Just In
- 7 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 7 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 8 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 9 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಯ್ತು ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕ್
ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2021ರ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಮಾದರಿಯು ನೇಕೆಡ್ ರೋಡ್ಸ್ಟರ್ನ ಪ್ರೀಮಿಯಂ ರೂಪಾಂತರವಾಗಿದೆ.
ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಮಾದರಿಯ ಕೇವಲ 500 ಯೂನಿಟ್ಗಳನ್ನು ಮಾತ್ರ ಉತ್ಪಾದಿಸುತ್ತದೆ. ಯುರೋಪಿಯನ್ ಮಾರುಕಟ್ಟೆಯಲ್ಲಿ ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಈ ಬೈಕಿನ ಅಗ್ರೇಸಿವ್ ಲುಕ್ ನಿಂದ ತಿಳಿಯುತ್ತದೆ, ಇದರ ಹೆಸರಿಗೆ ತಕ್ಕಂತೆ ಸೂಪರ್ ಇದು ಪಾರ್ಫೆಮೆನ್ಸ್ ಮಾದರಿ ಎಂಬುದು.
ಇನ್ನು ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕಿನಲ್ಲಿ 1,301 ಸಿಸಿ, ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 177.5 ಬಿಹೆಚ್ಪಿ ಪವರ್ ಮತ್ತು 140 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಹೀರೋ ಎಕ್ಸ್ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಕೆಟಿಎಂ ಈ ಬೈಕಿನ ತೂಕವನ್ನು ಇಳಿಸಲು ಸಾಕಷ್ಟು ಪರಿಶ್ರಮಿಸಿದ್ದಾರೆ ಎಂದು ಇದರ ವಿನ್ಯಾಸ ನೋಡಿದಾಗ ತಿಳಿಯುತ್ತದೆ. ಈ ಸೂಪರ್ ಡ್ಯೂಕ್ ಆರ್ಆರ್ ಬೈಕ್ ಒಟ್ಟು 180 ಕೆಜಿ ತೂಕವನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ 1290 ಸೂಪರ್ ಡ್ಯೂಕ್ ಆರ್ ಗಿಂತ ಒಂಬತ್ತು ಕೆಜಿ ಹಗುರವಾಗಿದೆ.
ಇನ್ನು ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕಿನಲ್ಲಿ ಕಾರ್ಬನ್-ಫೈಬರ್ ಬಾಡಿವರ್ಕ್, ಹಗುರವಾದ ಲಿಥಿಯಂ-ಐಯಾನ್ ಬ್ಯಾಟರಿ, ಫೋರ್ಗ್ಡ್ ವ್ಹೀಲ್ ಗಳು ಮತ್ತು ಮರುವಿನ್ಯಾಸಗೊಳಿಸಲಾದ ಸಿಂಗಲ್ ಸೀಟ್ ನೊಂದಿಗೆ ಕರ್ಬನ್-ಫೈಬರ್ ಸಬ್-ಫ್ರೇಮ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಇನ್ನು ವ್ಹೀಲ್ ಗಳನ್ನು ಮೈಕೆಲಿನ್ ಪವರ್ ಕಪ್ 2 ಟೈರ್ಗಳಲ್ಲಿ ಸುತ್ತಿಡಲಾಗಿದೆ. ಇತರ ಬದಲಾವಣೆಗಳು ಅಂದರೆ, ಹೊಸ ಎಲ್ಇಡಿ ಟರ್ನ್ ಸಿಗ್ನಲ್ಗಳಲ್ಲಿ ಮರುವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್ಲೈಟ್ಗಳು ಮತ್ತು ಕೆಟಿಎಂನ ಅಡಾಪ್ಟಿವ್ ಬ್ರೇಕ್ ಲೈಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಸೇರಿಸಲಾಗಿದೆ.
ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕ್ ಸಹ ಸ್ಟ್ಯಾಂಡರ್ಡ್ 1290 ಸೂಪರ್ ಡ್ಯೂಕ್ಆರ್ಆರ್ ನಲ್ಲಿ ಇರುವಂತೆ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಡಬ್ಲ್ಯೂಪಿ ಅಪೆಕ್ಸ್ ಪ್ರೊ 7548 ಕ್ಲೋಸ್ ಕಾರ್ಟ್ರಿಡ್ಜ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದ ಅಪೆಕ್ಸ್ ಪ್ರೊ 7746 ಸಸ್ಪೆಂಕ್ಷನ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಇನ್ನು ಈ ಹೊಸ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕಿನಲ್ಲಿ ಅಕ್ರಪೋವಿಕ್ 'ಸ್ಲಿಪ್-ಆನ್ ಲೈನ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಅಕ್ರಪೋವಿಕ್ ಕಿಟ್ 'ಎವಲ್ಯೂಷನ್ ಲೈನ್ ಸಿಸ್ಟಂ ಅನ್ನು ಈ ಬೈಕಿನಲ್ಲಿ ಹೆಚ್ಚುವರಿ ಆಗಿ ನೀಡಲಾಗಿದೆ.
ನೇಕೆಡ್ ರೋಡ್ಸ್ಟರ್ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್ ಬೈಕಿನಲ್ಲಿ ಹಲವಾರು ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ನೀಡಲಾಗಿದೆ. ಇದು ರೇರ್-ವ್ಹೀಲ್ ಸ್ಲಿಪ್, ಥ್ರೊಟಲ್ ರೆಸ್ಪಾನ್ಸ್, ಲಾಂಚ್ ಕಂಟ್ರೋಲ್ ಮತ್ತು ಮೋಟಾರ್ ಸ್ಲಿಪ್ ಕಂಟ್ರೋಲ್ ಸೇರಿವೆ.