200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು
ಮಿಡ್-ಡಿಸ್ ಪ್ಲೇಸ್‌ಮೆಂಟ್ ಎಂದೂ ಕರೆಯಲಾಗುವ 200 ಸಿಸಿ - 400 ಸಿಸಿ ಮೋಟಾರ್‌ಸೈಕಲ್ ಸೆಗ್ ಮೆಂಟ್ ಅನ್ನು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ವೇಗವಾಗಿ ವಿಸ್ತರಿಸಲಾಗುತ್ತಿದೆ.

ಕರೋನಾ ವೈರಸ್‌ನಿಂದಾಗಿ ಇತರ ಬೈಕ್ ಸೆಗ್ ಮೆಂಟ್'ಗಳಂತೆ ಈ ಸೆಗ್ ಮೆಂಟಿನಲ್ಲಿಯೂ ಬೈಕ್‌ಗಳ ಮಾರಾಟವು ಕಡಿಮೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಸೆಗ್ ಮೆಂಟಿನ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ.

ಈ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ಸೆಗ್ ಮೆಂಟಿನಲ್ಲಿರುವ ಎಲ್ಲಾ ಬೈಕುಗಳ ಮಾರಾಟವು ಮೇ ತಿಂಗಳಿನಲ್ಲಿ ತೀವ್ರವಾಗಿ ಕುಸಿದಿದೆ. ಮೇ ತಿಂಗಳಿನಲ್ಲಿ 200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಒಟ್ಟು 22,044 ಯುನಿಟ್ ಬೈಕುಗಳನ್ನು ಮಾರಾಟ ಮಾಡಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ 58,878 ಯುನಿಟ್ ಬೈಕುಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ 200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿರುವ ಬೈಕುಗಳ ಮಾರಾಟವು 62.56%ನಷ್ಟು ಕಡಿಮೆಯಾಗಿದೆ.

ಈ ಸೆಗ್ ಮೆಂಟಿನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳು ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಮೇ ತಿಂಗಳಿನಲ್ಲಿಯೂ ರಾಯಲ್ ಎನ್‌ಫೀಲ್ಡ್ ಬೈಕುಗಳು ಪ್ರಾಬಲ್ಯ ಸಾಧಿಸಿವೆ.

ಹೆಚ್ಚು ಮಾರಾಟವಾದ ಬೈಕುಗಳ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ನಾಲ್ಕು ಬೈಕ್‌ಗಳು ಮೊದಲ ನಾಲ್ಕು ಸ್ಥಾನಗಳನ್ನು ಪಡೆದಿವೆ. ಒಟ್ಟಾರೆ ದ್ವಿಚಕ್ರ ವಾಹನ ಮಾರಾಟದಲ್ಲಿ 10ನೇ ಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
| ಸ್ಥಾನ | ಮಾದರಿಗಳು | ಮೇ - 21 | ಏಪ್ರಿಲ್ - 21 | ಬೆಳವಣಿಗೆ (%) |
| 1 | ಆರ್‌ಇ ಕ್ಲಾಸಿಕ್ 350 | 9,239 | 23,298 | -60.34 |
| 2 | ಆರ್‌ಇ ಬುಲೆಟ್ 350 | 4,557 | 9,908 | -54.01 |
| 3 | ಆರ್‌ಇ ಮೆಟಿಯೊರ್ 350 | 3,375 | 7,844 | -56.97 |
| 4 | ಆರ್‌ಇ ಎಲೆಕ್ಟ್ರಾ 350 | 2,112 | 3,631 | -41.83 |
| 5 | ಬಜಾಜ್ ಪಲ್ಸರ್ 200 | 1,026 | 3,914 | -73.79 |
| 6 | ಆರ್‌ಇ ಹಿಮಾಲಯನ್ | 463 | 2,815 | -83.55 |
| 7 | ಹೋಂಡಾ ಹೈನೆಸ್ ಸಿಬಿ 350 | 428 | 2,969 | -85.58 |
| 8 | ಬಜಾಜ್ ಅವೆಂಜರ್ 220 | 176 | 650 | -72.92 |
| 9 | ಕೆಟಿಎಂ 250 | 168 | 1,089 | -84.57 |
| 10 | ಯಮಹಾ ಎಫ್‌ಝಡ್25 | 140 | 182 | -23.08 |

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯ ಪ್ರಮುಖ ಮಾದರಿಯಾದ ಕ್ಲಾಸಿಕ್ 350 ಬೈಕಿನ 9,239 ಯುನಿಟ್‌ಗಳನ್ನು ಕಳೆದ ತಿಂಗಳು ಮಾರಾಟ ಮಾಡಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಈ ಬೈಕಿನ 23,298 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಮೇ ತಿಂಗಳಿನಲ್ಲಿ ಕ್ಲಾಸಿಕ್ 350 ಬೈಕ್‌ಗಳ ಮಾರಾಟವು 60.34%ನಷ್ಟು ಕಡಿಮೆಯಾಗಿದೆ. ಮೇ ತಿಂಗಳಿನಲ್ಲಿ ಬುಲೆಟ್ 350 ಬೈಕಿನ 4,557 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನ 9,908 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ರಾಯಲ್ ಎನ್‌ಫೀಲ್ಡ್ ಕಂಪನಿಯ ಇತ್ತೀಚಿನ ಕೊಡುಗೆಯಾದ ಮೆಟಿಯೋರ್ 350 ಬೈಕ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮೇ ತಿಂಗಳಿನಲ್ಲಿ ಮೆಟಿಯೋರ್ 350 ಬೈಕಿನ 3,375 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ರಾಯಲ್ ಎನ್‌ಫೀಲ್ಡ್ ಕಂಪನಿಯ ಎಲೆಕ್ಟ್ರಾ 350 ಬೈಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.


Click it and Unblock the Notifications