ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಕಬೀರ ಮೊಬಿಲಿಟಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳನ್ನು ಬಿಡುಗಡಗೊಳಿಸಲು ಸಜ್ಜಾಗಿದೆ. ಈ ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಭಾರತದಲ್ಲಿ ಬಿಡುಗಡೆಯಾಗಲಿರುವ ದಿನಾಂಕ ಬಹಿರಂಗವಾಗಿದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಇದೇ ತಿಂಗಳ 15 ರಂದು ಬಿಡುಗಡೆಯಾಗಲಿದೆ. ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳನ್ನು ಸ್ಥಳಿಯವಾಗಿ ಉತ್ಪಾದನೆ ಮತ್ತು ಅಭಿವೃದ್ಧಿ ಪಡಿಸಲಾಗುತ್ತದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಎರಡು ಬೈಕ್‌ಗಳಿಗೆ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಇನ್ನು ಇತ್ತೀಚೆಗೆ ಗೋವಾದ ವೆರ್ನಾ ಎಂಬ ಪ್ರದೇಶದಲ್ಲಿ ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕಿನ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕ್ ನೇಕೆಡ್ ವಿನ್ಯಾಸವನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ. ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಏರೋಡೈನಾಮಿಕ್ ಪ್ರೊಫೈಲ್‌ಗಳೊಂದಿಗೆ ಸಾಕಷ್ಟು ಆಧುನಿಕವಾಗಿವೆ. ಎರಡೂ ಬೈಕ್‌ಗಳಿಗೆ ಫೈರ್ ಫ್ರೋಮ್ ಬ್ಯಾಟರಿ, ಪಾರ್ಕ್ ಅಸಿಸ್ಟ್ ಮತ್ತು ಇತರ ಅತ್ಯಾಕರ್ಷಕ ಸ್ಮಾರ್ಟ್ ಫೀಚರ್ ಗಳನ್ನು ಹೊಂದಿರುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಇದರೊಂದಿಗೆ ಕಬೀರ ರೋಡ್ ಸೈಡ್ ಅಸಿಸ್ಟ್ (ಆರ್‌ಎಸ್‌ಎ), ಫಾಸ್ಟ್ ಚಾರ್ಜಿಂಗ್ ಮತ್ತು ಕಾಂಬಿ ಬ್ರೇಕ್‌ಗಳನ್ನು ಸಹ ಒಳಗೊಂಡಿರುತ್ತದೆ. ಈ ಬೈಕುಗಳ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಗಳನ್ನು ಒಳಗೊಂಡಿರುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಡೆಲ್ಟಾಇವಿ ಬಿಎಲ್‌ಡಿಸಿ ಮೋಟಾರ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್‌ಗಳು 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಈ ಎಲೆಕ್ಟ್ರಿಕ್ ಬೈಕುಗಳು ಸಿಂಗಲ್ ಚಾರ್ಜ್‌ನಲ್ಲಿ 150 ಕಿ.ಮೀ ದೂರವನ್ನು ಚಲಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಇನ್ನು ಕಬೀರ ಎಲೆಕ್ಟ್ರಿಕ್ ಬೈಕುಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಪಡೆಯುತ್ತದೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಈ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಕಬೀರ ಮೊಬಿಲಿಟಿ ಕಂಪನಿಯು ರಾಷ್ಟ್ರವ್ಯಾಪಿ ವಿಸ್ತರಿಸಲು ಮತ್ತು ಜಾಗತಿಕ ಮಟ್ಟಕ್ಕೆ ಹೋಗಲು ಯೋಜನೆಗಳನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಇದಕ್ಕಾಗಿ ಕಬೀರ ಮೊಬಿಲಿಟಿ ಕಂಪನಿಯು ಭರ್ಜರಿಯಾಗಿ ಸಿದ್ದವಾಗುತ್ತಿದೆ. ಬೆಳೆಯುತ್ತಿರುವ ಕಬೀರ ಮೊಬಿಲಿಟಿ ಕಂಪನಿಯ ಪ್ರಧಾನ ಕಚೇರಿಯು ಗೋವಾದಲ್ಲಿದೆ. ಈ ಕಂಪನಿಯು ಗೋವಾ ಮತ್ತು ಕರ್ನಾಟಕದ ಧಾರವಾಡದಲ್ಲಿ ಅತಿದೊಡ್ಡ ಉತ್ಪಾದನಾ ಘಟಕಗಳನ್ನು ಹೊಂದಿವೆ.

ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಕಬೀರ ಎಲೆಕ್ಟ್ರಿಕ್ ಬೈಕುಗಳು

ಭಾರತೀಯ ಮಾರುಕಟ್ಟೆಗೆ ಪ್ರಾಯೋಗಿಕ ಮತ್ತು ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸಲು ಕಬೀರ ಕಂಪನಿಯು ಗಮನ ಹರಿಸುತ್ತದೆ. ಇನ್ನು ಬಹುನಿರೀಕ್ಷಿತ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Article Published On: Thursday, February 4, 2021, 19:04 [IST]
English summary
Kabira Electric Motorcycles KM3000, KM4000 India Launch On 15th Feb. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+