೆಗಳು

ಉಳಿದ 45,400 ಯುನಿಟ್ ಗಳನ್ನು ರಫ್ತು ಮಾಡಿದೆ. 2021ರ ಜೂನ್ ಇದರ ಮಾರಾಟದ ಹೆಚ್ಚಳವು ಶೇ.66 ರಷ್ಟಿದೆ. ಕಳೆದ ತಿಂಗಳ ಮಾರಾಟದಲ್ಲಿ ಆಕ್ಟಿವಾ 6ಜಿ ಮತ್ತು ಶೈನ್ ಮಾದರಿಗಳು ಹೋಂಡಾ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ. ಹೋಂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ಹೊಸ ಹೊಸ ಹೋಂಡಾ ಎನ್‌ಎಕ್ಸ್200 ಅಡ್ವೆಂಚರ್ ಬೈಕ್ ಬಿಡುಗಡೆಯಾದ ಬಳಿಕ ಮಾರಾಟ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸಲು ನೆರವಾಗುತ್ತದೆ.

Most Read Articles

Kannada
English summary
Major highlights of new honda nx200 adv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X