ಎಲೆಕ್ಟ್ರಿಕ್ ಸ್ಕೂಟರ್ ಒದಗಿಸಲು ಮೂವಿಯಿಂಗ್ ಕಂಪನಿ ಜೊತೆಗೂಡಿದ ಹೀರೋ ಎಲೆಕ್ಟ್ರಿಕ್
ಹೀರೋ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹಲವು ಹೊಸಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಅತಿ ಹೆಚ್ಚು ಮೈಲೇಜ್‌ವುಳ್ಳ ಎನ್‌ವೈಎಕ್ಸ್ ಹೆಚ್ಎಕ್ಸ್ ಸ್ಕೂಟರ್ ಮಾದರಿಯ ಬಿಡುಗಡೆ ಕೆಲವೇ ದಿನಗಳಲ್ಲಿ ಪ್ರಮುಖ ಡೆಲೆವರಿ ಕಂಪನಿಗಳಿಂದ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ವಿನ್ಯಾಸದ ಮತ್ತು ಹೆಚ್ಚು ಮೈಲೇಜ್ ಹೊಂದಿರುವ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 210 ಕಿ.ಮೀ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆಯೊಂದಿಗೆ ಬಿಟುಬಿ ವಿಭಾಗದಲ್ಲಿ ಉತ್ತಮ ಬೆಳವಣಿಗೆ ಕಂಡುಕೊಳ್ಳುತ್ತಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 64,640 ಬೆಲೆ ಪಡೆದುಕೊಂಡಿದ್ದು, ಅತಿ ಕಡಿಮೆ ಬೆಲೆಯೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವುದು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಮತ್ತೊಂದು ಪ್ರಮುಖ ವಿಚಾರವೆಂದರೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ ಮಾತ್ರ ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಡೆಲಿವರಿ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಆಸಕ್ತಿ ತೊರುತ್ತಿವೆ.

ಡೆಲಿವರಿ ಕಂಪನಿಗಳ ಬೇಡಿಕೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ಯೋಜನೆಗಾಗಿ ನೋಯ್ಡಾ ಮೂಲದ ಮೂವಿಯಿಂಗ್ ಜೊತೆಗೂಡಿದ್ದು, ಮೂವಿಯಿಂಗ್ ಕಂಪನಿಯು ವಿಶೇಷವಾಗಿ ಬಿಟುಬಿ(ಇ-ಕಾರ್ಮಸ್ ಡೆಲಿವರಿ) ಉದ್ದೇಶಗಳಿಗಾಗಿ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ದಿಪಡಿಸುತ್ತಿದ್ದು, ಹೀರೋ ಕಂಪನಿಯು ಮೂವಿಯಿಂಗ್ ಕಂಪನಿಯು ಯೋಜನೆಗಳಿಗೆ ಸಹಕಾರಿಯಾಗಲಿದೆ.

ಡೆಲಿವರಿ ಉದ್ದೇಶಗಳಿಗಾಗಿ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಇ-ಕಾಮರ್ಸ್ ಕಂಪನಿಗಳ ಇವಿ ವಾಹನಗಳ ನಿರ್ವಹಣೆ ಮಾಡಲಿರುವ ಮೂವಿಯಿಂಗ್ ಕಂಪನಿಯು ಉದ್ಯಮ ಬೇಡಿಕೆ ಅನುಸಾರವಾಗಿ ಹೀರೋ ಕಂಪನಿಯ ಜೊತೆಗೂಡಿ ಹೊಸ ಉತ್ಪನ್ನಗಳ ಅಭಿವೃದ್ದಿಗೆ ಸಹಕರಿಸಲಿದೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಳಕೆಗಾಗಿ ಮೂವಿಯಿಂಗ್ ಕಂಪನಿಯ ಇ-ಕಾಮರ್ಸ್ ಡೆಲಿವರಿ ಕಂಪನಿಗಳಾಗಿಗಿ ಸುಮಾರು 1 ಸಾವಿರ ಯುನಿಟ್ ಖರೀದಿಸಿದ್ದು, ಹೆಚ್ಚುತ್ತಿರುವ ಇಂಧನ ಚಾಲಿತ ವಾಹನಗಳಿಂದಾಗುತ್ತಿರುವ ನಿರ್ವಹಣಾ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸುವತ್ತ ಇದು ಪ್ರಮುಖ ಹೆಜ್ಜೆಯಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಮೊದಲ ಹಂತವಾಗಿ 1 ಸಾವಿರ ಯುನಿಟ್ ಖರೀದಿ ಮಾಡಿರುವ ಮೂವಿಯಿಂಗ್ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರು ಮತ್ತು ಸಹಭಾಗೀತ್ವ ಕಂಪನಿಗಳ ಬಳಕೆದಾರರ ಅಭಿಪ್ರಾಯದ ಆಧಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಳಕೆ ಮಾಡುವ ಗುರಿಹೊಂದಿದೆ.

ಇದಕ್ಕಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ವಿಶೇಷವಾಗಿ ಬಿಜಿನೆಸ್ ಟು ಬಿಜಿನೆಸ್(ಬಿಟುಬಿ) ಉದ್ದೇಶಗಳಿಗೆ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದು ಲಾಸ್ಟ್ ಮೈಲ್ ಡೆಲಿವರಿಗಾಗಿ ಗ್ರಾಹಕರ ಬೇಡಿಕೆಯೆಂತೆ ಹತ್ತು ವಿಭಿನ್ನ ರೀತಿಯಲ್ಲಿ ಕ್ಯಾರಿಯರ್ ಸೌಲಭ್ಯ ಹೊಂದಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಗ್ರಾಹಕರ ಬೇಡಿಕೆಯೆಂತೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಸಹ ಮತ್ತಷ್ಟು ಹೊಸ ಇವಿ ವಾಹನಗಳನ್ನು ಅಳವಡಿಸಿಕೊಳ್ಳಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಕನೆಕ್ವಿಟಿ, ರಿಮೋಟ್ ಕಂಟ್ರೋಲ್, ಕಾಂಬಿ ಬ್ರೇಕಿಂಗ್ ಸಿಸ್ಟಂನೊಂದಿಗೆ ಉದ್ಯಮ ವ್ಯವಹಾರಗಳ ಕಾರ್ಯಾಚರಣೆ ವೆಚ್ಚವನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಿವೆ.


Click it and Unblock the Notifications








