ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್, ದೇಶಿಯ ಮಾರುಕಟ್ಟೆಯ 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡಲು ಹಲವಾರು ಬೈಕ್'ಗಳು ಬಿಡುಗಡೆಯಾಗಿವೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ಕ್ಲಾಸಿಕ್ 350 ಬೈಕ್ ಭಾರತದಲ್ಲಿ 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ ಪ್ರಾಬಲ್ಯವನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ತಿಂಗಳುಈ ಬೈಕಿನ 37,000ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡುವ ಬೈಕುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

1. ಹೋಂಡಾ ಹೈನೆಸ್ ಸಿಬಿ 350

ಕ್ಲಾಸಿಕ್ 350 ಬೈಕಿಗೆ ಪೈಪೋಟಿ ನೀಡಲು ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಹೈನೆಸ್ ಸಿಬಿ 350 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಸ್ಟೈಲಿಶ್ ವಿನ್ಯಾಸವನ್ನು ಹೊಂದಿರುವ ಈ ಬೈಕ್ ನ್ಯಾವಿಗೇಷನ್ ಫೀಚರ್ ಹೊಂದಿರುವ ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಈ ಫೀಚರ್ ಕ್ಲಾಸಿಕ್ 350 ಬೈಕಿನಲ್ಲಿ ಲಭ್ಯವಿಲ್ಲ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ಹೈನೆಸ್ ಸಿಬಿ 350 ಬೈಕಿನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುವ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ. ಈ ಬೈಕಿನಲ್ಲಿ ಅಳವಡಿಸಿರುವ 348 ಸಿಸಿ ಎಂಜಿನ್ 21.07 ಬಿಹೆಚ್‌ಪಿ ಪವರ್ ಹಾಗೂ 30 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಹೋಂಡಾ ಹೈನೆಸ್ ಸಿಬಿ 350 ಬೈಕಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.86 ಲಕ್ಷಗಳಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

2. ಬೆನೆಲ್ಲಿ ಇಂಪೀರಿಯೇಲ್ 400

ಬೆನೆಲ್ಲಿ ಇಂಪೀರಿಯೇಲ್ 400 ಬೈಕಿನಲ್ಲಿ 374 ಸಿಸಿ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 21 ಬಿಹೆಚ್‌ಪಿ ಪವರ್ ಹಾಗೂ 29 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಆನ್ನು ಹಳೆ ಬ್ರಿಟಿಷ್ ಬೈಕಿನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ಈ ಬೈಕ್ ಫ್ಯೂಯಲ್ ಇಂಡಿಕೇಟರ್ ಹಾಗೂ ಗೇರ್ ಪೊಸಿಷನ್ ಇಂಡಿಕೇಟರ್ ಹೊಂದಿರುವ ಟ್ವಿನ್ ಪಾಡ್ ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ. ಸ್ಪೋಕ್ ವ್ಹೀಲ್‌ಗಳನ್ನು ಮಾತ್ರ ಹೊಂದಿರುವ ಈ ಬೈಕಿನಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಹಾಗೂ ಎಬಿಎಸ್ ನೀಡಲಾಗಿದೆ. ಬೆನೆಲ್ಲಿ ಇಂಪೀರಿಯೇಲ್ 400 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.89 ಲಕ್ಷಗಳಿಂದ ರೂ.1.93 ಲಕ್ಷಗಳಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

3. ಜಾವಾ ಕ್ಲಾಸಿಕ್

ಕ್ಲಾಸಿಕ್ ಬೈಕ್ ಸೆಗ್ ಮೆಂಟಿನಲ್ಲಿ ಕ್ಲಾಸಿಕ್ 350 ಹಾಗೂ ಜಾವಾ ಕ್ಲಾಸಿಕ್ ಬೈಕ್'ಗಳು ಕಠಿಣ ಸ್ಪರ್ಧೆಯನ್ನು ಹೊಂದಿವೆ. ಜಾವಾ ಕ್ಲಾಸಿಕ್ ಬೈಕಿನಲ್ಲಿ 293 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್'ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ಈ ಬೈಕಿನಲ್ಲಿ ಎಬಿಎಸ್ ಹಾಗೂ ಅಡ್ಜಸ್ಟಬಲ್ ರೇರ್ ಸಸ್ಪೆಂಷನ್ ನೀಡಲಾಗಿದೆ. ಈ ಬೈಕ್ ಅನ್ನು ಡ್ಯುಯಲ್ ಹಾಗೂ ಸಿಂಗಲ್ ಡಿಸ್ಕ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜಾವಾ ಕ್ಲಾಸಿಕ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.77 ಲಕ್ಷಗಳಿಂದ ರೂ.1.86 ಲಕ್ಷಗಳಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

4. ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350

350 ಸಿಸಿ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ರಾಯಲ್ ಎನ್‌ಫೀಲ್ಡ್ ಕಂಪನಿಯು ಮೆಟಿಯೋರ್ 350 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಕ್ಲಾಸಿಕ್ 350 ಬೈಕಿಗಿಂತ ಉತ್ತಮವಾದ ವಿನ್ಯಾಸ ಹಾಗೂ ಸುಧಾರಿತ ಫೀಚರ್'ಗಳನ್ನು ಹೊಂದಿದೆ. ಮೆಟಿಯೋರ್ 350 ರೆಟ್ರೊ ಕ್ರೂಸರ್ ಬೈಕ್ ಆಗಿದ್ದು, ಆರಾಮದಾಯಕ ಸವಾರಿ ನೀಡುತ್ತದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 41 ಕಿ.ಮೀ ಮೈಲೇಜ್ ನೀಡುತ್ತದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ಮೆಟಿಯೋರ್ 350 ಬೈಕ್ ಡ್ಯುಯಲ್ ಡಿಸ್ಕ್ ಬ್ರೇಕ್, ಸೆಮಿ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕನ್ಸೋಲ್, ನ್ಯಾವಿಗೇಷನ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಹೊಂದಿರುವ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.78 ಲಕ್ಷಗಳಾಗಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

5. ಬಜಾಜ್ ಡೊಮಿನಾರ್ 400

ಬಜಾಜ್ ಡೊಮಿನಾರ್ 400 ಬೈಕ್ ಪವರ್ ಹಾಗೂ ಪರ್ಫಾಮೆನ್ಸ್'ನಲ್ಲಿ 350 ಸಿಸಿ ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. ಡೊಮಿನಾರ್ 400 ಬೈಕ್ ಸ್ಪೋರ್ಟ್ಸ್ ವಿನ್ಯಾಸವನ್ನು ಹೊಂದಿದೆ. ಡೊಮಿನಾರ್ 400 ಬೈಕ್ 373 ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಸೆಗ್ ಮೆಂಟಿನಲ್ಲಿ ಅತಿ ದೊಡ್ಡ ಎಂಜಿನ್ ಹೊಂದಿರುವುದರಿಂದ 40 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಸವಾಲೊಡ್ಡುವ ಬೈಕುಗಳಿವು

ಈ ಬೈಕ್ ಎಲ್ಇಡಿ ಹೆಡ್ ಲೈಟ್, ಟೇಲ್ ಲೈಟ್, ಟರ್ನ್ ಇಂಡಿಕೇಟರ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಅಪ್-ಸೈಡ್ ಡೌನ್ ಟೆಲಿಸ್ಕೋಪಿಕ್ ಸಸ್ಪೆಂಷನ್, ಡಬಲ್ ಬ್ಯಾರೆಲ್ ಎಕ್ಸಾಸ್ಟ್ ಸೇರಿದಂತೆ ಹಲವು ಫೀಚರ್'ಗಳನ್ನು ನೀಡಲಾಗಿದೆ. ಈ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 26 ಕಿ.ಮೀ ಮೈಲೇಜ್ ನೀಡುತ್ತದೆ. ಡೊಮಿನಾರ್ 400 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.2.07 ಲಕ್ಷಗಳಾಗಿದೆ.

Most Read Articles

Kannada
English summary
motorcycles-which-competes-with-royal-enfield-classic-350-bike.
Story first published: Friday, July 9, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X