ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಕೆಟಿಎಂ ಇಂಡಿಯಾ ಕಂಪನಿಯು ತನ್ನ 2021ರ ಆರ್‍‍ಸಿ 390 ಸಂಪೂರ್ಣ ಫೇರ್ಡ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ, ವಿನ್ಯಾಸ ಕೆಲವು ಬದಲಾವಣೆಗಳೊಂದಿಗೆ 2021ರ ಕೆಟಿಎಂ ಆರ್‍‍ಸಿ 390 ಬೈಕ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಭಾರತದಲ್ಲಿ ಕೆಟಿಎಂ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಕಾಲೇಜ್ ಹುಡುಗರಿಂದ ಐಟಿ-ಬಿಟಿ ಕ್ಷೇತ್ರದಲ್ಲಿಯು ಕೆಟಿಎಂ ಅಭಿಮಾನಿಗಳು ಇದ್ದಾರೆ. ಕೆಟಿಎಂ ಬೈಕ್‌ಗಳ ಪವರ್ ಮತ್ತು ಪರ್ಫಾಮೆನ್ಸ್ ನೋಡಿ ಹೆಚ್ಚಿನವರು ಫಿದಾ ಆಗಿದ್ದಾರೆ. ಇನ್ನು ಜನಪ್ರಿಯ ಕೆಟಿಎಂ ಆರ್‍‍ಸಿ 390 ಬೈಕ್ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ಸ್ಪೈ ಚಿತ್ರವನ್ನು ಐಎಬಿ ಬಹಿರಂಗಪಡಿಸಿದೆ. ಸ್ಪೈ ಚಿತ್ರದಲ್ಲಿ ಈ ಹೊಸ ಕೆಟಿಎಂ ಬೈಕಿನ ವಿನ್ಯಾಸದ ಬಗ್ಗೆ ಹಲವು ಮಾಹಿತಿಗಳು ಬಹಿರಂಗವಾಗಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಹೊಸ ಕೆಟಿಎಂ ಆರ್‍‍ಸಿ 390 ಹೊಸ ಹೆಡ್‌ಲ್ಯಾಂಪ್ ಹೊಂದಿರುವ ಎಲ್ಲ ಹೊಸ ಫ್ರಂಟ್-ಎಂಡ್ ಅನ್ನು ಒಳಗೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಾದರಿಯಲ್ಲಿರುವ ಟ್ವಿನ್-ಪಾಡ್ ಪ್ರೊಜೆಕ್ಟರ್ ಅನ್ನು ಬದಲಾಯಿಸಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಇನ್ನು ಈ ಹೊಸ ಬೈಕಿನ ವಿಂಡ್‌ಸ್ಕ್ರೀನ್ ದೊಡ್ಡದಾಗಿದೆ ಮತ್ತು ಹೆಚ್ಚಿನ ವೇಗದಲ್ಲಿಯು ಗಾಳಿಯ ರಕ್ಷಣೆಯನ್ನು ನೀಡುತ್ತದೆ. ಇನ್ನು ಈ ಬೈಕಿನಲ್ಲಿ ನವೀಕರಿಸಿದ ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದೆ. ಇತರ ಬದಲಾವಣೆಗಳಲ್ಲಿ ಹೊಸ ಫ್ಲೋಟಿಂಗ್-ಟೈಪ್ ಫ್ರಂಟ್ ಡಿಸ್ಕ್ ಬ್ರೇಕ್ ಸೆಟಪ್ ಜೊತೆಗೆ ಹೊಸ ಸಣ್ಣ ಸೈಡ್-ಮೌಂಟೆಡ್ ಎಕ್ಸಾಸ್ಟ್ ಎಂಡ್ ಸೇರಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಹೆಚ್ಚುವರಿಯಾಗಿ, ಹೊಸ ಬೈಕ್ ಫೇರಿಂಗ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಬೈಕಿನ ವಿನ್ಯಾಸಕ್ಕೆ ಹೋಲಿಸಿದರೆ ಹೊಸದು ಹೆಚ್ಚು ಆಕರ್ಷಕವಾಗಿದೆ, ಇನ್ನು ಹಿಂದಿನ ಮಾದರಿಯಂತೆ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಮೇಲೆ ತಿಳಿಸಿದ ಎಲ್ಲಾ ಬದಲಾವಣೆಗಳ ಹೊರತಾಗಿ, ಕಂಪನಿಯು ಹೊಸ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅನ್ನು ಅಳವಡಿಸಿದೆ. 2020ರ ಮಾದರಿಯಲ್ಲಿ ಪರಿಚಯಿಸಲಾದ ಎಲ್‌ಸಿಡಿ ಯುನಿಟ್ ಅನ್ನು ಇದರಲ್ಲಿಯು ಕಾಣಬಹುದು.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಹೊಸ ಕೆಟಿಎಂ ಆರ್‍‍ಸಿ 390 ಬೈಕಿನ ಮೆಕ್ಯಾನಿಕಲ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವಂದು ನಿರೀಕ್ಷಿಸುತ್ತೇವೆ. ಇದರಲ್ಲಿ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು 320 ಎಂಎಂ ದೊಡ್ಡ ಫ್ರಂಟ್ ಬ್ರೇಕ್ ಡಿಸ್ಕ್ ಅನ್ನು ಒಳಗೊಂಡಿವೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ 2021ರ ಕೆಟಿಎಂ ಆರ್‍‍ಸಿ 390 ಬೈಕ್

ಹೊಸ ಕೆಟಿಎಂ ಆರ್‍‍ಸಿ 390 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಸಮರ್ಥ ಟ್ರ್ಯಾಕ್-ಬಯಾಸ್ಡ್ ಬೈಕ್ ಆಗಿದೆ. ಹೊಸ ಕೆಟಿಎಂ ಆರ್‍‍ಸಿ 390 ಬೈಕ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Tuesday, March 16, 2021, 21:22 [IST]
English summary
2021 KTM RC 390 Spied For The First Time Ahead Of India Launch. Read In Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+