ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ನವೀಕರಿಸಿದ ಸ್ಪೀಡ್ ಟ್ವಿನ್ ಬೈಕನ್ನು ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಿತ್ತು. ಇದೀಗ ಟ್ರಯಂಫ್ ಕಂಪನಿಯು ಸ್ಪೀಡ್ ಟ್ವಿನ್ ಬೈಕಿನ ಹೆಸರನ್ನು ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಿದೆ. ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಇದೀಗ ಹೆಚ್ಚಿನ ಕಾರ್ಯಕ್ಷಮತೆಯನ್ನು ಪಡೆಯುತ್ತದೆ, ಜೊತೆಗೆ ಚಾಸಿಸ್ ಮತ್ತು ಎಲೆಕ್ಟ್ರಾನಿಕ್ಸ್ ಸೂಟ್‌ಗೆ ನವೀಕರಣಗಳನ್ನು ಒಳಗೊಂಡಿದೆ. ಇನ್ನು ಈ ಬೈಕ್ ಹೊಸ ಕಾಸ್ಮೆಟಿಕ್ ಬದಲಾವಣೆಗಳಿವೆ, ಇನ್ನು ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕಿನಲ್ಲಿ 1,200 ಸಿಸಿ 'ಹೈ ಪವರ್' ಎಂಜಿನ್ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಇದರ ಹೊಸ ಬ್ಯಾಲೆನ್ಸರ್ ಶಾಫ್ಟ್, ಹೊಸ ಕ್ಯಾಮ್ ಪ್ರೊಫೈಲ್, ಪರಿಷ್ಕೃತ ಪೋರ್ಟ್ಸ್ ಮತ್ತು ಹೆಚ್ಚಿನ ಕಂಪರೇಷನ್ ಪಿಸ್ಟನ್‌ಗಳು ಈ ನವೀಕರಣಗಳನ್ನು ತಂದಿವೆ. ಟ್ರಯಂಫ್ ಸ್ಪೀಡ್ ಟ್ವಿನ್ ಬೈಕಿನಲ್ಲಿ ನೀಡಿರುವ 1,200 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ 7,250 ಆರ್‌ಪಿಎಂನಲ್ಲಿ 99 ಬಿಹೆಚ್‌ಪಿ ಮತ್ತು 4,250 ಆರ್‌ಪಿಎಂನಲ್ಲಿ 112 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

2021ರ ಟ್ರಯಂಫ್ ಸ್ಪೀಡ್ ಟ್ವಿನ್‌ನ ಒಟ್ಟಾರೆ ಸಿಲೂಯೆಟ್ ಒಂದೇ ಆಗಿರುತ್ತದೆ, ಆದರೆ ಕೆಲವು ವಿಶಿಷ್ಟವಾದ ಬದಲಾವಣೆಗಳಿವೆ, ಹೆಚ್ಚು ಪ್ರೀಮಿಯಂ ಶೈಲಿಯನ್ನು ಮತ್ತು ವಿವರಗಳನ್ನು ಒಳಗೊಂಡಿದೆ. ಈ ಬೈಕ್ 14.5 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಸ ಗ್ರಾಫಿಕ್ಸ್ ಪಡೆಯುತ್ತದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಈ ಹೊಸ ಬೈಕಿನಲ್ಲಿ ಹೊಸ ಹೆಡ್‌ಲ್ಯಾಂಪ್, ಸೈಲೆನ್ಸರ್‌ಗಳು ಬ್ರಷ್ಡ್ ಅಲ್ಯೂಮಿನಿಯಂ ಫಿನಿಶ್ ಪಡೆಯುತ್ತವೆ, ಇದರೊಂದಿಗೆ ಇತರ ಪ್ರೀಮಿಯಂ ಬಿಟ್‌ಗಳಲ್ಲಿ ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಸ್ಪಷ್ಟ ಆನೊಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಸೇರಿವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಇನ್ನು ಹೊಸ ಟ್ರಯಂಫ್ ಸ್ಪೀಡ್ ಟ್ವಿನ್‌ ಬೈಕಿನ ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳು ಹೊಸ ಮೌಂಟಡ್ ಗಳನ್ನು ಪಡೆಯುತ್ತವೆ, ಇದರ ಹೀಲ್ ಗಾರ್ಡ್‌ಗಳ ಜೊತೆಗೆ ಅಲ್ಯೂಮಿನಿಯಂ ಫಿನಿಷ್ಡ್ ಬ್ರಷ್ ಮಾಡುತ್ತವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಈ ಹೊಸ ಬೈಕಿನಲ್ಲಿ ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಪಡೆಯುತ್ತದೆ, ಇನ್ನು ಇದರಲ್ಲಿ ಥ್ರೊಟಲ್ ರೆಸ್ಪಾನ್ಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳೆರಡನ್ನೂ ಸವಾರರ ಆದ್ಯತೆಗೆ ಸರಿಹೊಂದಿಸುತ್ತದೆ. ಬೈಕ್ ಚಲಿಸುವಾಗ ರೈಡಿಂಗ್ ಮೋಡ್ ಗಳನ್ನು ಬದಲಾಯಿಸಬಹುದಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಇನ್ನು ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್‌ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಾರ್ಟ್ರಿಡ್ಜ್ ಡ್ಯಾಂಪಿಂಗ್‌ನೊಂದಿಗೆ 43 ಎಂಎಂ ಮಾರ್ಜೋಚಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡಡ್ ಟ್ವಿನ್ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್

ಇನ್ನು ಪ್ರಮುಖವಾಗಿ ಈ ಹೊಸ ಬೈಕಿನ ಬ್ರೇಕಿಂಪಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬ್ರೆಂಬೊ ಫೋರ್-ಪಿಸ್ಟನ್ ಎಂ 50 ರೇಡಿಯಲ್ ಮೊನೊಬ್ಲೋಕ್ ಕ್ಯಾಲಿಪರ್‌ಗಳು ಟ್ವಿನ್ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಹೊಂದಿರುವ ನಿಸ್ಸಿನ್ ಎರಡು-ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಹೊಂದಿದೆ. ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಶೀಘ್ರದಲ್ಲೇ ಬಾರತದಲ್ಲಿ ಬಿಡುಗಡೆಯಾಗಲಿದೆ.

More from DriveSpark

Article Published On: Friday, June 4, 2021, 20:30 [IST]
English summary
2021 Triumph Speed Twin Listed On Triumph India Website. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+