ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಭಾರತದ ಗ್ರಾಹಕರ ಬೇಡಿಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬೈಕ್‌ಗಳ ಆಯ್ಕೆಗಳಿವೆ. ಪ್ರತಿ ವಿಭಾಗದಲ್ಲಿಯು ಹಲವು ವಿಧದ ಆಯ್ಕೆಗಳಿವೆ. ಆದರೆ ಇದರಲ್ಲಿ ಇತ್ತೀಚೆಗೆ ಬಾರತೀಯ ಮಾರುಕಟ್ಟೆಯಲ್ಲಿ ಪವರ್‌ಫುಲ್ ಬೈಕ್‌ಗಳು ಹೆಚ್ಚು ಜನಪ್ರಿಯತೆಗಳಿಸುತ್ತಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಪ್ರತಿ ಖರೀದಿದಾರನು ವಿಭಿನ್ನ ಅವಶ್ಯಕತೆಗಳನ್ನು ಹೊಂದಿರಬಹುದು. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ವಿಭಿನ್ನ ಆಯ್ಕೆಗಳಿವೆ. ಅದರಲ್ಲಿ ಪವರ್‌ಫುಲ್ ಬೈಕ್‌ಗಳ ವಿಭಾಗದಲ್ಲಿಯು ಹಲವು ಆಯ್ಕೆಗಳಿವೆ. ಮಾಧ್ಯಮ ವರ್ಗದವರಿಗೂ ಕಡಿಮೆ ಬೆಲೆಯಲ್ಲಿ ಖರೀಸಬಹುದಾದ ಬೈಕ್‌ಗಳಿವೆ. ಸದ್ಯ ಬಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 2 ಲಕ್ಷಕ್ಕಿಂತ( ಎಕ್ಸ್ ಶೋರೂಂ ಪ್ರಕಾರ) ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳ ಮಾಹಿತಿ ಇಲ್ಲಿವೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಬಜಾಜ್ ಡೊಮಿನಾರ್ 250

ಈ ಪಟ್ಟಿಯಲ್ಲಿ ಅತ್ಯಂತ ಉತ್ತಮ ಪವರ್‌ಫುಲ್ ಬೈಕ್‌ಗಳಲ್ಲಿ ಒಂದಾಗಿದೆ. ಈ ಬಜಾಜ್ ಡೊಮಿನಾರ್ 250 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.71 ಲಕ್ಷಗಳಾಗಿದೆ. ಬಜಾಜ್ ಡೋಮಿನಾರ್ 250 ಬೈಕ್ ಸ್ಪೂರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಬಜಾಜ್ ಡೋಮಿನಾರ್ 250 ಬೈಕ್ ತನ್ನದೆ ಹಿರಿಯಣ್ಣ ಎಂದೇ ಹೇಳಬಹುದಾದ ಡೋಮಿನಾರ್ 400 ಬೈಕಿನ ಮಾದರಿಯಲ್ಲಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಕೆಟಿಎಂ 250 ಡ್ಯೂಕ್‍‍ನಲ್ಲಿರುವಂತಹ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 26.6 ಬಿಹೆಚ್‍ಪಿ ಪವರ್ ಮತ್ತು 23.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಸುಜುಕಿ ಜಿಕ್ಸರ್ ಎಸ್‌ಎಫ್250

ಸುಜುಕಿ ಕ್ವಾರ್ಟರ್-ಲೀಟರ್ ಜಿಕ್ಸರ್ ಎಸ್‌ಎಫ್250 ಬೈಕ್ ಉತ್ತಮ ಪವರ್‌ಫುಲ್ ಬೈಕ್ ಆಗಿದೆ. ಈ ಸುಜುಕಿ ಜಿಕ್ಸರ್ ಎಸ್‌ಎಫ್250 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.78 ಲಕ್ಷಗಳಾಗಿದೆ. ಈ ಬೈಕಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಬಿಎಸ್-6 ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 26.1 ಬಿಹೆಚ್‌ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಕೆಟಿಎಂ 200 ಡ್ಯೂಕ್

ಕೆಟಿಎಂ 200 ಡ್ಯೂಕ್ ಮಾದರಿಯು ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.83 ಲಕ್ಷಗಳಾಗಿದೆ. ಕೆಟಿಎಂ 200 ಡ್ಯೂಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಕೆಟಿಎಂ ಡ್ಯೂಕ್ 200 ಬೈಕಿನಲ್ಲಿ 199 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದೆ.ಈ ಎಂಜಿನ್ 24.6 ಬಿಹೆಚ್‌ಪಿ ಪವರ್ ಮತ್ತು 19.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೂಂದಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಬೈಕ್

ಈ ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಬೈಕ್ ನಿಯೋ-ರೆಟ್ರೊ ಸ್ಕ್ರ್ಯಾಂಬ್ಲರ್ ವಿನ್ಯಾಸವನ್ನು ಹೊಂದಿದೆ. ವಿಟ್‌ಪಿಲೆನ್ 250 ಬೈಕ್ ಕೆಫೆ ರೇಸರ್ ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.99 ಲಕ್ಷಗಳಾಗಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಬೈಕಿನಲ್ಲಿ 248.8 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 29.5 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‍‍ಗಳಲ್ಲಿ ಕೆಟಿಎಂ ಬೈಕ್‍‍ಗಳಲ್ಲಿರುವಂತಹ ಟ್ರೆಲ್ಲಿಸ್ ಫ್ರೇಂ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂನಿಂದಾಗಿ ಬೈಕಿನ ಲುಕ್ ಹೆಚ್ಚುವುದರ ಜೊತೆಗೆ ಹ್ಯಾಂಡ್ಲಿಂಗ್ ಹೆಚ್ಚು ಸಹಕಾರಿಯಾಗಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಜಾವಾ ಪೆರಾಕ್

ಈ ಬೆಲೆ ವ್ಯಾಪ್ತಿಯಲ್ಲಿ ನೀವು ಖರೀದಿಸಬಹುದಾದ ಏಕೈಕ ಅತ್ಯುತ್ತಮ ಬಾಬರ್ ಶೈಲಿಯ ಕೊಡುಗೆ ಜಾವಾ ಪೆರಾಕ್ ಆಗಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.97 ಲಕ್ಷಗಳಾಗಿದೆ. ಬಾಬರ್‌ ಶೈಲಿಯ ವಿಶಿಷ್ಟವಾದ ಜಾವಾ ಪೆರಾಕ್ ಬೈಕ್ ಉದ್ದವಾದ ವ್ಹೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್ ಅನ್ನು ಹೊಂದಿದೆ.

ಭಾರತದಲ್ಲಿ 2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಪವರ್‌ಫುಲ್ ಬೈಕ್‌ಗಳಿವು

ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ 334 ಸಿಸಿ ಎಂಜಿನ್ 30 ಬಿಹೆಚ್‌ಪಿ ಪವರ್ ಮತ್ತು 31 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಫೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ.

More from DriveSpark

Article Published On: Saturday, June 12, 2021, 10:10 [IST]
English summary
Most Powerful Bikes Under Rs 2 lakh. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+