ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಭಾರತದಲ್ಲಿ ರೆಟ್ರೋ ಶೈಲಿಯ ಮಾರ್ಡನ್ ಕ್ಲಾಸಿನ್ ಬೈಕ್ ಎಂದಾಗ ನಮ್ಮ ಮನಸ್ಸಿಗೆ ಮೊದಲು ಬರುವುದು ರಾಯಲ್ ಎನ್‌ಫೀಲ್ಡ್ ಮತ್ತು ಜಾವಾ ಬೈಕ್‌ಗಳು. ಆದರೆ ಇಂದು ಹಲವಾರು ದ್ವಿಚಕ್ರ ತಯಾರಕ ಕಂಪನಿಗಳು ರೆಟ್ರೋ ಶೈಲಿಯ ಬೈಕ್‌ಗಳನ್ನು ಉತ್ಪಾದಿಸಲಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಇದೀಗ ಯಮಹಾ ಕಂಪನಿಯು ತನ್ನ ಎಕ್ಸ್‌ಎಸ್‌ಆರ್ 250 ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇದರ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹುರಂಗಪಡಿಸಿದೆ. ಆದರೆ ಇದು ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್ ಎಂಬುವುದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಇದರ ವಿನ್ಯಾಸವನ್ನು ನೋಡಿ ಇದು ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಬೈಕಿನಲ್ಲಿ ಯಾವುದೇ ಬ್ರ್ಯಾಂಡಿಂಗ್ ಕಂಡುಬಂದಿಲ್ಲ. ಇದರ ಸಿಲೂಯೆಟ್ ಎಕ್ಸ್‌ಎಸ್‌ಆರ್ 250 ಮೂಲಮಾದರಿಯ ಚಿತ್ರಗಳಿಗೆ ಹೋಲುತ್ತದೆ. ಇದು 2019 ರಲ್ಲಿ ಇಂಡೋನೇಷ್ಯಾದ ಆಟೋ ನಿಯತಕಾಲಿಕದಲ್ಲಿ ಕಾಣಿಸಿಕೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಹೊಸ ಯಮಹಾ ಎಕ್ಸ್‌ಎಸ್‌ಆರ್ 250 ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಏರ್/ಆಯಿಲ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 20.5 ಬಿಹೆಚ್‌ಪಿ ಪವರ್ ಮತ್ತು 20 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಬಹುದು. ನಿಯೋ ರೆಟ್ರೊ ರೋಡ್ಸ್ಟರ್ ಶೈಲಿಯೊಂದಿಗೆ ಈ ಬೈಕ್ ಉತ್ತಮ ಕಾರ್ಯಕ್ಷಮತೆಯ ಮಾದರಿಯಾಗಿ ಭಾರತದಲ್ಲಿ ಪರಿಚಯಿಸಬಹುದು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕಿನಲ್ಲಿ ನೇರವಾದ ಹ್ಯಾಂಡಲ್‌ಬಾರ್‌ಗಳು, ದೊಡ್ಡ ಇಂಧನ ಟ್ಯಾಂಕ್, ಆರಾಮವಾಗಿರುವ ಫುಟ್‌ಪೆಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಇನ್ನು ಯಮಹಾ ಎಕ್ಸ್‌ಎಸ್‌ಆರ್ 250 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಇನ್ನು ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿಲ್ಲ. ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್ ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಭಾರತದಲ್ಲಿ ಯಮಹಾ ಎಫ್‍‍ಜೆಡ್25 ಗಿಂತ ಮೇಲಿನ ಸ್ಥಾನದಲ್ಲಿ ಈ ಹೊಸ ರೈಟ್ರೋ ಶೈಲಿಯ ಬೈಕನ್ನು ಇರಿಸಬಹುದು. ಈ ಬೈಕನ್ನು ಅಂದಾಜು ಸುಮಾರು ರೂ.1.80 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಈ ಹೊಸ ಯಮಹಾ ಎಕ್ಸ್‌ಎಸ್‌ಆರ್ 250 ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ 250ಸಿಸಿ ವಿಭಾಗದ ಡೊಮಿನಾರ್ 250 ಮತ್ತು ಕೆಟಿಎಂ ಡ್ಯೂಕ್ 250 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಯಮಹಾ ಎಕ್ಸ್‌ಎಸ್‌ಆರ್ 250 ಬೈಕ್

ಇನ್ನು ರೈಟ್ರೋ ಶೈಲಿಯ ಬೈಕನ್ನು ಇಷ್ಟ ಪಡುವವರಿಗೆ ರಾಯಲ್ ಎನ್‌ಫೀಲ್ಡ್ 350 ಸಿಸಿ, ಜಾವಾ 42 ಮತ್ತು ಹೋಂಡಾ ಸಿಬಿ 350 ಬೈಕ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ಯಮಹಾ ಎಕ್ಸ್‌ಎಸ್‌ಆರ್ 250 ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಯಮಹಾ yamaha
English summary
Yamaha XSR 250 Spotted Testing In India For The First Time. Read In kannada.
Story first published: Tuesday, March 30, 2021, 16:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X