Just In
- 5 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 8 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 8 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 9 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ್ ಬೈಕ್
ರಾಯಲ್ ಎನ್ಫೀಲ್ಡ್ ಬೈಕ್ಗಳ ಮೇಲೆ ಜನರಿಗಿರುವ ಕ್ರೇಜ್ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್ ಆಗಿದೆ. ಇಂದಿಗೂ ರಾಯಲ್ ಎನ್ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ.
ರಾಯಲ್ ಎನ್ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಕುಳಿತು ರೈಡ್ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್, ಅದೇ ಟ್ರೆಂಡ್ ಉಳಿಸಿಕೊಂಡು ಬಂದಿರುವುದು ರಾಯಲ್ ಎನ್ಫೀಲ್ಡ್ ಬೈಕ್ಗಳ ಹೆಗ್ಗಳಿಕೆಯಾಗಿದೆ. ಇನ್ನು ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಮಾಡಿಫೈಗೊಳಿಸಲು ಹಲವರು ಆಯ್ಕೆ ಮಾಡಿಕೊಳ್ಳುತ್ತಾರೆ.
ಈ ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಹಲವರು ಮಾಡಿಫೈಗೊಳಿಸಲು ಇಷ್ಟಪಡುತ್ತಾರೆ.ರಾಯಲ್ ಎನ್ಫಿಲ್ಡ್ ಬೈಕ್ಗಳ ಮಾಡಿಫೈಗೊಳಿಸಿದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇವೆ. ಆದರೆ ಇಲ್ಲಿ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಆಕರ್ಷಕವಾಗಿ ಮಾಡಿಫೈಗೊಳಿಸಿದ್ದಾರೆ.
ತೆಲಂಗಾಣದ ಹೈದರಾಬಾದ್ ಮೂಲದ ಇಐಎಂಒಆರ್ ಕಸ್ಟಮ್ಸ್ ಅವರು ರಾಯಲ್ ಎನ್ಫೀಲ್ಡ್ ಥಂಡರ್ ಬರ್ಡ್ 350 ಬೈಕನ್ನು ಜನಪ್ರಿಯ ಕಾರ್ಟೂನ್ ಜಾನಿ ಬ್ರಾವೋದ ಥೀಮ್ ನಲ್ಲಿ ಮಾಡಿಫೈಗೊಳಿಸಿದ್ದಾರೆ. ಈ ಮಾಡಿಫೈ ಬೈಕಿಗೆ 'ಜೇ ಬೀ' ಎಂದು ಅಡ್ಡಹೆಸರು ಇಡಲಾಗಿದೆ.
ಈ ಮಾಡಿಫೈ ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ 350 ಬೈಕಿನಲ್ಲಿ ಹೊಸ ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಗೆ ಅನಂತರದ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಈ ಬೈಕಿನ ಸ್ಟಾಕ್ ಫ್ರಂಟ್ ಫೋರ್ಕ್ಗಳನ್ನು ಹೊಸ ಯುಎಸ್ಡಿ ಫೋರ್ಕ್ಗಳಿಂದ ಬದಲಾಯಿಸಲಾಗಿದೆ ಮತ್ತು ಕಸ್ಟಮ್ ಫ್ರಂಟ್ ಫೆಂಡರ್ ಅನ್ನು ನೀಡಲಾಗಿದೆ.
ಈ ಮಾಡಿಫೈ ಬೈಕ್ ಡ್ಯುಯಲ್-ಟೋನ್ ಬಣ್ಣಗಳಿಂದ ಕೂಡಿದೆ. ಈ ಬೈಕ್ ಉದ್ದಕೂ ಎರಡು ಸ್ಟ್ರಿಪ್ಸ್ ಅನ್ನು ನೀದಿದೆ. ಇನ್ನು ಫ್ಯೂಯಲ್ ಟ್ಯಾಂಕ್ ಮೇಲೆ ಜಾನಿ ಬ್ರಾವೋ ವಿವರಣೆಯನ್ನು ಹೊಂದಿದೆ, ಇದು ಹೆಚ್ಚು ಆಕರ್ಷಕವಾಗಿದೆ.
ಈ ಥಂಡರ್ಬರ್ಡ 350 ಬೈಕಿನಲ್ಲಿ ಹೊಸ ಸೀಟುಗಳನ್ನು ಸಹ ಅಳವಡಿಸಲಾಗಿದೆ, ಇದರ ಪಿಲಿಯನ್ ಸೀಟ್ ತೆಗೆಯಬಹುದು. ಸ್ಟಾಕ್ ಬ್ಯಾಕ್ರೆಸ್ಟ್ ಅನ್ನು ಹೊಸದರಿಂದ ಬದಲಾಯಿಸಲಾಗಿದೆ, ಮತ್ತು ಹಿಂಭಾಗದ ಫೆಂಡರ್ ಸಹ ಕಸ್ಟಮ್ ಯುನಿಟ್ ಆಗಿದೆ.
ಈ ಬೈಕಿನಲ್ಲಿ ಹೊಸ ಟೈಲ್ ಲೈಟ್, ಟರ್ನ್ ಇಂಡಿಕೇಟರ್ಸ್, ನಂಬರ್ಪ್ಲೇಟ್ ಹೋಲ್ಡರ್ ಮತ್ತು ಹೆಚ್ಚುವರಿ ಎಲ್ಇಡಿ ಬ್ರೇಕ್ ಲೈಟ್ ಸ್ಟ್ರಿಪ್ ಸೇರಿವೆ. ಟೈಲ್ಲೈಟ್ ಕವರ್ ನಲ್ಲಿ 'ಸ್ಟಾಪ್' ಎಂಬ ಪದವನ್ನು ಹೊಂದಿದೆ,
ಮಾಡಿಫೈ ರಾಯಲ್ ಎನ್ಫೀಲ್ಡ್ ಥಂಡರ್ಬರ್ಡ 350 ಬೈಕಿನಲ್ಲಿ ಕಸ್ಟಮ್ ಸೈಡ್ ಪ್ಯಾನೆಲ್ಗಳು ಮತ್ತು ಕಸ್ಟಮ್ ಸೈಡ್ ಬಾಕ್ಸ್ಗಳನ್ನು ಸಹ ಪಡೆಯುತ್ತದೆ. ಸ ಏರ್ ಫಿಲ್ಟರ್ ಅನ್ನು ಸಹ ಇಲ್ಲಿ ಕಾಣಬಹುದು. ಇದು ಆಫ್ಟರ್ ಮಾರ್ಕೆಟ್ ಗನ್-ಸ್ಟೈಲ್ ಎಕ್ಸಾಸ್ಟ್ ಅನ್ನು ಸಹ ಪಡೆಯುತ್ತದೆ.
Image Courtesy: Eimor Customs