ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ!
ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2021ರ ಆರ್‍ಸಿ 390 ಸಂಪೂರ್ಣ ಫೇರ್ಡ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕಿನ ಹೊಸ ಸ್ಪೈ ಚಿತ್ರ ಇತ್ತೀಚೆಗೆ ಬಹಿರಂಗವಾಗಿತ್ತು.

ಈ ಹೊಸ ಕೆಟಿಎಂ ಆರ್‍ಸಿ 390 ಬೈಕ್ ಭಾರತದಲ್ಲಿ ಹಲವ್ಯ್ ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದ್ದಾರೆ. ಇದೀಗ ಆಯ್ದ ಡೀಲರುಗಳು ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕಿನ ಖರೀದಿಗಾಗಿ ಅನಧಿಕೃತ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.ಇತ್ತೀಚೆಗೆ ಬಹಿರಂಗವಾದಲ್ಲಿ ಹೊಸ ಸ್ಪೈ ಚಿತ್ರದಲ್ಲಿ ಬೈಕ್‌ನ ಸೈಡ್-ಪ್ರೊಫೈಲ್ ಅನ್ನು ಯಾವುದೇ ಮರೆಮಾಚುವಿಕೆ ಇಲ್ಲದೆ ಸ್ಪಷ್ಟವಾಗಿ ಕಾಣಬಹುದು. ಈ ಚಿತ್ರದಲ್ಲಿ ಕಂಡುಬರುವ ಮಾದರಿಯು ನ್ಯೂ ಜನರೇಷನ್ ಆರ್‍ಸಿ 390ಯ ಉತ್ಪಾದನೆಗೆ ಸಿದ್ದವಾಗಿರುವ ಮಾದರಿಯಾಗಿದೆ.

ಈ ಹೊಸ ಕೆಟಿಎಂ ಆರ್‍ಸಿ 390 ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಚಿತ್ರದಲ್ಲಿ ಹೊಸ ಕೆಟಿಎಂ ಆರ್‍ಸಿ 390 ಬೈಕಿನ ಬಾಡಿಗೆ ಹೋಲಿಸಿದರೆ ಟೈರ್ ಸಣ್ಣದಾಗಿ ಕಾಣುತ್ತದೆ. ಹೊಸ ಮಾದರಿಯು ಹೆಚ್ಚು ಸಾಂಪ್ರದಾಯಿಕ ಸ್ಪ್ಲಿಟ್ ಸೀಟ್ ವಿನ್ಯಾಸವನ್ನು ಪಡೆಯುತ್ತದೆ, ಜೊತೆಗೆ ಸ್ಪ್ಲಿಟ್ ಪಿಲಿಯನ್ ಗ್ರ್ಯಾಬ್ ರೈಲ್ ಎಲ್ಇಡಿ ಟೈಲೈಟ್ ಹೊಸ ವಿನ್ಯಾಸವನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಕೆಟಿಎಂ ಡ್ಯೂಕ್ ಸರಣಿಯಂತೆಯೇ ನ್ಯೂ ಜನರೇಷ ಆರ್‍ಸಿ ಮಾದರಿಯು ಹಿಂಭಾಗದ ವಿಭಾಗಕ್ಕೆ ಬೋಲ್ಟ್-ಆನ್ ಸಬ್‌ಫ್ರೇಮ್ ಅನ್ನು ಪಡೆಯುತ್ತದೆ. ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕ್ ಹ್ಯಾಂಡಲ್‌ಬಾರ್‌ಗಳು ತುಂಬಾ ಲೋ-ಸೆಟ್ ಆಗಿ ಕಾಣುತ್ತಿಲ್ಲ,

ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕಿನ ಮೆಕ್ಯಾನಿಕಲ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಇದರಲ್ಲಿ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ 43 ಬಿಹೆಚ್‍ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ ಆರ್‍ಸಿ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್ ಮತ್ತು ಎರಡು ಕಡೆಯಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ.

ಈ ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಬಹುದು. ಹೊಸ ಕೆಟಿಎಂ ಆರ್‍ಸಿ 390 ಬೈಕ್ ಹೆಚ್ಚು ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕೆಟಿಎಂ ಆರ್‍ಸಿ 390 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ಸಮರ್ಥ ಟ್ರ್ಯಾಕ್-ಬೇಸ್ಡ್ ಬೈಕ್ ಆಗಿದೆ. ನ್ಯೂ ಜನರೇಷನ್ ಕೆಟಿಎಂ ಆರ್‍ಸಿ 390 ಬೈಕ್ ವಿನ್ಯಾಸದಲ್ಲಿ ಹಲವು ಬದಲಾವಣೆಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಬಿಡುಗಡೆಯಾಗಲಿದೆ.

ಹೊಸ ಕೆಟಿಎಂ ಆರ್‍ಸಿ 390 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿವಿಎಸ್ ಅಪಾಚೆ ಆರ್‌ಆರ್ 310 ಮತ್ತು ಕವಾಸಕಿ ನಿಂಜಾ 300 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಬಹುನಿರೀಕ್ಷಿತ 2021ರ ಕೆಟಿಎಂ ಆರ್‍ಸಿ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








