2021ರ ಸೂಪರ್‌ವೆಲೋಸ್ ಬೈಕ್‌ಗಳನ್ನು ಅನಾವರಣಗೊಳಿಸಿದ ಎಂವಿ ಅಗಸ್ಟಾ
ಇಟಲಿ ಮೂಲದ ಎಂವಿ ಅಗಸ್ಟಾ ಕಂಪನಿಯು ತನ್ನ ಸೂಪರ್‌ವೆಲೋಸ್‌ನ 2021ರ ಸರಣಿಯ ಬೈಕ್‌ಗಳನ್ನು ಅನಾವರಣಗೊಳಿಸಿದೆ. ಹೊಸದಾಗಿ ಈ ಸರಣಿಗೆ ಸೂಪರ್‌ವೆಲೋಸ್ ಎಸ್ ಮಾದರಿಯನ್ನು ಸೇರಿಸಿದೆ. ಈ ಸೂಪರ್‌ವೆಲೋಸ್ ಎಸ್ ಹೊಸ ಬಿಳಿ ಬಣ್ಣದಲ್ಲಿ ಬರುತ್ತದೆ.

ಇನ್ನು ಈ ಹೊಸ ಸೂಪರ್‌ವೆಲೋಸ್ ಎಸ್ ಬೈಕ್ ವ್ಹೀಲ್ ಗಳು ಹಿಂದಿನ ಮಾದರಿಗಳಂತೆ ಗ್ರೇ ಬಣ್ಣದ ಅಲ್ಕಾಂಟ್ರಾ ಸೀಟ್, ಮತ್ತು ರೇಸಿಂಗ್ ಕಿಟ್‌ನೊಂದಿಗೆ ಲಭ್ಯವಿರುತ್ತದೆ,ಇದರಲ್ಲಿ ಬ್ರೌನ್ ಅಲ್ಕಾಂಟ್ರಾ ಪ್ಯಾಡ್‌ನೊಂದಿಗೆ ಸಿಂಗಲ್-ಸೀಟ್ ಟೈಲ್ ಫೇರಿಂಗ್ ಒಳಗೊಂಡಿದೆ. ಟ್ರಿಪಲ್-ಟಿಪ್ ಎಕ್ಸಾಸ್ಟ್ ಮತ್ತು ಮೀಸಲಾದ ಮ್ಯಾಪಿಂಗ್‌ನೊಂದಿಗೆ ವಿಭಿನ್ನ ಇಸಿಯು. ಸ್ಟ್ಯಾಂಡರ್ಡ್ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಕೆಂಪು ಅಥವಾ ಹಳದಿ ಬಣ್ಣದ ಆಯ್ಕೆಗಳಲ್ಲಿಯು ಲಭ್ಯವಿರಲಿದೆ.

2021ರ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಸರಣಿಯ ಸ್ಟ್ಯಾಂಡರ್ಡ್ ಸೂಪರ್‌ವೆಲೋಸ್ ಮತ್ತು ಸೂಪರ್‌ವೆಲೋಸ್ ಎಸ್ ಮಾದರಿಗಳಲ್ಲಿ ಬ್ಲೂಟೂತ್-ಹೊಂದಾಣಿಕೆಯ 5.5-ಇಂಚಿನ ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಎರಡು ಬೈಕ್‌ಗಳಲ್ಲಿ ಈ ಬೈಕಿನಲ್ಲಿ 798 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 145 ಬಿಹೆಚ್‌ಪಿ ಪವರ್ ಮತ್ತು 10,600 ಆರ್‌ಪಿಎಂನಲ್ಲಿ 88 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿರುವ ಎಕ್ಸಾಸ್ಟ್ ಸಿಸ್ಟಂ 13,250 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಈ ಬೈಕಿನ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ಲಚ್‌ಲೆಸ್ ಶಿಫ್ಟಿಂಗ್‌ಗಾಗಿ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಿದೆ. ಈ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ. ಇನ್ನು ಈ ಸೂಪರ್‌ವೆಲೋಸ್ ಬೈಕ್‌ಗಳು 240 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇವುಗಳಲ್ಲಿ ನಾಲ್ಕು ಪವರ್ ಮೋಡ್‌ಗಳು, ಎಂಟು ಹಂತದ ಟ್ರ್ಯಾಕ್ಷನ್ ಕಂಟ್ರೋಲ್, ಮತ್ತು ರೇಸ್ ಮೋಡ್ ಮತ್ತು ರೇರ್-ವೀಲ್ ಲಿಫ್ಟ್ ನೊಂದಿಗೆ ಬಾಷ್ 9 ಪ್ಲಸ್ ಎಬಿಎಸ್ ಸೇರಿವೆ. ಎಂವಿ ಅಗಸ್ಟಾ ಸೂಪರ್ ವೆಲೋಸ್ ಬೈಕಿನಲ್ಲಿ ಸಸ್ಪೆಂಷನ್ ಗಾಗಿ 43 ಎಂಎಂ ಯುಎಸ್‌ಡಿ ಫೋರ್ಕ್ ಅಳವಡಿಸಿದೆ.

ಇದರೊಂದಿಗೆ ರಿಬೌಂಡ್-ಡ್ಯಾಂಪಿಂಗ್ ಮತ್ತು ಸ್ಪ್ರಿಂಗ್-ಪ್ರೀಲೋಡ್ ಮತ್ತು ಹಿಂಭಾಗದಲ್ಲಿ ಸ್ಯಾಚ್ಸ್‌ನಿಂದ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸೆಟಪ್ ಅನ್ನು ನೀಡಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಬೈಕಿನ ಬೈಕ್‌ಗಳ ಬಗ್ಗೆ ಹೇಳುವುದಾದರೆ, 320 ಎಂಎಂ ಫ್ಲೋಟಿಂಗ್ ಡಿಸ್ಕ್ ಮತ್ತು ಮುಂಭಾಗದಲ್ಲಿ ರೇಡಿಯಲ್-ಮೌಂಟೆಡ್ ನಾಲ್ಕು-ಪಿಸ್ಟನ್ ಬ್ರೆಂಬೊ ಮೊನೊಬ್ಲಾಕ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ ಎರಡು-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್ನೊಂದಿಗೆ 220 ಎಂಎಂ ಡಿಸ್ಕ್ ಅನ್ನು ಹೂಂದಿದೆ.

2021ರ ಸೂಪರ್‌ವೆಲೋಸ್ ಬೈಕ್‌ಗಳನ್ನು ಶೀಘ್ರದಲ್ಲೇ ಎಂವಿ ಅಗಸ್ಟಾ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಈ 2021ರ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಸರಣಿಯ ಬೈಕ್‌ಗಳು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.


Click it and Unblock the Notifications








