ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸ್ಪೋರ್ಟ್ ಟೂರಿಂಗ್ ಬೈಕನ್ನು ಪರಿಚಯಿಸಲು ಸಜ್ಜಾಗಿದೆ. ಇದು ಹೋಂಡಾ ಎನ್‌ಟಿ1100 ಸ್ಪೋರ್ಟ್ ಟೂರಿಂಗ್ ಬೈಕ್ ಆಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಹೋಂಡಾ ಎನ್‌ಟಿ1100 ಸ್ಪೋರ್ಟ್ ಟೂರಿಂಗ್ ಬೈಕ್ ಇದೇ ತಿಂಗಳ 21 ರಂದು ಅನಾವರಣವಾಗಲಿದೆ ಎಂದು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಟೀಸರ್ ವೀಡಿಯೊ ಮೂಲಕ ಖಚಿತಪಡಿಸಿದ್ದಾರೆ. ಬಿಡುಗಡೆಯಾಗಲಿರುವ ಸ್ಪೋರ್ಟ್ ಟೂರಿಂಗ್ ಬೈಕಿನ ಕೆಲವು ನೋಟಗಳನ್ನು ಟೀಸರ್ ವಿಡಿಯೋದಲ್ಲಿ ಕಾಣಬಹುದು. "ಹೊಸ ಟೂರಿಂಗ್ ಯುಗ" ಎಂಬ ಶೀರ್ಷಿಕೆಯ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಲಾಗಿದೆ. ಈ ಟೀಸರ್ ವೀಡಿಯೊದಲ್ಲಿ ಪರ್ವತಗಳ ನಡುವೆ ಇರುವ ರಸ್ತೆಯಲ್ಲಿ ಈ ಬೈಕ್ ಚಲಾಯಿಸುತ್ತಿರುವುದನ್ನು ತೋರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಹೊಸ ಹೋಂಡಾ ಎನ್‌ಟಿ1100 ಸ್ಪೋರ್ಟ್ ಟೂರಿಂಗ್ ಬೈಕ್ ಫ್ಲಾಟ್ ಆಗಿ ಅಗಲವಾದ ಹ್ಯಾಂಡಲ್‌ಬಾರ್, ಮತ್ತು ಸ್ಪೋರ್ಟ್ಸ್ ಫುಲ್ ಲಗೇಜ್, ಮತ್ತು ದೊಡ್ಡ ವಿಂಡ್‌ಸ್ಕ್ರೀನ್‌ನೊಂದಿಗೆ ಈ ಟೂರಿಂಗ್ ಬೈಕ್ ಬರಲಿದೆ. ಹೋಂಡಾ ಎನ್‌ಟಿ1100 ಎಂದು ಕರೆಯಲ್ಪಡುವ ಹೊಸ ಬೈಕು ಹೋಂಡಾ CRF1100L ಆಫ್ರಿಕಾ ಟ್ವಿನ್ ಅನ್ನು ಆಧರಿಸಿದೆ ಮತ್ತು ಅದೇ 1100 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹಂಚಿಕೊಳ್ಳುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಆಫ್ರಿಕಾ ಟ್ವಿನ್ ಬೈಕಿನಲ್ಲಿರುವ ಅದೇ ಸ್ಪ್ಲಿಟ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಆಟೋಮ್ಯಾಟಿಕ್ ಡಿಸಿಟಿ ಟ್ರಾನ್ಸ್‌ಮಿಷನ್ ಅನ್ನು ಹಂಚಿಕೊಳ್ಳಬಹುದು. ಈ ಹೊಸ ಹೋಂಡಾ ಎನ್‌ಟಿ1100 ಸ್ಪೋರ್ಟ್ ಟೂರಿಂಗ್ ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಆರ್1250ಆರ್‌ಟಿ, ಹಾಗೂ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್ ಗಳಿಗೆ ಪೈಪೋಟಿ ನೀಡಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಬೈಕಿನ ಎರಡು ವಿಭಿನ್ನ ರೂಪಾಂತರಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಹೋಂಡಾ ಎನ್‌ಟಿ110ಎ ಮತ್ತು ಹೋಂಡಾ ಎನ್‌ಟಿ110ಡಿ ಆಗಿರಬಹುದು. ಇದರಲ್ಲಿ ಎನ್‌ಟಿ110ಎ ಮೂಲ ರೂಪಾಂತರಿಯಾಗಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಲೋ ಸ್ಪೆಸಿಫಿಕೇಶನ್ ಒಳಗೊಂಡಿರುತ್ತದೆ. ಇನ್ನು ಎನ್‌ಟಿ110ಡಿ ರೂಪಾಂತರವು ಹೋಂಡಾದ ಡಿಸಿಟಿ ಗೇರ್ ಬಾಕ್ಸ್ ಅನ್ನು ಬಳಸುತ್ತದೆ ಮತ್ತು ಎತ್ತರದ ಸ್ಕ್ರೀನ್ ಸೇರಿದಂತೆ ಇತರ ಬದಲಾವಣೆಗಳನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಹೋಂಡಾ ಆಫ್ರಿಕಾಟ್ವಿನ್ ಬೈಕಿನಲ್ಲಿರುವ ಅದೇ 1,084 ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿರುತದೆ. ಈ ಎಂಜಿನ್ ಈ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 103 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಹೊಸ ಹೋಂಡಾ ಸ್ಪೋರ್ಟ್ ಟೂರಿಂಗ್ ಬೈಕ್ ಎಲೆಕ್ಟ್ರಾನಿಕ್ಸ್ ಸೂಟ್ ಅನ್ನು ಹೋಂಡಾ ಆಫ್ರಿಕಾ ಟ್ವಿನ್‌ನೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ. ಆದರೆ NT1100 ಮಾದರಿಯು ಆಫ್ರಿಕಾ ಟ್ವಿನ್ಗಿಂತ ಭಾರವಾಗಿರುತ್ತದೆ, ಏಕೆಂದರೆ ಹೆಚ್ಚು ಸಮಗ್ರವಾದ ಬಾಡಿವರ್ಕ್. ಎರಡೂ ಬೈಕುಗಳು ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, ಆಫ್ರಿಕಾ ಟ್ವಿನ್‌ನ ಸ್ಪೋಕ್ಡ್ ರಿಮ್‌ಗಳಿಗಿಂತ, ಮಾದರಿಗಳ ರೋಡ್-ಆಧಾರಿತ ಟೂರಿಂಗ್ ಸ್ವಭಾವದೊಂದಿಗೆ ಹೋಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಹೋಂಡಾ ಆಫ್ರಿಕಾ ಟ್ವಿನ್‌ ಬೈಕಿನಲ್ಲಿ ಅರ್ಬನ್, ಟೂರ್, ಗ್ರೇವೆಲ್, ಆಫ್-ರೋಡ್ ಮತ್ತು ಇತರ ಕಸ್ಟಮೈಸ್ ಮಾಡಬಹುದಾದ ಮೋಡ್‌ಗಳನ್ನು ಒಳಗೊಂಡಂತೆ ಅನೇಕ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ. ಈ ಅಡ್ವೆಂಚರ್ ಸ್ಪೋರ್ಟ್ಸ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಈ ಬೈಕಿನಲ್ಲಿ ಟಾಪ್ ಬಾಕ್ಸ್, ರಿಯರ್ ಕ್ಯಾರಿಯರ್, ರ್ಯಾಲಿ ಸ್ಟೆಪ್, ಡಿಸಿಟಿ ಪ್ಯಾಡಲ್ ಶಿಫ್ಟರ್, ಫಾಗ್ ಲ್ಯಾಂಪ್, ಫಾಗ್ ಲ್ಯಾಂಪ್ ಎಟಿಟಿ, ವಿಸರ್ ಮತ್ತು ಸೈಡ್ ಪೈಪ್ ಮುಂತಾದವುಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಈ 2021ರ ಆಫ್ರಿಕಾ ಟ್ವಿನ್ ಬೈಕಿನಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕಾರ್ನರಿಂಗ್ ಲೈಟ್ಸ್, ಕ್ರೂಸ್ ಕಂಟ್ರೋಲ್, 5-ಹಂತದ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಮತ್ತು ಹೊಂದಾಣಿಕೆ ಮಾಡಬಹುದಾದ ಸೀಟುಗಳೊಂದಿಗೆ ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಇಂತಹ ಕೆಲವು ಫೀಚರ್ಸ್ ಗಳನ್ನು ಹೊಸ ಹೋಂಡಾ ಸ್ಪೋರ್ಟ್ ಟೂರಿಂಗ್ ಬೈಕಿನಲ್ಲಿ ನೀಡಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತನ್ನ ಹೊಸ ಆಫ್ರಿಕಾ ಟ್ವಿನ್ ದರಿಯ 300 ಕ್ಕೂ ಹೆಚ್ಚು ಯೂನಿಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಿದೆ. ಅದರಲ್ಲಿ 100 ಯೂನಿಟ್‌ಗಳನ್ನು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವಿತರಿಸಲಾಗಿದೆ.ಹೋಂಡಾದ ಹೊಸ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಅನ್ನು ಕಂಪನಿಯ ಪ್ರೀಮಿಯಂ ಬಿಗ್‌ವಿಂಗ್ ಟಾಪ್‌ಲೈನ್ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಸೆಪ್ಟೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು 4,82,756 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇನ್ನು ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 19,077 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 5,26,865 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ Honda ಸ್ಪೋರ್ಟ್ ಟೂರಿಂಗ್ ಬೈಕ್

ವರ್ಷದಿಂದ ವರ್ಷದ ಮಾರಾಟದಲ್ಲಿ ಹೋಂಡಾ ಮೋಟಾರ್‌ಸೈಕಲ್ ಕುಸಿತವನ್ನು ಕಂಡಿದೆ. ಇನ್ನು ಕಳೆದ ವರ್ಷ ಹೋಂಡಾ 25,978 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ವರ್ಷದ ರಫ್ತಿಗೆ ಹೋಲಿಸಿದರೆ ಕುಸಿತವನ್ನು ಕಂಡಿದೆ. ಇನ್ನು ಹೊಸ ಹೋಂಡಾ ಸ್ಪೋರ್ಟ್ ಟೂರಿಂಗ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಂಪನಿಗೆ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಬಹುದು.

Most Read Articles

Kannada
English summary
New honda nt1100 sport touring bike teased unveil details
Story first published: Friday, October 15, 2021, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X