ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ 125 ಸಿಸಿ ಬೈಕ್‌ಗಳು ಖರೀದಿದಾರರ ನಡುವೆ ಸಾಕಷ್ಟು ಜನಪ್ರಿಯವಾಗಿವೆ. ಈ ಬೈಕ್‌ಗಳು ತಮ್ಮ ಇಂಧನ ದಕ್ಷತೆ, ಕಡಿಮೆ ನಿರ್ವಹಣಾ ವೆಚ್ಚ, ಸೌಕರ್ಯ ಮತ್ತು ಉತ್ತಮ ಸವಾರಿ ಗುಣಮಟ್ಟದಿಂದ ಯಾವಾಗಲೂ ಗ್ರಾಹಕರನ್ನು ಆಕರ್ಷಿಸುತ್ತದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳ ಮಾಹಿತಿ ಈ ಕೆಳಗಿವೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಹೀರೋ ಸೂಪರ್ ಸ್ಪ್ಲೆಂಡರ್

ಹೀರೋ ಸೂಪರ್ ಸ್ಪ್ಲೆಂಡರ್ 125 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 125ಸಿಸಿ ವಿಭಾಗದಲ್ಲಿ ಅತ್ಯುತ್ತಮ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ರೂಪಾಂತರದಲ್ಲಿ ಲಭ್ಯವಿದೆ. ಈ ಸೂಪರ್ ಸ್ಪ್ಲೆಂಡರ್ ಬೈಕಿನಲ್ಲಿ ಎಕ್ಸ್‌ಸೆನ್ಸ್ ತಂತ್ರಜ್ಞಾನದೊಂದಿಗೆ ನವೀಕರಿಸಿದ 125 ಸಿಸಿ ಬಿ‍ಎಸ್-6 ಎಂಜಿನ್ ಸ್ಪೋರ್ಟಿಂಗ್ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಈ ಎಂಜಿನ್ 10.72 ಬಿಹೆಚ್‌ಪಿ ಮತ್ತು 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೀರೋ ಸೂಪರ್ ಸ್ಪ್ಲೆಂಡರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.71,100 ಆಗಿದೆ. ಇನ್ನು ಇಲ್ಲಿ ನೀಡಿರುವ ಎಲ್ಲಾ ಬೆಲೆಗಳ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಪಡೆಯಲಾಗಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಹೋಂಡಾ ಶೈನ್

ಹೋಂಡಾ ಶೈನ್ ದೇಶದಲ್ಲಿ ಹೆಚ್ಚು ಮಾರಾಟವಾದ 125ಸಿಸಿ ಬೈಕ್. ಹೋಂಡಾ ಶೈನ್ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಹೋಂಡಾ ಶೈನ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.71,550 ಆಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಹೋಂಡಾ ಸಿಬಿ ಶೈನ್ ಬೈಕಿನಲ್ಲಿ 124 ಸಿಸಿ, ಸಿಂಗಲ್-ಸಿಲಿಂಡರ್, ನಾಲ್ಕು-ಸ್ಟ್ರೋಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಹೀರೋ ಗ್ಲ್ಯಾಮರ್

ಹೀರೋ ಗ್ಲ್ಯಾಮರ್ ನಾಲ್ಕು ವೆರಿಯೆಂಟ್ ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀರೋ ಗ್ಲ್ಯಾಮರ್ ಬೈಕನ್ನು ಬಿಎಸ್-6 ಆಗಿ ಬಿಡುಗಡೆಗೊಳಿಸವಾಗ ಕೆಲವು ನವೀಕರಣಗಳೊಂದಿಗೆ ಪರಿಚಯಿಸಿದ್ದರು. ಈ ಬೈಕ್ ಫ್ರಂಟ್ ಎಂಡ್, ಫ್ಯೂಯಲ್ ಟ್ಯಾಂಕ್, ಮತ್ತು ಟ್ಯಾಲ್ ಲ್ಯಾಂಪ್ ಗಳ ವಿನ್ಯಾಸವನ್ನು ನವೀಕರಿಸಿದ್ದರು. ಹೀರೋ ಗ್ಲ್ಯಾಮರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.73,200 ಆಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಬಜಾಜ್ ಪಲ್ಸರ್ 125

ಎಂಟ್ರಿ ಲೆವೆಲ್ ಬಜಾಜ್ ಪಲ್ಸರ್ 125 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಬಜಾಜ್ ಪಲ್ಸರ್ 125 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.73,363 ಆಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಈ ಬೈಕಿನಲ್ಲಿ 124 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 10.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

Rank Motorcycle Price
1 Hero Super Splendor ₹71,100
2 Honda Shine ₹71,500
3 Hero Glamour ₹73,200
4 Bajaj Pulsar 125 ₹73,363
5 Honda SP 125 ₹77,145
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಹೋಂಡಾ ಎಸ್‌ಪಿ 125

ಹೋಂಡಾ ಎಸ್‌ಪಿ 125 ಬೈಕ್ ಡ್ರಮ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೋಂಡಾ ಎಸ್‌ಪಿ 125 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.77,145 ಆಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ 125 ಸಿಸಿ ಬೈಕ್‌ಗಳು

ಹೋಂಡಾ ಎಸ್‌ಪಿ 125 ಬೈಕಿನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಪವರ್ ಹಾಗೂ 9,000 ಆರ್‌ಪಿಎಂನಲ್ಲಿ 10.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ ಐದು ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

Article Published On: Saturday, April 24, 2021, 17:36 [IST]
English summary
India’s Most Affordable 125cc Bikes. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+