ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯು ಬಿಎಸ್6 ಗೋಲ್ಡ್ ವಿಂಗ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಗೋಲ್ಡ್ ವಿಂಗ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,37.20 ಲಕ್ಷಗಳಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಹೋಂಡಾ ಮೋಟರ್ ಸೈಕಲ್ ಕಂಪನಿಯು ತನ್ನ ಹೊಸ ಗೋಲ್ಡ್ ವಿಂಗ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಐಷಾರಾಮಿ ಬೈಕನ್ನು ಖರೀದಿಸಲು ಬಯಸುವ ಗ್ರಾಹರರು ಹೋಂಡಾ ಮೋಟರ್ ಸೈಕಲ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೋಂಡಾ ಗೋಲ್ಡ್ ವಿಂಗ್ ಬೈಕಿನ ವಿತರಣೆಯನ್ನು ಜುಲೈ ತಿಂಗಳಿನಲ್ಲಿ ಪ್ರಾರಂಭಿಸಬಹುದು.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಹೊಸ ಹೋಂಡಾ ಗೋಲ್ಡ್ ವಿಂಗ್ ಬೈಕ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್-ಅಪ್ ಯುನಿಟ್(ಸಿಬಿಯು) ಆಗಿ ಬರುತ್ತದೆ. ಈ ಬೈಕನ್ನು ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗುತ್ತದೆ. ಇನ್ನು 2021ರ ಹೋಂಡಾ ಗೋಲ್ಡ್ ವಿಂಗ್ ಬೈಕನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಕೆಲವು ಸಣ್ಣ ಬದಲಾವಣೆಗಳಿವೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಹೋಂಡಾ ಗೋಲ್ಡ್ ವಿಂಗ್ ಜಗತ್ತಿನಾದ್ಯಂತ ಲಭ್ಯವಿರುವ ಐಕಾನಿಕ್ ಬೈಕ್ ಗಳಲ್ಲಿ ಒಂದಾಗಿದೆ. ಹೊಸ ಬೈಕ್‌ನಲ್ಲಿ ಎದ್ದು ಕಾಣುವ ವೈಶಿಷ್ಟ್ಯವೆಂದರೆ ಇದರ 1695 ಎಂಎಂ ಲಾಂಗ್-ವೀಲ್‌ಬೇಸ್. ಡ್ಯುಯಲ್-ಪಾಡ್ ಹೆಡ್‌ಲ್ಯಾಂಪ್‌ಗಳೊಂದಿಗೆ ಅದರ ಡಿಸ್ಕ್ಟಿಕ್ಟಿವ್ ಫ್ರಂಟ್-ಎಂಡ್ ಸ್ಟೈಲಿಂಗ್ ಆಗಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಈ ಐಷಾರಾಮಿ ಬೈಕಿನಲ್ಲಿ 1,833 ಸಿಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 125 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

2021ರ ಹೋಂಡಾ ಗೋಲ್ಡ್ ವಿಂಗ್ ಬಹಳಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದರಲ್ಲಿ 7.0-ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಇದರೊಂದಿಗೆ ಗೈರೊಕಾಂಪಾಸ್ ನ್ಯಾವಿಗೇಷನ್, ಸ್ಮಾರ್ಟ್ ಕೀ, ಎಲೆಕ್ಟ್ರಾನಿಕ್-ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಹಿಲ್ ಸ್ಟಾರ್ಟ್ ಅಸಿಸ್ಟ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ (ಡಿಸಿಟಿ ಮಾತ್ರ) ಮತ್ತು ಆಲ್-ಎಲ್ಇಡಿ ಲೈಟಿಂಗ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಈ ಐಷಾರಾಮಿ ಹೋಂಡಾ ಗೋಲ್ಡ್ ವಿಂಗ್ ಬೈಕ್ ಟ್ರ್ಯಾವೇಲ್, ಸ್ಪೋಟ್ಸ್, ರೈನ್ ಮತ್ತು ಇಕಾನ್ ಎಂಬ ರೈಡಿಂಗ್ ಮೋಡ್ ಅನ್ನು ಹೊಂದಿರಲಿದೆ. 2021ರ ಗೋಲ್ಡ್ ವಿಂಗ್ ಅತ್ಯಂತ ಬೃಹತ್ ಗಾತ್ರದ ಅಲ್ಟ್ರಾ ಪ್ರೀಮಿಯಂ ಬೈಕ್ ಆಗಿದೆ. ಇನ್ನು ಈ ಬೈಕ್ ಸ್ಟೆಪ್ಡ್ ಸೀಟುಗಳನ್ನು ಸಹ ಪಡೆಯುತ್ತದೆ, ಇದು ದೀರ್ಘ ಸವಾರಿಗಳಿಗೆ ಸಾಕಷ್ಟು ಆರಾಮದಾಯಕವಾಗಿರುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಹೊಸ ಹೋಂಡಾ ಗೋಲ್ಡ್ ವಿಂಗ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬಲ್-ವಿಷ್ಬೋನ್ ಯುನಿಟ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಸೆಟಪ್ ಅನ್ನು ಹೊಂದಿದೆ. ಇದನ್ನು ಎಲೆಕ್ಟ್ರಿಕ್ ಕಂಟ್ರೋಲ್ ಜೊತೆ ಸಸ್ಪೆಂಕ್ಷನ್-ಡ್ಯಾಂಪಿಂಗ್ ಹೊಂದಾಣಿಕೆಯನ್ನು ಸಹ ಹೊಂದಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಇನ್ನು ಈ ಐಷಾರಾಮಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಆರು-ಪಿಸ್ಟನ್ ಕಾಲಿಪರ್‌ಗಳನ್ನು ಹೊಂದಿರುವ ಟ್ವಿನ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಮೂರು ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಸಿಂಗಲ್ 316 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬಹುನಿರೀಕ್ಷಿತ 2021ರ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬಿಡುಗಡೆ

ಹೋಂಡಾ ಗೋಲ್ಡ್ ವಿಂಗ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಈ ಹೊಸ ಹೋಂಡಾ ಗೋಲ್ಡ್ ವಿಂಗ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಇಂಡಿಯನ್ ಸ್ಪ್ರಿಂಗ್ಫೀಲ್ಡ್ ಡಾರ್ಕ್ ಹಾರ್ಸ್, ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಮತ್ತು ಇತರ ಕ್ರೂಸರ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, June 16, 2021, 15:55 [IST]
English summary
2021 Honda Gold Wing BS6 Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+