ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕ್
ಆಸ್ಟ್ರಿಯಾ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ತನ್ನ 790 ಅಡ್ವೆಂಚರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಕೆಟಿಎಂ 790 ಅಡ್ವೆಂಚರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಅಡ್ವೆಂಚರ್ ಬೈಕ್‌ಗಳಲ್ಲಿ ಒಂದಾಗಿದೆ.

ಈ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕ್ ಪುಣೆಯ ಬಜಾಜ್‌ನ ಚಕನ್ ಸ್ಥಾವರದಲ್ಲಿ ಕಾಣಿಸಿಕೊಂಡಿದ್ದು, ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಈ ಅಡ್ವೆಂಚರ್ ಬೈಕನ್ನು ಭಾರತಕ್ಕೆ ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ತರಲಾಗುತ್ತದೆ. ಸ್ಪೈ ಚಿತ್ರದಲ್ಲಿ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕ್ ಸಿಗ್ನೇಚರ್ ಆರೆಂಜ್ ಬಣ್ಣವನ್ನು ಹೊಂದಿದೆ, ಈ ಬೈಕಿನಲ್ಲಿ ವಿ-ಆಕಾರದ ಸ್ಪ್ಲಿಟ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಈ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕಿನ ಫ್ಯೂಯಲ್ ಟ್ಯಾಂಕಿನಲ್ಲಿ ‘790' ಬ್ಯಾಡ್ಜ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎತ್ತರದ ವಿಂಡ್‌ಸ್ಕ್ರೀನ್ ಮತ್ತು ರಿಯರ್ ವ್ಯೂ ಮೀರರ್ಸ್ ಗಳನ್ನು ಇರಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು.

ಇನ್ನು ಈ ಅಡ್ವೆಂಚರ್ ಬೈಕಿನಲ್ಲಿ 5.0-ಇಂಚಿನ ಸಂಪೂರ್ಣ ಪ್ರಮಾಣದ ಡಿಜಿಟಲ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಸ್ವಿಚ್ ಮಾಡಬಹುದಾದ ಆಫ್-ರೋಡ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಪಡೆಯುತ್ತದೆ.

ಇನ್ನು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕ್ ಸ್ಟ್ರೀಟ್, ಆಫ್-ರೋಡ್, ರೈನ್ ಮತ್ತು ರ್ಯಾಲಿ ಎಂಬ ನಾಲ್ಕು ರೈಡಿಂಗ್ ಮೋಡ್ ಗಳನ್ನು ಕೂಡ ಒಳಗೊಂಡಿದೆ.

ಈ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕಿನಲ್ಲಿ 799ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 94 ಬಿಹೆಚ್‌ಪಿ ಪವರ್ ಮತ್ತು 88 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.

ಇನ್ನು ಈ ಕೆಟಿಎಂ 790 ಅಡ್ವೆಂಚರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬ್ಲ್ಯೂಪಿ ಅಪೆಕ್ಸ್ 43 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಹೊಂದಿದೆ. ಇದು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್ಗಳಲ್ಲಿ 200 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿರುತ್ತದೆ.

ಇನ್ನು ಈ ಅಡ್ವೆಂಚರ್ ಬೈಕಿನಲ್ಲಿ ವೈರ್-ಸ್ಪೋಕ್ 21 ಇಂಚಿನ ಮುಂಭಾಗ ಮತ್ತು ಡ್ಯುಯಲ್ ಪರ್ಪಸ್ ಟೈರ್‌ಗಳೊಂದಿಗೆ 18 ಇಂಚಿನ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಈ ಅಡ್ವೆಂಚರ್ ಬೈಕ್ 189 ಕೆಜಿ ತೂಕವನ್ನು ಹೊಂದಿದೆ

ಇನ್ನು ಈ ಹೊಸ ಕೆಟಿಎಂ ಅಡ್ವೆಂಚರ್ ಬೈಕ್ 233 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ಹೊಸ 790 ಅಡ್ವೆಂಚರ್ ಬೈಕನ್ನು ಕೆಟಿಎಂ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಕೆಟಿಎಂ 790 ಅಡ್ವೆಂಚರ್ ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.
Image Courtsey: IamaBiker/Facebook


Click it and Unblock the Notifications








