Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಧಿಕ ಮೈಲೇಜ್ ನೀಡುವ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ
ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸ್ಮಾರ್ಟ್ರಾನ್ ಇಂಡಿಯಾ ತನ್ನ ಹೊಸ ಟಿಬೈಕ್ ಫ್ಲೆಕ್ಸ್ ಎಲೆಕ್ಟ್ರಿಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಎಲೆಕ್ಟ್ರಿಕ್ ಬೈಕಿನ ಬೆಲೆಯು ರೂ.40,000 ಗಳಾಗಿದೆ.

ಈ ಹೊಸ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಎಲೆಕ್ಟ್ರಿಕ್ ಬೈಕ್ ಹಲವಾರು ಸ್ಮಾರ್ಟ್ ಫೀಚರ್ ಗಳನ್ನು ಪಡೆದುಕೊಂಡಿದೆ. ಕಂಪನಿಯ ಪ್ರಕಾರ, ಟಿಬೈಕ್ ಫ್ಲೆಕ್ಸ್ 40 ಕೆಜಿ ತೂಕದ ಸಾಮಗ್ರಿಗಳನ್ನು ಸಾಗಿಸಬಲ್ಲದು. ಈ ಬೈಕನ್ನು ಮಹಿಳೆಯರಿಗೆ ಮತ್ತು ಪುರಷರಿಗೆ ಸರಿಹೊಂದುವಂತಹ ರೀತಿ ಸರಳ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಹಿಂಭಾಗದಲ್ಲಿ ಫ್ಲಾಟ್ ರ್ಯಾಕ್ ಮತ್ತು ಮುಂಭಾಗದಲ್ಲಿ ಲೋಡ್-ಸಾಗಿಸುವ ಬಾಸ್ಕೆಟ್ ಅನ್ನು ನೀಡಿದ್ದಾರೆ.

ಈ ಹೊಸ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಎಲೆಕ್ಟ್ರಿಕ್ ಬೈಕಿನ ಮುಂಭಾಗದ ಬಾಸ್ಕೆಟ್ ಕೆಳಗೆ ಜೋಡಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್, ನೇರವಾದ ಹ್ಯಾಂಡಲ್‌ಬಾರ್, ಫ್ಲಾಟ್-ಸೀಟ್, ಸ್ಪೋಕ್ ವ್ಹೀಲ್‌ಗಳೊಂದಿಗೆ ಟ್ಯೂಬ್ ಟೈರ್ ಮತ್ತು ಫ್ಲಾಟ್ ಫುಟ್‌ಬೋರ್ಡ್ ಇತರ ಫೀಚರ್ ಗಳನ್ನು ಒಳಗೊಂಡಿವೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಬೈಕಿನ ಹಿಂಭಾಗದಲ್ಲಿ ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಬೈಕ್ 25 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇನ್ನು ಈ ಹೂಸ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಬೈಕ್ ಒಂದು ಬಾರಿ ಪೂರ್ಣ ಪ್ರಮಾಣ ಚಾರ್ಚ್ ಮಾಡಿದರೆ 75 ರಿಂದ 120 ಕಿ.ಮೀ.ವರೆಗೆ ಚಲಿಸುತ್ತದೆ. ಇನ್ನು ಈ ಎಲೆಕ್ಟ್ರಿಕ್ ಬೈಕ್ 25 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವುದರಿಂದ ನೋಂದಣಿ ಅಗತ್ಯವಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಕೂಟರ್ ಸ್ಮಾರ್ಟ್ ಪ್ಯಾಡ್‌ಲಾಕ್ ಅನ್ನು ಸಹ ಹೊಂದಿದೆ, ಇದನ್ನು ಕಂಪನಿಯು ಒದಗಿಸುವ ಐಒಟಿ ತಂತ್ರಜ್ಞಾನದ ಮೂಲಕ ಅನ್ಲಾಕ್ ಮಾಡಬಹುದು. ಇದಲ್ಲದೆ, ಬ್ಯಾಟರಿ ವಿನಿಮಯ ಮಾಡಿಕೊಳ್ಳಬಲ್ಲದು, ಇದು ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಾಯೋಗಿಕತೆಯನ್ನು ಹೆಚ್ಚಿಸುತ್ತದೆ.

ಹೂಸ ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಬೈಕ್ ಸ್ಮಾರ್ಟ್ ಪ್ಯಾಡ್‌ಲಾಕ್ ಅನ್ನು ಸಹ ಹೊಂದಿದೆ, ಇದನ್ನು ಕಂಪನಿಯು ಒದಗಿಸುವ ಐಒಟಿ ತಂತ್ರಜ್ಞಾನದ ಮೂಲಕ ಅನ್ ಲಾಕ್ ಮಾಡಬಹುದು. ಇದಲ್ಲದೆ, ಬ್ಯಾಟರಿ ವಿನಿಮಯ ಮಾಡಿಕೊಳ್ಳಬಲ್ಲದು, ಇದು ಎಲೆಕ್ಟ್ರಿಕ್ ಬೈಕಿನ ಪ್ರಾಯೋಗಿಕತೆಯನ್ನು ಹೆಚ್ಚಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಟ್ರಾನ್ಎಕ್ಸ್ ಕಸ್ಟಮೈಸ್ಡ್ ಫ್ಲೀಟ್ ಮತ್ತು ರೈಡರ್ ಮ್ಯಾನೇಜ್ಮೆಂಟ್ ವೈಶಿಷ್ಟ್ಯಗಳಿಂದ ನಡೆಸಲಾಗುತ್ತದೆ. ಇ-ಕಾಮರ್ಸ್ ಕಂಪನಿಗಳು ಮತ್ತು ಆಹಾರ ವಿತರಣಾ ಆಪರೇಟರ್‌ಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಬೈಕ್ ಆಹಾರ ಮತ್ತು ಇತರ ವಸ್ತುಗಳನ್ನು ವಿತರಣೆ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ. ಇನ್ನು ಸ್ಮಾರ್ಟ್ರಾನ್ ಟಿಬೈಕ್ ಫ್ಲೆಕ್ಸ್ ಬೈಕಿಗೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಮತ್ತು ಚಾಲನಾ ಪರವಾನಿಗೆಯ ಅಗತ್ಯವಿರುವುದಿಲ್ಲ. ಇನ್ನು ಈ ಎಲೆಕ್ಟ್ರಿಕ್ ಬೈಕಿನಲ್ಲಿ ಕೆಲವು ಸ್ಮಾರ್ಟ್ ಫೀಚರ್ ಗಳನ್ನು ಒಳಗೊಂಡಿದೆ.