ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಎಂವಿ ಅಗಸ್ಟಾ ಇಟಲಿ ಮೂಲದ ಬೈಕ್ ತಯಾರಕ ಕಂಪನಿಯಾಗಿದೆ. ಈ ಕಂಪನಿಯು ತನ್ನ ಬೈಕ್‌ಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತದೆ. ಕಂಪನಿಯ ಬೈಕ್‌ಗಳು ವಿಶ್ವಾದಾದ್ಯಂತ ಜನಪ್ರಿಯವಾಗಿವೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಈಗ ಎಂವಿ ಅಗಸ್ಟಾ ಕಂಪನಿಯು ಎಲೆಕ್ಟ್ರಿಕ್ ಸೈಕಲ್ ಉತ್ಪಾದಿಸಲು ಮುಂದಾಗಿರುವ ಬಗ್ಗೆ ವರದಿಯಾಗಿದೆ. ಹೊಸ ಉದ್ಯಮಕ್ಕೆ ಕಾಲಿಡುವ ಮುನ್ನ ಕಂಪನಿಯು ಎರಡು ಲಘು ತೂಕದ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಅನಾವರಣಗೊಳಿಸಿದೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಎಂವಿ ಅಗಸ್ಟಾ ಕಂಪನಿಯು ಅಮೋ ಆರ್‌ಆರ್ ಹಾಗೂ ಅಮೋ ಆರ್‌ಸಿ ಹೆಸರಿನ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಪರಿಚಯಿಸಿದೆ. ಈ ಎರಡೂ ಎಲೆಕ್ಟ್ರಿಕ್ ಸೈಕಲ್‌ಗಳು250 ವ್ಯಾ ಅಕೌಸ್ಟಿಕ್ ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿವೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಈ ಎಲೆಕ್ಟ್ರಿಕ್ ಸೈಕಲ್ ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. 250ವ್ಯಾನ ಪ್ಯಾನಾಸೋನಿಕ್ ಬ್ಯಾಟರಿ ಈ ಎಲೆಕ್ಟ್ರಿಕ್ ಮೋಟರ್‌ಗೆ ಅಗತ್ಯವಾದಶಕ್ತಿಯನ್ನು ಒದಗಿಸುತ್ತದೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಈ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 75 ಕಿ.ಮೀಗಳವರೆಗೆ ಸಂಚರಿಸಬಹುದು. ಈ ಎರಡೂ ಸೈಕಲ್‌ಗಳು ಒಂದೇ ರೀತಿಯ ಬ್ಯಾಟರಿ ಹಾಗೂ ಒಂದೇ ರೀತಿಯ ಎಲೆಕ್ಟ್ರಿಕ್ ಮೋಟರ್ ಹೊಂದಿವೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಎಂವಿ ಅಗಸ್ಟಾ ಕಂಪನಿಯು ಈ ಎರಡೂ ಸೈಕಲ್‌ಗಳಲ್ಲಿ ಸಾಕಷ್ಟು ಅತ್ಯಾಧುನಿಕ ಫೀಚರ್'ಗಳನ್ನು ಅಳವಡಿಸಿದೆ. ಈ ಸೈಕಲ್‌ಗಳಲ್ಲಿ ಪಿರೆಲ್ಲಿ ಟಯರ್‌, ಮಕುರಾ ಡಿಸ್ಕ್ ಬ್ರೇಕ್‌ ಹಾಗೂ ಕಾರ್ಬನ್ ಡ್ರೈವ್ ಬೆಲ್ಟ್‌ಗಳನ್ನು ನೀಡಲಾಗಿದೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಈ ಎಲೆಕ್ಟ್ರಿಕ್ ಸೈಕಲ್‌ನ ಒಟ್ಟು ತೂಕ 15.5 ಕೆ.ಜಿಗಳಾಗಿದೆ. ಲಘು ತೂಕದ ಸೈಕಲ್ ರಚಿಸಲು ಕಂಪನಿಯು ವಿಶೇಷ ರೀತಿಯ ಫ್ಯಾಬ್ರಿಕ್ ಬಳಸಿದೆ. ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಎಂವಿ ಅಗಸ್ಟಾ ಕಂಪನಿಯು ಇಟಲಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಿದೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ವಿಶ್ವದಾದ್ಯಂತ ಕಂಪನಿಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವಾದ ಇಂಧನಗಳಿಗೆ ಆದ್ಯತೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಎಂವಿ ಅಗಸ್ಟಾ ಕಂಪನಿಯು ತನ್ನ ಗ್ರಾಹಕರನ್ನು ದುಬಾರಿ ಬೆಲೆಯ ಪ್ರೀಮಿಯಂ ಗುಣಮಟ್ಟದ ಬೈಕುಗಳಿಂದ ಮಾತ್ರವಲ್ಲದೆ ಎಲೆಕ್ಟ್ರಿಕ್ ಸೈಕಲ್‌ಗಳ ಮೂಲಕವೂಸೆಳೆಯಲು ಮುಂದಾಗಿದೆ.

ಎಲೆಕ್ಟ್ರಿಕ್ ಸೈಕಲ್‌ ಬಿಡುಗಡೆಗೆ ಮುಂದಾದ ಖ್ಯಾತ ಬೈಕ್ ತಯಾರಕ ಕಂಪನಿ

ಕಂಪನಿಯು ಈ ಎರಡು ಎಲೆಕ್ಟ್ರಿಕ್ ಸೈಕಲ್‌ಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಈ ಎಲೆಕ್ಟ್ರಿಕ್ ಸೈಕಲ್‌ಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Most Read Articles

Kannada
English summary
MV Augusta company to launch electric bicycles. Read in Kannada.
Story first published: Tuesday, July 6, 2021, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X