ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಜಮರ್ನಿ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈ ವರ್ಷ ಜುಲೈ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಇದೀಗ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಈ ಹೊಸ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2022ರ ವೇಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪರ್ಮೆನೆಂಟ್ ಮ್ಯಾಗ್ನೆಟ್ ಮೋಟರ್ ಅನ್ನು ಹೊಂದಿದ್ದು, ಇದನ್ನು ಬ್ಯಾಟರಿ ಮತ್ತು ಹಿಂದಿನ ಚಕ್ರದ ನಡುವೆ ಸ್ಟೀಲ್ ಫ್ರೇಮ್ ನಲ್ಲಿ ಜೋಡಿಸಲಾಗಿದೆ. ಇದು 42 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಈ ಹೊಸ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2022ರ ವೇಳೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪರ್ಮೆನೆಂಟ್ ಮ್ಯಾಗ್ನೆಟ್ ಮೋಟರ್ ಅನ್ನು ಹೊಂದಿದ್ದು, ಇದನ್ನು ಬ್ಯಾಟರಿ ಮತ್ತು ಹಿಂದಿನ ಚಕ್ರದ ನಡುವೆ ಸ್ಟೀಲ್ ಫ್ರೇಮ್ ನಲ್ಲಿ ಜೋಡಿಸಲಾಗಿದೆ. ಇದು 42 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಹೊಸ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಇಕೋ, ರೋಡ್ ಮತ್ತು ರೈನ್ ಎಂಬ ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಡೈನಾಮಿಕ್ ಮತ್ತು ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನ್ನು 2.3 ಕಿ.ವ್ಯಾಟ್ ಚಾರ್ಜರ್ ಮೂಲಕ 4 ಗಂಟೆ 20 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಚಾರ್ಜಿಂಗ್ ಸಮಯವನ್ನು 6.9 ಕಿ.ವ್ಯಾಟ್ ಫಾಸ್ಟ್ ಚಾರ್ಜರ್ ಮೂಲಕ ಒಂದು ಗಂಟೆ 40 ನಿಮಿಷಕ್ಕೆ ಇಳಿಸಬಹುದು.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಹೊಸ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಕೇವಲ 2.6 ಸೆಕೆಂಡುಗಳಲ್ಲಿ 0 ದಿಂದ 50 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಟ್ಯೂಬಲರ್ ಸ್ಟೀಲ್ ಫ್ರೇಮ್ ಅನ್ನು ಆಧರಿಸಿದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಈ ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 35 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಸೈಡಡ್ ಸ್ವಿಂಗಾಮ್ ನೊಂದಿಗ್ ಪ್ರಿ-ಲೋಡ್ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಒಳಗೊಂಡಿದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 265 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್ ಪ್ರೊ ಸಿಸ್ಟಂ ಅನ್ನು ಆಯ್ಕೆಯಾಗಿ ನೀಡಲಾಗುತ್ತದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಈ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ಸ್ಮಾರ್ಟ್ ಪೋನ್ ಕನೆಕ್ಟಿವಿಟಿ ಹೊಂದಿರುವ ದೊಡ್ಡ 10.25-ಇಂಚಿನ, ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಟಿಎಫ್ಟಿ ಡಿಸ್ ಪ್ಲೇಯನ್ನು ಕೂಡ ಹೊಂದಿದೆ. ಇದರಲ್ಲಿ ರೈಡಿಂಗ್ ಮೋಡ್ ಗಳ ಮಾಹಿತಿಯನ್ನು ಕೂಡ ಪ್ರದರ್ಶಿಸುತ್ತದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಭಾರತೀಯ ಮಾರುಕಟ್ಟೆಯಲ್ಲಿ, ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಹೊಸ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು, ಭಾರತದಲ್ಲಿ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ವಿತರಣೆಯನ್ನು ಕೂಡ ಈಗಾಗಲೆ ಪ್ರಾರಂಭಿಸಿದ್ದಾರೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಬೆಲೆಯು ರೂ.9,95,000 ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಮೊದಲ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಸ್ಕೂಟರ್ ಸಿಬಿಯು ಯುನಿಟ್ ಆಗಿ ಲಭ್ಯವಿರುತ್ತದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಆಲ್ಪೈನ್ ವೈಟ್ ಮತ್ತು ಸ್ಟೈಲ್ ಟ್ರಿಪಲ್ ಬ್ಲ್ಯಾಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ದುಬಾರಿ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ ಮುಂಭಾಗದಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್, ವಿಂಡ್‌ಶೀಲ್ಡ್, ಎರಡು ಗ್ಲೌಸ್ ಕಂಪಾರ್ಟ್‌ಮೆಂಟ್‌ಗಳು, ಸಿಂಗಲ್-ಸೆಕ್ಷನ್ ಸೀಟಿನ ಅಡಿಯಲ್ಲಿ ಒಂದು ಫ್ಲೆಕ್ಸ್‌ಕೇಸ್ ಮತ್ತು ಕೀಲೆಸ್ ರೈಡ್‌ನಂತಹ ಟ್ವಿನ್-ಪಾಡ್ ಎಲ್‌ಇಡಿ ಹೆಡ್‌ಲೈಟ್ ಅನ್ನು ಹೊಂದಿದೆ. ಈ ಫೀಚರ್ಸ್ ಗಳ ಪಟ್ಟಿಯು ಬ್ಲೂಟೂತ್-ಸಕ್ರಿಯಗೊಳಿಸಿದ 6.5-ಇಂಚಿನ ಪೂರ್ಣ-ಬಣ್ಣದ ಟಿಎಫ್ಟಿ ಸ್ಕ್ರೀನ್ ಮತ್ತು ಬಿಎಂಡಬ್ಲ್ಯು ಮೊಟೊರಾಡ್ ಮಲ್ಟಿ-ಕಂಟ್ರೋಲರ್ ಅನ್ನು ಒಳಗೊಂಡಿದೆ. 400 ಜಿಟಿಯು ಸೈಡ್-ಸ್ಟ್ಯಾಂಡ್ ಮತ್ತು ಸೆಂಟರ್-ಸ್ಟ್ಯಾಂಡ್ ಅನ್ನು ಒಳಗೊಂಡಿದೆ.

ಹೊಸ BMW CE 04 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಪ್ರಾರಂಭ

ಹೊಸ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ನಲ್ಲಿ ಟೈಪ್-ಸಿ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ನೊಂದಿಗೆ ವೆಂಟಿಲೆಟೆಡ್ ಮೊಬೈಲ್ ಚಾರ್ಜಿಂಗ್ ಪೊರ್ಟ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ನಲ್ಲಿ ಫ್ರಂಟ್ ಏಪ್ರನ್, ಎಲ್ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ವಿ-ಆಕಾರದ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್ ಮತ್ತು ದೊಡ್ಡ ಸೈಡ್ ಪ್ಯಾನೆಲ್‌ಗಳನ್ನು ಒಳಗೊಂಡಿದೆ, ಈ ಹೊಸ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಸ್ಕೂಟರ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

More from DriveSpark

Article Published On: Monday, November 22, 2021, 14:21 [IST]
English summary
New bmw ce 04 electric scooter production begins details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+