ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಕೊಯಮತ್ತೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಶ್ರೀವಾರು ಮೋಟಾರ್ಸ್(ಎಸ್‌ವಿಎಂ) ತನ್ನ ಪ್ರಾಣ ಎಂಬ ಹೈಸ್ಪೀಡ್ ಎಲೆಕ್ಟ್ರಿಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕಿನ ಆರಂಭಿಕ ಬೆಲೆಯು ರೂ.1.99 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಬಿಡುಗಡೆಗೊಂಡ ಹೊಸ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್ ಕ್ಲಾಸ್, ಗ್ರ್ಯಾಂಡ್ ಮತ್ತು ಎಲೈಟ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕಿನ ವಿತರಣೆಯನ್ನು ಈ ವರ್ಷದ ಮಾರ್ಚ್ ತಿಂಗಳಿನಿಂದ ಪ್ರಾರಂಭಿಸಬಹುದು. ಈ ಹೊಸ ಬೈಕಿಗೆ ಕಂಪನಿಯು ರೂ.25 ಸಾವಿರ ಮೌಲ್ಯದ ಎಸ್‌ವಿಎಂಸಿಎಸ್ಆರ್ ಗ್ರೀನ್ ಕ್ರೆಡಿಟ್ ರಿಯಾಯಿತಿಯನ್ನು ನೀಡುತ್ತದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಕುತೂಹಲಕಾರಿ ವಿಷಯ ಅಂದರೆ ಈ ರಿಯಾಯಿತಿಯನ್ನು ಪಡೆಯಲು ಗ್ರಾಹಕರು ಹತ್ತು ಮರದ ಸಸಿಗಳನ್ನು ವಿವಿಧ ಸ್ಥಳಗಳಲ್ಲಿ ನೆಡಬೇಕು ಮತ್ತು ಅದಕ್ಕೆ ಅಗತ್ಯವಾದ ಪುರಾವೆಗಳನ್ನು ಕಂಪನಿಗೆ ಕಳುಹಿಸಬೇಕು. ನಂತರ ನೀವು ಈ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಇದರೊಂದಿಗೆ ಇವಿ ಸ್ಟಾರ್ಟ್ಅಪ್ ಎಸ್‌ವಿಎಂ ಕಂಪನಿ ತನ್ನ ಪ್ರಾಣ ಎಲೆಕ್ಟ್ರಿಕ್ ಬೈಕಿಗಾಗಿ ಆಕರ್ಷಕ ಇಎಂಐ ಆಫರ್ ಅನ್ನು ಘೋಷಿಸಿದೆ. ಇದು ತಿಂಗಳಿಗೆ ರೂ.5,200 ಗಳಾಗಿ ಕಟ್ಟಬಹುದು. ಇದು ಮೂರು ವರ್ಷಗಳ ನಂತರ ಎಲೆಕ್ಟ್ರಿಕ್ ಬೆಲ್ ಗಳಿಗೆ ಸೀಮಿತವಾಗಿರುತ್ತದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್ ಬಬ್ ಮೌಂಟೆಡ್ ಇಂಟೆಲಿಜೆಂಟ್ ಏರ್-ಕೂಲ್ಡ್ ಬಿಎಲ್‌ಡಿಸಿ ಮೋಟರ್ ಅನ್ನು ಹೊಂದಿದೆ. ಇದು 4.32 ಕಿ.ವ್ಯಾಟ್ ಅಥವಾ 7.2 ಕಿ.ವ್ಯಾಟ್ ಲಿಥಿಯುಂ ಐಯಾನ್ ಪ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಈ ಹೊಸ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕಿನ ಗ್ರ್ಯಾಂಡ್ ರೂಪಾಂತರವು ಪೂರ್ಣ ಪ್ರಮಾಣದ ಚಾರ್ಜ್ ಅದರೆ 126 ಕಿ.ಮೀ ಚಲಿಸುತ್ತದೆ. ಇನ್ನು ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್ ಕೇವಲ 4 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಈ ಹೊಸ ಎಲೆಕ್ಟ್ರಿಕ್ ಬೈಕಿನಲ್ಲಿ ಪ್ರಾಕ್ಟೀಸ್, ಡ್ರೈವ್, ಸ್ಪೋರ್ಟ್ಸ್ ಮತ್ತು ರಿವರ್ಸ್. ಪ್ರಾಕ್ಟೀಸ್ ಮೋಡ್ ಎಂಬ ನಾಲ್ಕು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಬೈಕ್ ಸ್ಟೀಲ್ ಡಬಲ್ ಕ್ರೆಡಲ್ ಟ್ಯೂಬ್ ಫ್ರೇಮ್ ಅನ್ನು ಆಧರಿಸಿದೆ. ಇನ್ನು ಈ ಪ್ರಾಣ ಎಲೆಕ್ಟ್ರಿಕ್ ಬೈಕ್ 165 ಕೆಜಿ ತೂಕವನ್ನು ಹೊಂದಿದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅಬ್ಸಾರ್ಬರ್ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಿದೆ.

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಎಸ್‌ವಿಎಂ ಅನ್ನು ತಮಿಳುನಾಡಿನ ಹೂಡಿಕೆದಾರ ಸಮುದಾಯವು ಖಾಸಗಿಯಾಗಿ ಧನಸಹಾಯ ನೀಡುತ್ತಿದೆ ಮತ್ತು ದೀರ್ಘಕಾಲೀನ ಗ್ರಾಹಕ ಸಂಬಂಧಗಳಿಗಾಗಿ ಗುಣಮಟ್ಟದ ಮಾದರಿಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿರುವ ಜನರಿಂದ ಆಯ್ದ ಹೂಡಿಕೆಗಳನ್ನು ಪಡೆದುಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ

ಬಿಡುಗಡೆಯಾಯ್ತು 126 ಕಿ.ಮೀ ಮೈಲೇಜ್ ನೀಡುವ ಎಸ್‌ವಿಎಂ ಪ್ರಾಣ ಎಲೆಕ್ಟ್ರಿಕ್ ಬೈಕ್

ಎಸ್‌ವಿಎಂ ಕಂಪನಿಯ ಕೇಂದ್ರ ಕಛೇರಿಯು ಕೊಯಮತ್ತೂರಿನಲ್ಲಿದೆ. ಇನ್ನು ಮಧುರೈ, ತಿರುಪುರ್, ತಿರುಚ್ಚಿ, ಬೆಂಗಳೂರು, ಪಾಂಡಿಚೆರಿ ಮತ್ತು ದಿಂಡಿಗುಲ್ ನಗರಗಳಲ್ಲಿಯು ಹೊಸ ಕೇಂದ್ರಗಳು ಬರಲಿವೆ. ಸ್ಟಾರ್ಟ್ಅಪ್ ಎಸ್‌ವಿಎಂ ಕಂಪನಿಯು ಭಾರತದಲ್ಲಿ ತನ್ನ ಹೆಜ್ಜೆಗುರುತನ್ನು ಚೆನ್ನೈ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಇತರ ಸ್ಥಳಗಳಿಗೆ ವಿಸ್ತರಿಸಲಿದೆ.

Most Read Articles

Kannada
English summary
SVM Prana Electric Motorcycle Launched. Read In Kannada.
Story first published: Wednesday, January 27, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X