Just In
Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ ನಡೆಸಿದ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್
ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ 650ಸಿಸಿ ಕ್ರೂಸರ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಕ್ರೂಸರ್ ಬೈಕ್ 2018ರ ಇಐಸಿಎಂಎ ನಲ್ಲಿ ಪ್ರದರ್ಶಿಸಲಾದ ಕೆಎಕ್ಸ್ ಬಾಬರ್ ಕಾನ್ಸೆಪ್ಟ್‌ಗೆ ಹೋಲುತ್ತದೆ.

ಹೊಸ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ 650ಸಿಸಿ ಕ್ರೂಸರ್ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ಗಾಡಿವಾಡಿ ಬಹಿರಂಗಪಡಿಸಿದೆ. ಸ್ಪೈ ಚಿತ್ರದಲ್ಲಿ ಈ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕಿನಲ್ಲಿ ದುಂಡಗಿನ ಆಕಾರದ ಹೆಡ್‌ಲ್ಯಾಂಪ್‌ಗಳಿಂದ ಅದರ ಪಕ್ಕದಲ್ಲಿ ಇರಿಸಲಾಗಿರುವ ಬ್ರ್ಯಾಂಡ್‌ನ ಟಿಪ್ಪರ್ ನ್ಯಾವಿಗೇಷನ್ ಯುನಿಟ್ ನೊಂದಿಗೆ ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಈ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ ಎರಡೂ ಬದಿಗಳಲ್ಲಿ ಟ್ವಿನ್-ಕ್ರೋಮ್ ಫಿನಿಶಿಂಗ್ ಎಕ್ಸಾಸ್ಟ್ ಅನ್ನು ಒಳಗೊಂಡಿರುತ್ತದೆ. ಫ್ಯೂಯಲ್ ಟ್ಯಾಂಕ್‌ನ ಕೆಳಗೆ ಇರಿಸಲಾಗಿರುವ ಹೀಟ್-ಗಾರ್ಡ್ ಪ್ಲೇಟ್, ಎರಡು ವಿಭಿನ್ನ ಅಲಾಯ್ ವ್ಹೀಲ್ ಗಾತ್ರಗಳನ್ನು ಬಳಸುತ್ತಿದೆ. ಈ 650ಸಿಸಿ ಕ್ರೂಸರ್ ಬೈಕಿನ ಮುಂಭಾಗ ಮತ್ತು ಹಿಂಭಾಗದ ಅಲಾಯ್ ವ್ಹೀಲ್ ಗಳು ಕ್ರಮವಾಗಿ 17-ಇಂಚು ಮತ್ತು 16-ಇಂಚುಗಳಾಗಿರಬಹುದು.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಕ್ರೂಸರ್ ಬೈಕಿನ ಎರಡೂ ತುದಿಗಳಲ್ಲಿ ದುಂಡಾದ-ಫೆಂಡರ್‌ಗಳನ್ನು ಹೊಂದಿದ್ದು, ಹಿಂಭಾಗದಲ್ಲಿ ಕಡಿಮೆ-ಸೆಟ್ ಟರ್ನ್-ಸಿಗ್ನಲ್ ಇಂಡಿಕೇಟರ್ ಗಳೊಂದಿಗೆ ದುಂಡಗಿನ ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಹೊಂದಿದೆ. ಈ ಬೈಕ್ ರೆಟ್ರೊ-ಬಾಬರ್ ವಿನ್ಯಾಸವನ್ನು ಹೊಂದಿದ್ದು, ಸುಮಾರು 17 ಲೀಟರ್ ಸಾಮರ್ಥ್ಯದ ದೊಡ್ಡ ಫ್ಯೂಯಲ್ ಟ್ಯಾಂಕ್ ಹೊಂದಿದೆ,

ಇದು ಪ್ರಸ್ತುತ ದೇಶದಲ್ಲಿ ಮಾರಾಟವಾಗುತ್ತಿರುವ ಇತರ 650ಸಿಸಿ ಬೈಕುಗಳಿಗೆ ಹೋಲಿಸಿದರೆ ಉತ್ತಮ ಬೈಕ್ ಆಗಿರಲಿದೆ .ಈ ಬೈಕ್ ವಿಶಾಲ ಹ್ಯಾಂಡಲ್‌ಬಾರ್ ಅನ್ನು ಹೊಂದಿದ್ದು, ಸ್ವಲ್ಪ ಮುಂದಕ್ಕೆ ಹೊಂದಿಸಲಾದ ಫುಟ್‌ಪೆಗ್‌ಗಳನ್ನು ಹೊಂದಿದ್ದು, ಆರಾಮವಾಗಿರುವ ಸವಾರಿ ಮಾಡಬಹುದಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬೈಕ್ ಕಡಿಮೆ ರೈಡರ್ ಸೀಟ್ ಹೊಂದಿರುವುದರಿಂದ ಟ್ರಾಫಿಕ್ ನಲ್ಲಿ ಸುಲಭವಾಗಿ ಚಲಿಸಲು ಹೆಚ್ಚು ಸಹಕಾರಿಯಾಗಿರುತ್ತದೆ. ಇನ್ನು ಹೃದಯ ಭಾಗ ಎಂದು ಕರೆಯುವ ಎಂಜಿನ್ ಬಗ್ಗೆ ಹೇಳುವುದಾದರೆ, 650 ಟ್ವಿನ್ ಬೈಕುಗಳಲ್ಲಿರುವ ಅದೇ ಎಂಜಿನ್ ಅನ್ನು ಅಳವಡಿಸಬಹುದು.

ಹೊಸ ಕ್ರೂಸರ್ ಬೈಕಿನಲ್ಲಿ 649 ಸಿಸಿ ಏರ್ ಮತ್ತು ಆಯಿಲ್-ಕೂಲ್ಡ್, ಪ್ಯಾರೆಲಲ್-ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 47 ಬಿಹೆಚ್‌ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಹೊಸ ಕ್ರೂಸರ್ ಮಾದರಿಯಲ್ಲಿ ಇದೇ ಎಂಜಿನ್ ಅನ್ನು ಅಳವಡಿಸಬಹುದು. ರಾಯಲ್ ಎನ್‌ಫೀಲ್ಡ್ ತನ್ನ ಮೂರನೇ 650ಸಿಸಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ 650ಸಿಸಿ ಕ್ರೂಸರ್ ಬೈಕ್ ಬ್ರ್ಯಾಂಡ್‌ನಿಂದ ಪ್ರೀಮಿಯಂ ಕ್ರೂಸರ್ ಬೈಕ್ ಆಗಿರಲಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.